ಮಹಾತಾಯಿ-ಅನಾಥ ಶಿಶುವಿಗೆ ಹಾಲುಣಿಸಿ ಮಾನವೀಯತೆ ಮೆರೆದ ಮಹಿಳಾ ಪೇದೆ; ಎಲ್ಲೆಡೆ ಮೆಚ್ಚುಗೆಯ ಮಹಾಪೂರ!
ಬೆಂಗಳೂರು: ತೊಟ್ಟಿಯಲ್ಲಿ ಸಿಕ್ಕ ನವಜಾತ ಶಿಶುವಿಗೆ ಎಲೆಕ್ಟ್ರಾನಿಕ್ ಸಿಟಿ ಠಾಣೆಯ ಮಹಿಳಾ ಕಾನ್ಸ್ಟೆಬಲ್ ಅರ್ಚನಾ ಹಾಲುಣಿಸಿ ಮಾನವೀಯತೆ ಮೆರೆದಿದ ಘಟನಾವಳಿಗಳ ಸಾಮಾಜಿಕ ಮಾದ್ಯಮ ಪ್ರಚಾರದ ಬಳಿಕ ವ್ಯಾಪಕ ಮೆಚ್ಚುಗೆಯ ಮಹಾಪೂರ ಹರಿದು ಬಂದಿದ್ದು, ಸ್ತ್ರೀತೃತ್ವದ ಶಕ್ತಿಯನ್ನು ಈ ಮೂಲಕ ಬೆಂಬಲಿಸಲಾಗಿದೆ.
ಆಗ ತಾನೇ ಜನಿಸಿದ್ದ ಶಿಶುವನ್ನು ಯಾರೋ ದೊಡ್ಡತೊಗೂರಿನ ತೊಟ್ಟಿಯೊಂದರ ಬಳಿ ಎಸೆದು ಹೋಗಿದ್ದರು. ಅದನ್ನು ನೋಡಿದ್ದ ಸ್ಥಳೀಯರೊಬ್ಬರು ಠಾಣೆಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ದಾವಿಸಿದ ಸಬ್ ಇನ್ಸ್ ಪೆಕ್ಟರ್ ನಾಗೇಶ್ ಮಗುವನ್ನು ರಕ್ಷಿಸಿ, ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿತ್ತು. ಚಿಕಿತ್ಸೆ ಬಳಿಕ ಮಗುವನ್ನು ಪೊಲೀಸ್ ಠಾಣೆಗೆ ಕರೆದು ತರಲಾಯಿತು.
ಈ ವೇಳೆ ಮಗು ಹಸಿವಿನಿಂದ ಅಳುತ್ತಿತ್ತು. ಇದನ್ನು ನೋಡಿದ ಮಹಿಳಾ ಕಾನ್ ಸ್ಟೇಬಲ್ ಅರ್ಚನಾ ಮಗುವಿಗೆ ಎದೆ ಹಾಲುಣಿಸಿ ಅದರ ಹಸಿವು ನೀಗಿಸಿದ್ದರು. ಅರ್ಚನಾ ಅವರಿಗೂ ಇತ್ತೀಚೆಗಷ್ಟೇ ಗಂಡು ಮಗುವಾಗಿದೆ. ಹೆರಿಗೆ ರಜೆ ಮುಗಿಸಿದ್ದ ಅವರು, ವಾರದ ಹಿಂದಷ್ಟೇ ಕೆಲಸಕ್ಕೆ ಪುನಃ ಹಾಜರಾಗಿದ್ದರು. ಶನಿವಾರ ಶಿಶು ಕಂಡು ಮರುಕಪಟ್ಟಿದ್ದ ಅವರು ಹಾಲು ಕುಡಿಸಿ ಮಾನವೀಯತೆ ಮೆರೆದಿದ್ದಾರೆ. ಅರ್ಚನಾ ಅವರ ಈ ಕೆಲಸಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.