ರಂಗಸಿರಿ ಮರ, ಸುಂದರ ಪರಿಸರ
ಬದಿಯಡ್ಕ: ಸಾಂಸ್ಕೃತಿಕ ರಂಗದಲ್ಲಿ ಯಕ್ಷಗಾನ, ಸಂಗೀತಗಳ ಮೂಲಕ ಈಗಾಗಲೇ ಗುರುತಿಸಿಕೊಂಡಿರುವ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ವತಿಯಿಂದ ನಾಳಿನ ಸುಂದರ ಪರಿಸರಕ್ಕಾಗಿ "ರಂಗಸಿರಿ ಮರ, ಸುಂದರ ಪರಿಸರ" ಎಂಬ ಧ್ಯೇಯದೊಂದಿಗೆ ಹಣ್ಣಿನಮರಗಳ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆ ನಡೆಯಲಿದೆ.
ಜೂನ್ 5 ರಂದು ಮಂಗಳವಾರ ಸಂಜೆ 4ಗಂಟೆಗೆ ಬದಿಯಡ್ಕ ಗ್ರಾಮ ಪಂಚಾಯತು ಕಚೇರಿಯೆದುರು ಕಾರ್ಯಕ್ರಮ ನಡೆಯಲಿದೆ. ಪಂಚಾಯತು ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಪ್ರೊ.ಎ. ಶ್ರೀನಾಥ್ ಶುಭಹಾರೈಸಿ, ಗಿಡನೆಡಲು ಸಹಕರಿಸಲಿದ್ದಾರೆ. ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಸದಸ್ಯರು, ವಿದ್ಯಾಥರ್ಿಗಳು, ಸಮಾಜದ ಗಣ್ಯರು, ಕಲೆ ಸಂಸ್ಕೃತಿ ಪ್ರಿಯರು ಒಟ್ಟಾಗಿ ಪಂಚಾಯತು ಹಾಗೂ ನವಜೀವನ ಶಾಲಾಪರಿಸರದಲ್ಲಿ ಗಿಡಗಳನ್ನು ನೆಡಲಿದ್ದಾರೆ. ಆಸಕ್ತ ಸಾರ್ವಜನಿಕರೂ ಗಿಡಗಳೊಂದಿಗೆ ಬಂದು ನೆಟ್ಟು, ಸಮಾಜಕ್ಕೆ ನೆರಳು ನೀಡುವ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೋರಲಾಗಿದೆ. ಹೊಂಡ ತೆಗೆಯಲು ಪರಿಕರಗಳನ್ನು ಒದಗಿಸಲಾಗುವುದು. ನೆಟ್ಟಗಿಡಗಳ ಪೋಷಣೆಯನ್ನೂ ಬರುವ ಒಂದು ವರ್ಷಗಳ ಕಾಲ ರಂಗಸಿರಿಯ ಸದಸ್ಯರು, ವಿದ್ಯಾಥರ್ಿಗಳು ಮಾಡಲಿದ್ದಾರೆ.