ಗತ ವೈಭವದ ಮುಸಲಧಾರೆ- ಪುತ್ತಿಗೆಯಲ್ಲಿ ಸೇತುವೆ ಮೇಲೆ ನೀರು-ಸಂಚಾರ ಸಮಸ್ಯೆ
ಬದಿಯಡ್ಕ: ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಅಲ್ಲಲ್ಲಿ ವ್ಯಾಪಕ ಪ್ರಮಾಣದ ಸಮಸ್ಯೆಗಳು ಸೃಷ್ಟಿಯಾಗುತ್ತಿದ್ದು, ಜನರು ಸಂಕಷ್ಟಕ್ಕೊಳಗಾಗುತ್ತಿದ್ದಾರೆ. ಈ ಬಾರಿಯ ಮುಂಗಾರು ದಶಕಗಳ ಹಿಂದಿನ ಮಳೆಗಾಲದ ವೈಭವವನ್ನು ನೆನಪಿಸುತ್ತಿದ್ದು, ಯುವ ತಲೆಮಾರು ಸೋಜಿಗದೊಂದಿಗೆ ನಿರಂತರ ಸುರಿಯುತ್ತಿರುವ ಮಳೆಗೆ ಹೈರಾಣರಾದಂತೆ ಕಂಡುಬಂದರು.
ಕುಂಬಳೆಯಿಂದ ಪುತ್ತಿಗೆ-ಏಳ್ಕಾನ ಮೂಲಕ ತೆರಳುವ ರಸ್ತೆಯ ಪುತ್ತಿಗೆ ಶ್ರೀಸುಬ್ರಾಯ ದೇವಸ್ಥಾನದ ಸಮೀಪದ ಸೇತುವೆಯ ಮೇಲೆ ಗುರುವಾರ ನೀರುಬಂದಿರುವುದರಿಂದ ವಾಹನ ಸಂಚಾರ ಮೊಟಕುಗೊಂಡಿತು. ಆ ದಾರಿಯಾಗಿ ಸಂಚರಿಸುವ ಬಸ್ ಸಹಿತ ಇತರ ವಾಹನಗಳು ಬೇರೆ ರಸ್ತೆಯ ಮೂಕ ಸಂಚರಿಸಿದವು.
ಕೆಲವು ವರ್ಷಗಳಿಂದ ಕುಸಿತ ಕಮಡಿದ್ದ ಮಳೆ ಪ್ರಸ್ತುತ ವರ್ಷ ಉತ್ತಮ ರೀತಿಯಲ್ಲಿ ಮಳೆಯಾಗಿರುವುದರಿಂದ ತೋಡು, ನದಿಗಳಲ್ಲಿ ಪ್ರವಾಹ ಸಾಗಲು ವ್ಯವಸ್ಥೆ ಇಲ್ಲದಿರುವುದರಿಂದ ನೀರು ಸೇತುವೆಯ ಮೇಲ್ಭಾಗದಲ್ಲಿ ಹರಿದಿದೆ. ಬಧವಾರ ರಾತ್ರಿಯೂ ಬಿರುಸಿನಿಂದ ಸುರಿದ ಮಳೆಯ ಕಾರಣ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಭತ್ತದ ಕೃಷಿಯ ಮೇಲೆ ಪ್ರತಿಕೂಲತೆಗೆ ಕಾರಣವಾಗಲಿದೆ.