ಮಲಯಾಳ ಕಲಿಕೆ ಕಡ್ಡಾಯ ಹಿಂತೆಗೆಯುವಂತೆ ಡಿ.ಡಿ.ಇ.ಗೆ ಮನವಿ
ಕಾಸರಗೋಡು: ಒಂದನೇ ತರಗತಿಯಿಂದ ಮಲಯಾಳ ಕಲಿಕೆ ಕಡ್ಡಾಯದ ರಾಜ್ಯ ಸರಕಾರದ ಆದೇಶದಿಂದ ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡಿಗೆ ರಿಯಾಯಿತಿ ನೀಡಬೇಕೆಂದು ಆಗ್ರಹಿಸಿ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಕಾಸರಗೋಡು ಡಿ.ಡಿ.ಇ. ಡಾ.ಗಿರೀಶ್ ಚೋಲಯಿಲ್ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿಗೆ ಸ್ಪಂದಿಸಿದ ಡಿ.ಡಿ.ಇ. ಡಾ.ಗಿರೀಶ್ ಚೋಲಯಿಲ್ ಅವರು ಮನವಿಯನ್ನು ಕೇರಳ ಸರಕಾರಕ್ಕೆ ಮತ್ತು ಸಂಬಂಧಟ್ಟ ವರಿಷ್ಠ ಅಧಿಕಾರಿಗಳಿಗೆ ಕಳುಹಿಸುವುದಾಗಿ ಭರವಸೆ ನೀಡಿದರು. ಈ ವರೆಗೂ ಕೇರಳ ಸರಕಾರದಿಂದ ಮಲಯಾಳ ಕಲಿಕೆ ಕಡ್ಡಾಯಗೊಳಿಸಿದ ಆದೇಶ ಬಂದಿಲ್ಲ. ಆದರೆ ಸಾಮಾನ್ಯವಾಗಿ ಬರುವಂತೆ ಸರಕಾರದ ಭಾಷಾ ನೀತಿಯ ಸುತ್ತೋಲೆ ಬಂದಿದೆ. ಯಾವುದೇ ಕಾರಣಕ್ಕೂ ಬೆದರಿಕೆಯೊಡ್ಡಿ ಮಲಯಾಳ ಪುಸ್ತಕಗಳನ್ನು ಕೊಂಡೊಯ್ಯಬೇಕೆಂದು ಒತ್ತಡ ಹೇರುವುದಿಲ್ಲ ಎಂದು ಅವರು ಹೇಳಿದರು.
ಮಲಯಾಳ ಕಲಿಕೆ ಕಡ್ಡಾಯ ಹೇರುವುದರಿಂದ ಭಾಷಾ ಅಲ್ಪಸಂಖ್ಯಾತರಾದ ಕನ್ನಡಿಗರು ಅನುಭವಿಸುವ ಸಮಸ್ಯೆಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಲಾಯಿತು. ಸಂವಿಧಾನಬದ್ಧವಾಗಿ ಕಾಸರಗೋಡು ಭಾಷಾ ಅಲ್ಪಸಂಖ್ಯಾತ ಪ್ರದೇಶವಾಗಿದ್ದು ಈ ಪ್ರದೇಶದಲ್ಲಿ ಯಾವುದೇ ಭಾಷೆಯನ್ನು ಹೇರುವಂತಿಲ್ಲ ಎಂದು ಡಿಡಿಇಗೆ ಮಾಹಿತಿ ನೀಡಲಾಯಿತು. ಭಾಷಾ ಹೇರಿಕೆಯಿಂದ ಸಂವಿಧಾನಬದ್ಧವಾಗಿ ಭಾಷಾ ಅಲ್ಪಸಂಖ್ಯಾತರಿಗೆ ಕೊಡಮಾಡಲ್ಪಟ್ಟ ಹಕ್ಕು, ಸವಲತ್ತುಗಳು ನಷ್ಟವಾಗಲಿದೆ.
ಭಾಷಾ ಹೇರಿಕೆಯಿಂದ ಕೆಲವೇ ವರ್ಷಗಳಲ್ಲಿ ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿ ನಾಶವಾಗಲಿದೆ ಎಂದು ತಿಳಿಸಲಾಯಿತು. ಈ ಹಿನ್ನೆಲೆಯಲ್ಲಿ ಕಾಸರಗೋಡಿನಲ್ಲಿ ಮಲಯಾಳ ಕಲಿಕೆ ಕಡ್ಡಾಯಗೊಳಿಸಬಾರದೆಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಕನ್ನಡ ಹೋರಾಟ ಸಮಿತಿಯ ಪ್ರಧಾನ ಕಾರ್ಯದಶರ್ಿ ಭಾಸ್ಕರ ಕೆ, ಸಂಚಾಲಕ ಗುರುಪ್ರಸಾದ್ ಕೋಟೆಕಣಿ, ಸಂಚಾಲಕ ತಾರಾನಾಥ ಮಧೂರು, ಟಿ.ಶಂಕರನಾರಾಯಣ ಭಟ್, ಸತೀಶ್ ಮಾಸ್ಟರ್ ಕೂಡ್ಲು, ವಾಮನ ರಾವ್ ಬೇಕಲ್, ಜೋಗೇಂದ್ರನಾಥ ವಿದ್ಯಾನಗರ, ಮೊಹಮ್ಮದ್ ಅಜೀಜ್ ಮಣಿಮುಂಡ, ಸತ್ಯನಾರಾಯಣ ಕಾಸರಗೋಡು, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಆನಂದ ಸಿ.ಎಚ್. ಮೊದಲಾದವರ ನೇತೃತ್ವದಲ್ಲಿ ಡಿಡಿಇ ಡಾ.ಗಿರೀಶ್ ಚೋಲಯಿಲ್ ಅವರನ್ನು ಭೇಟಿಯಾಗಿ ಕನ್ನಡಿಗರನ್ನು ರಕ್ಷಿಸಬೇಕೆಂದು ಮನವಿ ಮಾಡಿದರು.