ಶಾಲೆಯನ್ನು ಹಸಿರು ಪರಿಸರವಾಗುವಂತೆ ಮಾಡಿ
ಕುಂಬಳೆ: ಮಂಗಳವಾರ ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ ಗ್ರಾಮೋತ್ಥಾನ ಸಮಿತಿಯ ಸಹಕಾರ, ಸಹಾಯದಿಂದ ವಿಶ್ವಪರಿಸರ ದಿನಾಚರಣೆ ನಡೆಯಿತು. ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಆಗಮಿಸಿದ್ದ ಬ್ಲಾಕ್ ಪಂಚಾಯತಿ ಸದಸ್ಯ ಹಿಳ್ಳೆಮನೆ ಸತ್ಯಶಂಕರ ಭಟ್ ಮಾತನಾಡಿ, ಭೂ ತಾಯಿ ಹೆತ್ತತಾಯಿಗೆ ಸಮಾನ. ಆಕೆಯನ್ನು ಉಳಿಸಿ,ರಕ್ಷಿಸುವುದು ಎಲ್ಲರ ಹೊಣೆ. ಶಾಲೆಯನ್ನು ಹಸಿರು ಪರಿಸರವಾಗುವಂತೆ ಮಾಡಬೇಕು. ಜೊತೆಗೆ ಜಲಾಶಯಗಳನ್ನೂ ಶುದ್ಧವಾಗಿರಿಸಲು ಮಕ್ಕಳು ಚಿಕ್ಕಂದಿನಿಂದಲೇ ಕಲಿಯಬೇಕು,ಪರಿಸರ ನಾಶವಾಗುವ ಪ್ಲಾಸ್ಟಿಕ್ ವಗೈರೆ ಗಿಡಗಳಿಗೂ ನೀರಿನ ತಟಾಕಗಳಿಗೂ ಎಸೆಯಬಾರದು ಎಂದು ವಿದ್ಯಾಥರ್ಿಗಳಿಗೆ ಕಿವಿಮಾತು ಹೇಳಿದರು.
ಗ್ರಾಮೋತ್ಥಾನ ಸಮಿತಿಯ ಸಂಯೋಜಕ ಜೀವನ್ ಮಾತನಾಡಿ, ನೆಟ್ಟ ಗಿಡವನ್ನು ಪೋಶಿಸುವುದಲ್ಲದೆ ಅದಕ್ಕೆ ಒಂದೊಂದು ಹೆಸರುಕೊಟ್ಟು ಅದರೊಡನೆ ಗೆಳೆತನದಿಂದ ಮಾತನಾಡಬೇಕು. ಹಾಗೆಯೇ ಪ್ರತಿಯೊಂದು ಪ್ರಾಣಿ-ಪಕ್ಷಿಗಳೂ ಪರಿಸರ ಉಳಿಸುವುದರಲ್ಲಿ ಸಹಭಾಗಿಗಳು. ಅವುಗಳನ್ನುಳಿಸಿದರೆ ಪರಿಸರ ಉಳಿಸಿದಂತೆ. ತನ್ಮೂಲಕ ಮಾನವ ಸಂತತಿಯೂ ಆರೋಗ್ಯದಿಂದ ಜೀವಿಸಲು ಸಾಧ್ಯ ಎಂದರು.
ವಿದ್ಯಾಥರ್ಿನಿ ಕೃತಿಕಾ ಮತ್ತು ಬಳಗ ಪ್ರಾರ್ಥನೆ ಹಾಡಿ, ಆಡಳಿತಾಧಿಕಾರಿ ಶ್ಯಾಂಭಟ್ ದಬರ್ೆಮಾರ್ಗ ನಿರ್ವಹಿಸಿದರು. ಗ್ರಾಮೋತ್ಥಾನ ಸಮಿತಿ ಸದಸ್ಯ ಅವಿನಾಶ್ ವಂದಿಸಿದರು.
ಬಳಿಕ ಜೀವನ್ ಸಾಂಕೇತಿಕವಾಗಿ ವಿದ್ಯಾಥರ್ಿಗಳಿಗೆ ಗಿಡ ವಿತರಣೆಮಾಡಿದರು. ಶಾಲಾ ವಠಾರದಲ್ಲಿ ಹಲವಾರು ಗಿಡಗಳನ್ನು ವಿದ್ಯಾಥರ್ಿಗಳ ಸಹಿತ ಅತಿಥಿಗಳು ನೆಡುವುದರೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.