ಬೆಳ್ಳೂರು ಶಾಲಾ ಪ್ರವೇಶೋತ್ಸವ
ಮುಳ್ಳೇರಿಯ:ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಒಂದನೇ ತರಗತಿಗೆ ಸೇರ್ಪಡೆಗೊಂಡ ವಿದ್ಯಾಥರ್ಿಗಳ ಪ್ರವೇಶೋತ್ಸವವನ್ನು ಪ್ರವೇಶೋತ್ಸವ ಮೆರವಣಿಗೆ ನಡೆಸುವುದರ ಮೂಲಕ ಆಚರಿಸಲಾಯಿತು.
ಸಭಾ ಕಾರ್ಯಕ್ರಮವನ್ನು ನಿವೃತ್ತ ಮುಖ್ಯೋಪಾಧ್ಯಾಯ ಮಹಾಲಿಂಗೇಶ್ವರ ಭಟ್ ಉದ್ಘಾಟಿಸಿ ಮಾತನಾಡಿ, ಮಕ್ಕಳ ಶ್ರೇಯೋಭಿವೃಧ್ಧಿಯಲ್ಲಿ ಹೆತ್ತವರ,ಅಧ್ಯಾಪಕರ,ಹಾಗೂ ಸಮಾಜಕ್ಕೆ ಸಮಾನ ಜವಾಬ್ದಾರಿ ಇದೆ.ಒಳ್ಳೆಯ ಗುಣ ನಡತೆಗಳನ್ನು ರೂಢಿಸಿಕೊಂಡು ಸಮಾಜ ಹಾಗೂ ದೇಶದ ಅಭಿವೃದ್ಧಿಗಾಗಿ ಕೈ ಜೋಡಿಸಿ.ಮುಂಬರುವ ವರ್ಷಗಳಲ್ಲಿ ಶಾಲಾ ಶಿಕ್ಷಣದ ಮೂಲಕ ವ್ಯಕ್ತಿತ್ವ ರೂಪಿಸಿ ಕೊಳ್ಳಲು ಕರೆ ನೀಡಿದರು.
ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಎನ್.ಎಚ್. ಮೊಹಮ್ಮದ್ ಅಧ್ಯಕ್ಷತೆ ವಹಿಸಿ ವಿದ್ಯಾಥರ್ಿಗಳಿಗೆ ಶುಭ ಹಾರೈಸಿದರು. ಗ್ರಾ.ಪಂ. ಪ್ರತಿನಿಧಿಗಳಾದ ಗೀತಾ, ಜಯಕುಮಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶಾಲೆಯ ಉತ್ತಮ ಪಲಿತಾಂಶಕ್ಕೆ ಅಭಿನಂದನೆ ವ್ಯಕ್ತಪಡಿಸಿದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಅಬ್ಬಾಸ್ ಅಲಿ, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಶಶಿಧರ ಗೋಳಿಕಟ್ಟೆ, ಹಿರಿಯ ಅಧ್ಯಾಪಕ ಕುಞಿರಾಮ ಮಣಿಯಾಣಿ ಶುಭಾಶಂಸನೆಗೈದರು. ವಿದ್ಯಾಥರ್ಿಗಳಿಗೆ ಕಲಿಕೋಪಕರಣ ಹಾಗೂ ಸಿಹಿತಿಂಡಿ ವಿತರಿಸಲಾಯಿತು. ಅಧ್ಯಾಪಕ ದಾಸಪ್ಪ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕಿ ವಾರಿಜಾ ನೇರೋಳು ಸ್ವಾಗತಿಸಿ ಅಧ್ಯಾಪಕ ಪದ್ಮನಾಭನ್ ವಂದಿಸಿದರು. ಬೆಳ್ಳೂರು ಶಾಲೆಯಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ 96 ದಾಖಲಾತಿ ಇದ್ದು ಈ ವರ್ಷ ಅದು 130 ಕ್ಕೆ ಏರಿದೆ ಎಂದು ಶಾಲಾ ಅಧಿಕ್ರತರು ತಿಳಿಸಿದ್ದಾರೆ.