HEALTH TIPS

No title

                'ಅಮ್ಮ'ನ ವಿರುದ್ಧ ತಿರುಗಿಬಿದ್ದ ಮಲಯಾಳಂ ನಟಿಯರು
    ತಿರುವನಂತಪುರ: ಒಂದೆಡೆ ಮಲೆಯಾಳಂ ಚಲನಚಿತ್ರಗಳು ಜನರನ್ನು ಹೆಚ್ಚೆಚ್ಚು ಆಕಷರ್ಿಸುತ್ತಿದ್ದರೆ, ನಟ-ನಟಿಯರ ಆಂತರಂಗಿಕ ಕಲಹ ಇದೀಗ ಮುಗಿಲುಮುಟ್ಟುವ ಹಂತದಲ್ಲಿದೆ. ಇದೀಗ ಮಲಯಾಳಂ ಚಿತ್ರರಂಗದಲ್ಲಿ ಮತ್ತೊಂದು ವಿವಾದ ತಲೆಯೆತ್ತಿದ್ದು, 'ಅಪಹರಣ ಮತ್ತು ಅತ್ಯಾಚಾರ' ಪ್ರಕರಣದ ಸಂತ್ರಸ್ತ ನಟಿ ಸೇರಿದಂತೆ ನಾಲ್ಕು ಮಂದಿ ನಟಿಯರು ಮಲಯಾಳಂ ಸಿನಿಮಾ ಕಲಾವಿದರ ಸಂಘಕ್ಕೆ (ಅಮ್ಮ) ರಾಜೀನಾಮೆ ಸಲ್ಲಿಸಿದ್ದಾರೆ. ಅಪಹರಣ ಮತ್ತು ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ನಟ ದಿಲೀಪ್ರನ್ನು ಮತ್ತೆ 'ಅಮ್ಮ' ಬಳಗಕ್ಕೆ ಸೇರಿಸಿಕೊಂಡಿರುವುದನ್ನು ವಿರೋಧಿಸಿ ಮಹಿಳಾ ಕಲಾವಿದರು ರಾಜೀನಾಮೆ ಸಲ್ಲಿಸಿದ್ದಾರೆ.
   ನನಗೆ ಅವಕಾಶ ಕೊಡಲ್ಲ ಎಂದಿದ್ದ ಆ ನಟನ ವಿರುದ್ಧ ಹಲವಾರು ಸಲ ದೂರು ನೀಡಿದ್ದೇನೆ. ಆ ನಟನಿಂದ ನನಗೆ ಅತ್ಯಂತ ಕೆಟ್ಟ ಅನುಭವವಾದರೂ ಅಮ್ಮ ಯಾವುದೇ ಕ್ರಮಕೈಗೊಳ್ಳಲಿಲ್ಲ. ಆ ನಟನ ರಕ್ಷಣೆಗೆ ನಿಂತಿತು. ಇನ್ನು ಈ ಸಂಘಟನೆಯಲ್ಲಿ ಮುಂದುವರೆಯುವುದರಿಂದ ಯಾವ ಪ್ರಯೋಜನ ಇಲ್ಲ ಅನ್ನಿಸಿತು ಎಂದು ಫೇಸ್ಬುಕ್ನಲ್ಲಿ ನಟಿಯೊಬ್ಬರು ಬರೆದು ರಾಜೀನಾಮೆ ಸಲ್ಲಿಸಿರುವುದಾಗಿ ಘೋಷಿಸಿದ್ದಾರೆ. 
    ಸಂತ್ರಸ್ತ ತಾರೆಗೆ ಬೆಂಬಲ ನೀಡಿರುವ ಮಾಲಿವುಡ್ ನಟಿಯರಾದ ರಿಮಾ ಕಲ್ಲಿಂಗಲ್, ರೆಮ್ಯಾ ನಂಬೀಶನ್ ಮತ್ತು ನಿದರ್ೇಶಕಿ ಗೀಥು ಮೋಹನದಾಸ್ ಸಹ ರಾಜೀನಾಮೆ ನೀಡಿದ್ದಾರೆ. ಒಟ್ಟಾರೆ ಮ್ಮ ಸಂಘಟನೆಯ  ವಿರುದ್ಧ ಮಹಿಳಾ ನಟಿಯರು ತಿರುಗಿಬಿದ್ದಿದ್ದಾರೆ. ಅಲ್ಲಿ ಮಹಿಳೆಯರಿಗೆ ಯಾವುದೇ ಗೌರವ ಇಲ್ಲ. ಮುಂದಿನ ತಲೆಮಾರಿನ ನಟಿಯರಿಗೆ ಈ ರೀತಿ ಆಗಬಾರದು ಎಂಬ ಉದ್ದೇಶದಿಂದ ರಾಜೀನಾಮೆ ನೀಡುತ್ತಿದ್ದೇವೆ ಎಂದಿದ್ದಾರೆ.
   ವುಮೆನ್ ಇನ್ ಸಿನಿಮಾ ಕಲೆಕ್ಟೀವ್ ನಲ್ಲೂ ಕ್ರಿಯಾಶೀಲವಾಗಿರುವ ಈ ನಟಿಯರು ಅಮ್ಮಗೆ ರಾಜೀನಾಮೆ ನೀಡಿರುವುದು ಮಾಲಿವುಡ್ನಲ್ಲಿ ಚಚರ್ೆಯ ವಿಷಯವಾಗಿದೆ. ನಿಯಮಗಳನ್ನು ಯಾರು ಗಾಳಿಗೆ ತೂರುತ್ತಾರೋ ಅವರನ್ನು ಪ್ರಶ್ನಿಸುವ ಗೋಜಿಗೆ ಅಮ್ಮ ಹೋಗುತ್ತಿಲ್ಲ. ಅವರ ಬೇಜವಾಬ್ದಾರಿ ಧೋರಣೆಯನ್ನು ಖಂಡಿಸುತ್ತಿದ್ದು ಇದರ ವಿರುದ್ಧ ನಾವು ಹೋರಾಡುತ್ತೇೆವೆ ಎಂದಿರುವ ನಟಿಯರು ರಾಜೀನಾಮೆ ಸಲ್ಲಿಸಿದ್ದಾರೆ. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries