ಜಿಲ್ಲಾ ಕನ್ನಡ ಲೇಖಕರ ಸಂಘದಿಂದ ಸಾಹಿತ್ಯ ಸಂವಾದ
ಬದಿಯಡ್ಕ: ಇತ್ತೀಚಿಗೆ ಪ್ರಕಟವಾದ ಕಾಸರಗೋಡಿನ ಬರೆಹಗಾರರ ನಾಲ್ಕು ಕೃತಿಗಳ ಕುರಿತು ಪುಸ್ತಕ ಪರಿಚಯ, ಓದಿನ ಅನುಭವ ಮತ್ತು ಬರೆಹಗಾರರ ಅನಿಸಿಕೆಗಳ ನಿರೂಪಣೆ ಒಳಗೊಂಡಂತೆ ಸಾಹಿತ್ಯ ಸಂವಾದ ಬದಿಯಡ್ಕ ನಿರಂತರ ಕಲಿಕಾ ಕೇಂದ್ರದಲ್ಲಿ ಶನಿವಾರ ಸಂಪನ್ನಗೊಂಡಿತು.
ಕಾಸರಗೋಡಿನ ಲೇಖಕರಿಂದ ಪ್ರಕಟವಾದ ಬೆರಳೆಣಿಕೆಯಷ್ಟು ಪ್ರವಾಸ ಕಥನಗಳಲ್ಲಿ ಇತ್ತೀಚಿಗೆ ಗಮನ ಸೆಳೆದ ರಾಜಗೋಪಾಲ ಪುಣ್ಚಿತ್ತಾಯರ "ಅಮೆರಿಕ ಪ್ರವಾಸ ಕಥನ"
ಕೃತಿಯನ್ನು ದಿವ್ಯಗಂಗಾ ಪರಿಚಯಿಸುತ್ತ "ಉತ್ಪ್ರೇಕ್ಷೆ, ಸಂಭ್ರಮ,ಅತಿ ವರ್ಣನೆಗಳಿಲ್ಲದೆ ಸಾಮಾನ್ಯ ವ್ಯಕ್ತಿಯೊಬ್ಬನಿಗೆ ತಾನು ತುಳಿದೇ ಇಲ್ಲದ ನೆಲದಲ್ಲಿ ಸುಖ ಪ್ರವಾಸದ ಅನುಭವ ಕಟ್ಟಿ ಕೊಡುವ ಸರಳ ಶೈಲಿಯ ಶ್ರೀಮಂತ ಕೃತಿ ಎಂಬುದಾಗಿ ವಿಶ್ಲೇಸಿದರು.
ಹಂಪಿ ವಿವಿಯ ಡಾ.ವರದರಾಜ ಚಂದ್ರಗಿರಿ ಸಂಪಾದಿಸಿದ ಪೆರಡಾಲ ಕೃಷ್ಣಯ್ಯ ಸಮಗ್ರ ಸಾಹಿತ್ಯ ಸಂಪುಟದ ವಿನ್ಯಾಸ ಒಳತಿರುಳು,ಅದು ಬರೆಯಲ್ಪಟ್ಟ ಕಾಲ,ಕೃಷ್ಣಯ್ಯ ಅವರ ಅದಮ್ಯ ನಾಡಪ್ರೇಮ,ಕಾಸರಗೋಡು ಕೇರಳದ ಪಾಲಾದಾಗಿನ ನೋವು,ಸಂಕಟ ಮುಂತಾದ ವಿಷಯಗಳ ಬಗ್ಗೆ ಡಾ.ಬೇ.ಸೀ. ಗೋಪಾಲಕೃಷ್ಣ ಭಟ್ ವಿವರಿಸಿದರು.
ಸುಜಿತ್ ಕುಮಾರ್ ಅವರು ಪದ್ಮಾವತಿ ಏದಾರು ಅವರ "ನೆಲದ ಬಿಕ್ಕಳಿಕೆ" ಎಂಬ ಕವನ ಸಂಕಲನದ ಶೈಲಿ ವಿಷಯ ವೈವಿಧ್ಯ ಮತ್ತು ಪಕ್ವ ಅಡಕ ಭಾಷಾ ಪ್ರಯೋಗದ ಕುರಿತು ಮಾತನಾಡಿದರು.
ಕನ್ನಡ ಸಾಹಿತ್ಯಕ್ಕೆ ವೈವಿಧ್ಯಮಯ ಕೊಡುಗೆ ನೀಡುತ್ತ ಬಂದಿರುವ ಪರಮೇಶ್ವರಿ ಲೋಕೇಶ್ವರ್ ಅವರ ತಡವಾಗಿ ಬಂದ ಲೋಕಗಾನ ಎಂಬ ಕವನ ಸಂಕಲನದ ಕುರಿತು ಬಾಲ ಮಧುರಕಾನನ ಅವರು ಮಾತನಾಡುತ್ತಾ ಭಾವಪುಷ್ಟವಾದ ಮತ್ತು ಗೇಯತೆಯಿಂದಲೂ ಗಮನ ಸೆಳೆಯುವ ಕವಿತೆಗಳನ್ನು ಪರಿಚಯಿಸಿದರು.
ಕನ್ನಡ ಲೇಖಕರ ಸಂಘದ ಕಾಯರ್ಾಧ್ಯಕ್ಷ ಪ್ರೊ.ಪಿ.ಎನ್.ಮೂಡಿತ್ತಾಯ ಅವರು ಕಾಸರಗೋಡಿನಲ್ಲಿ ಕನ್ನಡದ ಸ್ಥಿತಿ ಮತ್ತು ಭವಿಷ್ಯದ ಸವಾಲುಗಳ ಬಗ್ಗೆ ಮಾತನಾಡಿದನು.
ಲೇಖಕರಾದ ರಾಜಗೋಪಾಲ ಪುಣ್ಚಿತ್ತಾಯ ಹಾಗೂ ಪದ್ಮಾವತಿ ಏದಾರು ಕೃತಿರಚನೆಗೆ ಸಿಕ್ಕಿದ ಪ್ರೇರಣೆ ಮತ್ತು ಪ್ರೋತ್ಸಾಹಗಳ ಬಗ್ಗೆ ಮಾತನಾಡಿದರು. ಕವಯಿತ್ರಿ ಶ್ಯಾಮಲಾ ರವಿರಾಜ್ ಮತ್ತು ಬಾಲಕೃಷ್ಣ ಬೇರಿಕೆ ಹಾಡುವುದರ ಮೂಲಕ ಕವಿತೆಗಳ ಅಂತಃಸತ್ವವನ್ನು ಉಣಬಡಿಸಿದರು. ಜ್ಯೋತ್ಸ್ನಾ ಕಡಂದೇಲು, ಡಾ.ರಾಧಾಕೃಷ್ಣ ಬೆಳ್ಳೂರು ,ವಿಜಯ ಲಕ್ಷ್ಮೀ ಶಾನುಭೋಗ್, ಸುಕುಮಾರ ಆಲಂಪಾಡಿ ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡರು.
ಸುಂದರ ಬಾರಡ್ಕ ಸ್ವಾಗತಿಸಿದರು. ಈ ಸಂದರ್ಭ ರಮಾನಂದ ಬನಾರಿ ಅವರು ಕೊಡುವ ಪುಸ್ತಕ ಬಹುಮಾನವನ್ನು ಮಣಿರಾಜ ವಾಂತಿಚ್ಚಾಲು ಅವರ "ಮನದ ಮುಗಿಲ ಮಲ್ಲಿಗೆ" ಎಂಬ ಕವನ ಸಂಕಲನಕ್ಕೆ ನೀಡಲಾಯಿತು.