ರಂಗಸಿರಿಯಿಂದ ಸುಂದರ ಪರಿಸರಕ್ಕಾಗಿ ಕಾರ್ಯಕ್ರಮ
ಬದಿಯಡ್ಕ: ಸಮಾಜಕ್ಕೆ ಯಕ್ಷಗಾನ, ಸಂಗೀತಗಳ ಪ್ರತಿಭೆಗಳನ್ನು ನೀಡುವ ಮೂಲಕ ಸಮಾಜದಲ್ಲಿ ಈಗಾಗಲೇ ಗುರುತಿಸಿಕೊಂಡಿರುವ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ವತಿಯಿಂದ ನಡೆದ ಪರಿಸರ ದಿನಾಚರಣೆಯನ್ನು ಬದಿಯಡ್ಕ ಗ್ರಾಮಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಉದ್ಘಾಟಿಸಿದರು. ಬದಿಯಡ್ಕ ಗ್ರಾಮಪಂಚಾಯತ್ನ ಎದುರು ಹಣ್ಣಿನ ಗಿಡವನ್ನು ನೆಟ್ಟು ಉದ್ಘಾಟಿಸಿ ಮಾತಾಡಿ, ರಂಗಸಿರಿಯಂತಹ ಸಂಘಟನೆ ನಾಳಿನ ಸುಂದರ ಪರಿಸರಕ್ಕಾಗಿ `ರಂಗಸಿರಿ ಮರ, ಸುಂದರ ಪರಿಸರ' ಎಂಬ ಧ್ಯೇಯದೊಂದಿಗೆ ಹಣ್ಣಿನಮರಗಳ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆ ನಡೆಸುವ ಮೂಲಕ ಮಾದರಿಕಾರ್ಯ ಮಾಡುತ್ತಿದೆ ಎಂದರು.
ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಪ್ರಾಧ್ಯಾಪಕ ಪ್ರೊ.ಶ್ರೀನಾಥ್ ಅವರು ಗಿಡನೆಟ್ಟು, ರಂಗಸಿರಿಯು ಸಾಂಸ್ಕೃತಿಕ ಕಾರ್ಯಗಳ ಜೊತೆಗೆ ಪರಿಸರ ರಕ್ಷಣೆಯ ಕಾರ್ಯಕ್ಕೂ ಮುಂದಾಗಿರುವುದು ಶ್ಲಾಘನೀಯ ಕಾರ್ಯ ಎಂದರು. ನವಜೀವನ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್, ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷೆ ಪ್ರಭಾವತಿ ಕೆದಿಲಾಯ ಪುಂಡೂರು, ಕಾರ್ಯದಶರ್ಿ ಶ್ರೀಶ ಕುಮಾರ ಪಂಜಿತ್ತಡ್ಕ, ಜೊತೆ ಕಾರ್ಯದಶರ್ಿಗಳಾದ ನಿರಂಜನ್ ರೈ ಪೆರಡಾಲ, ರೇಷ್ಮಾ ಅಗ್ಗಿತ್ತಾಯ, ಸದಸ್ಯರಾದ ದಿನೇಶ ಬೊಳುಂಬು, ಗೀತ ಎಂ ಭಟ್, ಈಶ್ವರ ಭಟ್, ಉದನೇಶ್ ಕುಂಬ್ಳೆ, ವಿದ್ಯಾಥರ್ಿಗಳಾದ ಶಶಾಂಕ ಮೈರ್ಕಳ, ಶ್ರೀಜಾ, ಶ್ರೀಪೂಜಾ, ಕಿಶನ್ ಮೊದಲಾದವರು ಗ್ರಾಮಪಂಚಾಯತ್ ಎದುರು ಹಾಗೂ ನವಜೀವನ ಶಾಲಾಪರಿಸರದಲ್ಲಿ ಉತ್ಸಾಹಭರಿತರಾಗಿ ಗಿಡಗಳನ್ನು ನೆಟ್ಟರು. ಗಿಡ ನೆಡುವುದನ್ನು ಕಂಡು ಆಸಕ್ತಿವಹಿಸಿದ ಪಂಚಾಯತ್ನ ಕೆಲವು ಸದಸ್ಯರು, ಅಧಿಕಾರಿಗಳು, ಅಬಕಾರಿ ಇಲಾಖೆಯ ಅಧಿಕಾರಿಗಳು ಸ್ವಯಂಪ್ರೇರಿತರಾಗಿ ಬಂದು ಗಿಡ ನೆಟ್ಟು, ಸಂಘಟನೆಯವರ ಉತ್ಸಾಹ ಹೆಚ್ಚುವಂತೆ ಮಾಡಿದರು. ಗಿಡಗಳಿಗೆ ರಕ್ಷಣಾ ಆವರಣವನ್ನು ಶ್ರೀಶ ಪಂಜಿತ್ತಡ್ಕ ಒದಗಿಸಿದರು. ನೆಟ್ಟಗಿಡಗಳಿಗೆ ಬೇಸಿಗೆಯಲ್ಲಿ ನೀರುಣಿಸುವುದೇ ಮೊದಲಾದ ಪೋಷಣೆಯನ್ನೂ ಬರುವ ಒಂದು ವರ್ಷಗಳ ಕಾಲ ರಂಗಸಿರಿಯ ಸದಸ್ಯರು, ವಿದ್ಯಾಥರ್ಿಗಳು ಮಾಡಲಿದ್ದಾರೆ.