ಬದಿಯಡ್ಕದಲ್ಲಿ ರಂಜಿಸಿದ ಬಹುಭಾಷಾ ಕಾವ್ಯಧಾರೆ
ಬದಿಯಡ್ಕ: ಹುಟ್ಟಿನಿಂದಲೇ ಯಾರು ಸಾಹಿತಿಗಳಾಗಿ ಗುರುತಿಸಿಕೊಂಡಿದ್ದಿಲ್ಲ. ಆದರೆ ಪರಿಸರ ಹಾಗೂ ಪರಿಸ್ಥಿತಿಯನ್ನು ಅರಿತವ ತನ್ನ ಜ್ಞಾನವನ್ನು ಸಾಹಿತ್ಯದ ಮೂಲಕ ಸೃಷ್ಠಿಸಿ ಸಮಾಜಕ್ಕೆ ಸಮಪರ್ಿಸಲು ಸಾಧ್ಯ. ಅಂತಹ ಕಾರ್ಯಕ್ಕೆ ಸಾಹಿತ್ಯಸಕ್ತರನ್ನು ಪ್ರೋತ್ಸಾಹಿಸುವ ಅಗತ್ಯ ಇದೆ ಎಂದು ಹವ್ಯಾಸಿ ಅರ್ಥಧಾರಿ, ಸಂಘಟಕ, ದಸ್ತಾವೇಜು ಬರಹಗಾರ ಕರಿಂಬಿಲ ಲಕ್ಷ್ಮಣ ಪ್ರಭು ತಿಳಿಸಿದರು.
ವಿಶ್ವಕರ್ಮ ಸಾಹಿತ್ಯ ದರ್ಶನ ಕಾಸರಗೋಡು ಇದರ ಆಶ್ರಯದಲ್ಲಿ ಬದಿಯಡ್ಕದ ರಾಮ್ಲೀಲಾ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ "ಬಹುಭಾಷಾ ಕಾವ್ಯಧಾರೆ" ಎಂಬ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ವ್ಯಕ್ತಿ, ವ್ಯಕ್ತಿತ್ವ, ಸಮಾಜವನ್ನು ಬೆಳಕಿನ ಹಾದಿಯೆಡೆಗೆ ಕೊಂಡೊಯ್ಯುವ ಪ್ರಖರತೆಯ ಶಕ್ತಿ ಸಾಹಿತ್ಯಕ್ಕಿದ್ದು, ಸದಾಶಯದ ಕವಿತೆಗಳು ಹುಟ್ಟಬೇಕು ಎಂದು ಅವರು ತಿಳಿಸಿದರು. ವಿಶ್ವಕರ್ಮ ಸಾಹಿತ್ಯ ದರ್ಶನದ ಕಾರ್ಯ ಶ್ಲಾಘನೀಯ.ಇನ್ನಷ್ಟು ಪ್ರಯತ್ನಗಳಾಗಲಿ ಎಂದು ಅವರು ತಿಳಿಸಿದರು.
ಹಿರಿಯ ಕವಿ,ಪತ್ರಕರ್ತ ರಾಧಕೃಷ್ಣ ಉಳಿಯತ್ತಡ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಧ್ವನಿಸುವ ಗುಣವುಳ್ಳ ಕಾವ್ಯವನ್ನು ವೈವಿಧ್ಯಮಯ ಕಾರ್ಯಕ್ರಮದ ಮೂಲಕ ಪರಿಚಯಿಸುತ್ತಿರುವುದರಿಂದ ಈ ಬಹುಭಾಷಾ ಕವಿಗೋಷ್ಠಿಯಲ್ಲಿ ಬಹುಜನರ ಬೇರೆ ಬೇರೆ ಕಾವ್ಯತ್ಮಕ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯವಾಯಿತು ಎಂದರು.
ಪೂವರಿ ತುಳು ಮಾಸ ಪತ್ರಿಕೆಯ ಸಂಪಾದಕ ವಿಜಯ ಕುಮಾರ್ ಭಂಡಾರಿ ಹೆಬ್ಬಾರಬೈಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಪುತ್ತೂರು ಸಾಹಿತ್ಯ ವೇದಿಕೆಯ ಅಧ್ಯಕ್ಷ ಕೆ.ಗೋಪಾಲಕೃಷ್ಣ ಭಟ್ ಬಹುಭಾಷಾ ಕಾವ್ಯಧಾರೆಗೆ ಕವನ ವಾಚನದ ಮೂಲಕ ಚಾಲನೆ ನೀಡಿದರು. ಡಾ.ಸುರೇಶ್ ನೆಗಳಗುಳಿ,ಶಾಂತಾರವಿ ಕುಂಟಿನಿ,ರಾಮಕೃಷ್ಣ ಸವಣೂರು,ಚೇತನಾ ಕುಂಬಳೆ,ಶ್ವೇತಾ ಕಜೆ,ಮಣಿರಾಜ್ ವಾಂತಿಚ್ಚಾಲ್,ದಯಾನಂದ ರೈ ಕಳ್ವಾಜೆ,ಪ್ರಭಾವತಿ ಕೆದಿಲಾಯ ಪುಂಡೂರು,ಶ್ಯಾಮಲ ರವಿರಾಜ್ ಕುಂಬಳೆ, ಜ್ಯೋತ್ಸ್ನಾ ಕಡಂದೇಲು, ಪದ್ಮಾವತಿ ಏದಾರ್,ಶ್ಯಾಮಲ ಕಾಡಮನೆ,ಮಾ.ಸತ್ಯಾತ್ಮ ಭಟ್,ಮೌನೇಶ್ ಆಚಾರ್ಯ ಕಡಂಬಾರು,ಲತಾ ಆಚಾರ್ಯ ಬನಾರಿ ಮೊದಲಾದವರು ಬಹುಭಾಷೆಯ ಸ್ವರಚಿತ ಕವನವನ್ನು ವಾಚನಗೈದರು.
ವರ್ಷಧಾರೆಯ ಆರ್ಭಟದ ನಡುವೆಯೂ ವಿವಿಧ ಕವಿಗಳ ವೈವಿಧ್ಯಮಯ ಭಾವನೆಯ ಸೃಷ್ಠಿಯಿಂದ ಕಾವ್ಯಧಾರೆಯಾಗಿ ಅಬ್ಬರಿಸಿ ನೆರೆದ ಸಾಹಿತ್ಯಸಕ್ತರ ಮನ ಪುಳಕಗೊಳಿಸಿತು.