HEALTH TIPS

No title

                 ಅಪಪ್ರಚಾರದ ಮೂಲಕ ಮಲೆಯಾಳ ಹೇರಿಕೆ ಯತ್ನ
       ಕನ್ನಡ ಮಾಧ್ಯಮ ಶಾಲೆಯಲ್ಲಿ ಮಲೆಯಾಳ ಹೇರಿಕೆ ಒತ್ತಾಯಿಸಿ ಪ್ರತಿಭಟನೆಗೆ ಯತ್ನ-ಕನ್ನಡ ಸಂಘಟನೆಗಳ ಖಂಡನೆ
    ಉಪ್ಪಳ: ಕಾಸರಗೊಡಿನ ಅಲ್ಪಸಂಖ್ಯಾತ ಕನ್ನಡಿಗರ ಸಾಂವಿಧಾನಿಕ ಹಕ್ಕಿನ ಕಸಿಯುವಿಕೆ ಮತ್ತು ಆ ಮೂಲಕ ಕಡ್ಡಾಯ ಮಲೆಯಾಳ ಭಾಷೆಯನ್ನು ಹೇರುವ ಯತ್ನಗಳು ವಿವಿಧ ಕೋನಗಳಿಂದ ನಡೆಯುತ್ತಿರುವುದು ಕಂಡುಬರುತ್ತಿದ್ದು, ಇದರ ಭಾಗವಾಗಿ ದಶಕಗಳ ಇತಿಹಾಸವಿರುವ ಕನ್ನಡ ಹೈಸ್ಕೂಲಿನಲ್ಲಿ ಮಲೆಯಾಳ ಮಾಧ್ಯಮವಿಲ್ಲವೆಂದು ಹುಯಿಲೆಬ್ಬಿಸಿ ಜೂ.26 ರಂದು ಮಂಗಳವಾರ ಪ್ರತಿಭಟನಾ ಜಾಥಾ ನಡೆಸಲು ತೀಮರ್ಾನಿಸಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
   ಪೈವಳಿಕೆ ಗ್ರಾ.ಪಂ. ವ್ಯಾಪ್ತಿಯ ಸರಕಾರಿ ಫ್ರೌಢಶಾಲೆ ಪೈವಳಿಕೆ-ಕಾಯರ್ಕಟ್ಟೆ 60 ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವಿರುವ ಕನ್ನಡ ಶಾಲೆಯಾಗಿದ್ದು, ಸಾವಿರಕ್ಕಿಂತಲೂ ಮಿಕ್ಕಿದ ವಿದ್ಯಾಥರ್ಿಗಳು ಪ್ರತಿವರ್ಷ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಪೂರೈಸುತ್ತಾರೆ.ಆದರೆ ಇದೀಗ ರಾಜ್ಯ ವ್ಯಾಪಕವಾಗಿ ಮಲೆಯಾಳೀಕರಣದ ಯತ್ನಗಳು ನಡೆಯುತ್ತಿರುವಾಗ ಗಡಿನಾಡಿನ ಕನ್ನಡ ಮಾಧ್ಯಮ ಶಾಲೆಗಳನ್ನು ಕೇಂದ್ರೀಕರಿಸಿ ಒಮದು ವಿಭಾಗ ಅಲ್ಲಿ ಮಲೆಯಾಳ ಮಾಧ್ಯಮವನ್ನು ಒತ್ತಾಯ-ಒತ್ತಡಪೂರ್ವಕವಾಗಿ ಹೇರುವ ಪ್ರಯತ್ನ ನಡೆಸುತ್ತಿದ್ದು, ಅದರ ಮೊದಲ ಯತ್ನವಾಗಿ "ಮಲೆಯಾಳ ಭಾಷಾ ಕ್ರಿಯಾ ಸಮಿತಿ" ಎಂಬ ಹೆಸರಲ್ಲಿ ಕನ್ನಡ ಹಕ್ಕನ್ನು ಹತ್ತಿಕ್ಕುವ ಯತ್ನವನ್ನು ಕಪೋಲಕಲ್ಪಿತ ಊಹಾಪೋಪಗಳನ್ನು ಹರಿಯಬಿಟ್ಟು, ತಪ್ಪು ವ್ಯಾಖ್ಯಾನಗಳ ಮೂಲಕ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದೆ. ಕ್ರಿಯಾ ಸಮಿತಿಯು ಈ ನಿಟ್ಟಿನಲ್ಲಿ ಜೂ.26 ರಂದು ಕಾಯರ್ಕಟ್ಟೆ ಶಾಲೆಗೆ ಪ್ರತಿಭಟನಾ ಮೆರವಣಿಗೆ ನಡೆಸಲೂ ತೀಮರ್ಾನಿಸಿದೆ.
   ತಮ್ಮ ಪ್ರತಿಭಟನೆಯ ಸೂಚಕವಾಗಿ ಕ್ರಿಯಾ ಸಮಿತಿ ಪ್ರಚುರಪಡಿಸುತ್ತಿರುವ ಸಂದೇಶಗಳು ವ್ಯಾಪಕ ತಪ್ಪು ಹಾಗೂ ನ್ಯಾಯೀಕರಿಸಲಾರದ ಮಾಹಿತಿಗಳಾಗಿದ್ದು, ಇದು ಗಡಿನಾಡು ಕಾಸರಗೋಡಿನ ಕನ್ನಡ ಭಾಷೆ, ಸಂಸ್ಕೃತಿಗಳ ಬಗ್ಗೆ ಹೊಸ ತಲೆಮಾರು ಗ್ರಹಿಸಿರುವ ತಿಳುವಳಿಕೆಯ ಸೂಚಕವಾಗಿ ಕಂಡುಬಂದಿದೆ.
   ಕ್ರಿಯಾ ಸಮಿತಿಯ ಪ್ರಚಾರ ಒಕ್ಕಣೆಯು ಇಲ್ಲಿಯ ಕನ್ನಡಿಗರು ಇಲ್ಲಿಯ ಮೂಲ ನಿವಾಸಿಗಳಲ್ಲ ಎಂಬ ರೀತಿಯಲ್ಲಿದ್ದು, ಮಲೆಯಾಳ ಕಲಿಯದಿದ್ದ ಕಾರಣ ಉದ್ಯೋಗ ವಂಚಿತರಾಗಿದ್ದಾರೆ. ಕನರ್ಾಟಕದಲ್ಲೂ ಉದ್ಯೋಗ ಲಭಿಸುವುದಿಲ್ಲ. ಕಾಸರಗೋಡು ಜಿಲ್ಲೆಯ ಯಾವುದೇ ಸರಕಾರಿ ಸಂಸ್ಥೆಗಳಲ್ಲಿ ಕನ್ನಡಿಗರಿಲ್ಲ.ಇದರಿಂದ ಇಲ್ಲಿಯ ಕನ್ನಡ-ತುಳು ಜನತೆಗೆ ಮಲೆಯಾಳಿ ಅಧಿಕಾರಿಗಳಲ್ಲಿ ವ್ಯವಹರಿಸಲಾಗುವುದಿಲ್ಲ. ಇದರಿಂದ ಸರಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು, ಇದರಿಂದ ಕಡ್ಡಾಯ ಮಲೆಯಾಳ ಕಲಿಯಲೇ ಬೇಕೆಂಬ ಒತ್ತಾಯದ ಭಯ ಮೂಡಿಸಲಾಗಿದೆ.
  ಕ್ರಿಯಾ ಸಮಿತಿಯು ಹೇಳಿರುವ ಕಾರಣಗಳು ಕಪೋಲಕಲ್ಪಿತ ಬಾಲಿಶ ಹೇಳಿಕೆಗಳಾಗಿದ್ದು, ಭಯ ಮತ್ತು ದಾರಿತಪ್ಪಿಸುವ ಹೇಳಿಕೆಗಳ ಮೂಲಕ ಹಕ್ಕುಚ್ಯುತಿಗೆ ಯತ್ನಿಸುತ್ತಿರುವುದು ಕನ್ನಡಿಗರನ್ನು ರೊಚ್ಚಿಗೆಬ್ಬಿಸಿದೆ. ಗಡಿನಾಡ ಕನ್ನಡಿಗರ ಸಾಂವಿಧಾನಿಕ ಹಕ್ಕುಗಳ ಬಗ್ಗೆ, ಇಲ್ಲಿಯ ಕನ್ನಡಿಗರು ಇಲ್ಲಿಯ ಮೂಲ ನಿವಾಸಿಗಳೆಂಬ ಬಗೆಗಾಗಲಿ ಅರಿವಿನ ಕೊರತೆಯಿಂದ ಮತ್ತು ಸುಳ್ಳು ಪ್ರಚಾರದ ಮೂಲಕ ಹತ್ತಿಕ್ಕುವ ಯತ್ನ ಖಂಡನಾರ್ಹವೆಂದು ಕನ್ನಡಪರ ಸಂಘಟನೆಗಳು ತಿಳಿಸಿವೆ.
     ಏನಂತಾರೆ:
   ಗಡಿನಾಡ ಕನ್ನಡಿಗರು ಮೂಲ ನಿವಾಸಿಗಳಾಗಿದ್ದು, ಸಂವಿಧಾನಬದ್ದ ಹಕ್ಕುಚ್ಯುತಿಗೆ ಅವಕಾಶ ನೀಡಲಾಗದು. ಮಲೆಯಾಳ ಕಲಿಯಬಾರದೆಂದು ಎಲ್ಲಿಯೂ ಕನ್ನಡಪರ ಸಂಘಟನೆಗಳು ಹೇಳಿಲ್ಲ. ಆದರೆ ಕಡ್ಡಾಯವಾಗಿ ಭಯಗೊಳಿಸಿ ಹೇರುವ ಯತ್ನ ಅಪರಾಧವಾಗಿದ್ದು, ಕಾಯರ್ಕಟ್ಟೆ ಪರಿಸರದ ಇತರ ಶಾಲೆಗಳಲ್ಲಿ ಮಲೆಯಾಳ ಮಾಧ್ಯಮವಿದ್ದು, ಆಸಕ್ತರು ಅಲ್ಲಿಗೆ ತೆರಳಿ ಮಲೆಯಾಳ ಕಲಿಯಬಹುದು. ಅದರ ಹೊರತು ಕನ್ನಡ ಮಾಧ್ಯಮ ಶಾಲೆಯನ್ನೇ ಕೇಂದ್ರೀಕರಿಸಿ ಮಾಡುತ್ತಿರುವ ಗೊಂದಲಗಳು ಪೂವರ್ಾಗ್ರಹ ಪೀಡಿತ.
                                  ನ್ಯಾಯವಾದಿ.ಮುರಳೀಧರ ಬಳ್ಳುಕುರಾಯ
                                  ಅಧ್ಯಕ್ಷರು ಕನರ್ಾಟಕ ಸಮಿತಿ.ಕಾಸರಗೋಡು.
    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries