HEALTH TIPS

No title

              ಮಾವಿನಕಟ್ಟೆಯಲ್ಲಿ ವೈದ್ಯಕೀಯ ಶಿಬಿರ
   ಬದಿಯಡ್ಕ: ಉತ್ತಮ ವಿಚಾರಗಳು, ಪ್ರೀತಿಯ ಮಾತುಗಳು ಹಾಗೂ ಹಿತಮಿತವಾದ ಆಹಾರ ಸೇವನೆಯನ್ನು ಮಾಡುವುದರಿಂದ ನಾವು ರೋಗ ವಿಮುಕ್ತರಾಗಿ ದೀಘರ್ಾಯುಶ್ಯವನ್ನು ಹೊಂದಲು ಸಾಧ್ಯ ಎಂದು ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಅಭಿಪ್ರಾಯ ಪಟ್ಟರು.
ಬುಧವಾರ ಸೇವಾ ಭಾರತಿ ಮತ್ತು ಸಂಘಧ್ವನಿ ಆಟ್ಸರ್್ ಮತ್ತು ಸ್ಪೋಟ್ಸರ್್ ಕ್ಲಬ್ನ ಆಶ್ರಯದಲ್ಲಿ ಮಾವಿನಕಟ್ಟೆ ದ್ವಾರಕಾ ನಗರದಲ್ಲಿ ನಡೆದ ಉಚಿತ ಆಯುವರ್ೇದ ಚಿಕಿತ್ಸಾ ಶಿಬಿರವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
  ಸೇವಾ ಭಾರತಿಯು ನಿರಂತರವಾಗಿ ಅನಾಥರ, ಬಡವರ ಸೇವೆಯನ್ನು ಮಾಡುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ರಾತ್ರಿ ವೇಳೆ ಅನ್ನದಾನ, ರಕ್ತದ ಅವಶ್ಯಕತೆಯಿರುವವರಿಗೆ ರಕ್ತದಾನವನ್ನೂ ಮಾಡುವ ಮೂಲಕ ಜನಸೇವೆಯಲ್ಲಿ ನಿರತವಾಗಿದೆ. ಇದೇ ರೀತಿ ಸಮಾಜಸೇವೆಯನ್ನು ಮಾಡುವ ಮೂಲಕ `ಸಂಘ ಧ್ವನಿ' ಆಟ್ಸರ್್ ಸ್ಪೋಟ್ಸರ್್ ಕ್ಲಬ್ನಿಂದ ಊರಿನ ಜನತೆಗೆ ಒಳಿತಾಗಲಿ ಎಂದರು.
  `ಸಂಘ ಧ್ವನಿ' ಆಟ್ಸರ್್  ಸ್ಪೋಟ್ಸರ್್ ಕ್ಲಬ್ನ ಅಧ್ಯಕ್ಷ ರಮೇಶ್ ಮಾವಿನಕಟ್ಟೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜ ಸೇವಕ ಹರೀಶ್ ನಾರಂಪಾಡಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ಸುಳ್ಯ ಕೆವಿಜಿ ಆಯುವರ್ೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಪ್ರೊ. ಡಾ. ಎನ್.ಎಸ್. ಶೆಟ್ಟರ್ ಮಾತನಾಡಿ, ಹುಟ್ಟು ಸಾವಿನ ನಡುವೆ ಆರೋಗ್ಯವಂತನಾಗಿ ಬಾಳಲು ಹಿತಮಿತವಾದ ಆಹಾರ ಸೇವನೆಯಿಂದ ಸಾಧ್ಯ. ರೋಗ ಬಂದಮೇಲೆ ಗುಣಪಡಿಸುವುದಕ್ಕಿಂತ ರೋಗ ಬಾರದಂತೆ ತಡೆಗಟ್ಟಲು ಬೇಕಾದ ಮುಂಜಾಗ್ರತಾ ಕ್ರಮಗಳನ್ನು ನಾವು ಅನುಸರಿಸುವುದು ಅಗತ್ಯ ಎಂದು ಶಿಬಿರಾಥರ್ಿಗಳನ್ನುದ್ದೇಶಿಸಿ ಹೇಳಿದರು. ರಾಕೇಶ್ ಸ್ವಾಗತಿಸಿ, ಸತೀಶ್ ವಂದಿಸಿದರು.
ಶಿಬಿರದಲ್ಲಿ ಆಯುವರ್ೇದ ತಜ್ಞ ವೈದ್ಯರುಗಳಾದ ಡಾ. ಎಸ್.ಜಿ.ಕುಲಕಣರ್ಿ, ಡಾ. ದೀನಪ್ರಕಾಶ್ ಭಾರದ್ವಾಜ್, ಡಾ. ಸಹನಾ ಎಸ್., ಡಾ. ವಿಜಯಲಕ್ಷ್ಮಿ ಪಿ.ಬಿ., ಡಾ. ಶ್ರೀಜಾ ಪಾಲ್ಗೊಂಡು ತಪಾಸಣೆಯನ್ನು ನಡೆಸಿದರು. ಊರ ಪರವೂರಿನ ಅನೇಕರು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. ಬೆಳಗ್ಗೆ 10 ಗಂಟೆಯಿಂದ ಆರಂಭಗೊಂಡ ಶಿಬಿರವು ಮಧ್ಯಾಹ್ನ 2 ವರೆಗೆ ನಡೆಯಿತು. ರೋಗಿಗಳಿಗೆ ಉಚಿತವಾಗಿ ಔಷಧಿಯನ್ನು ವಿತರಿಸಲಾಯಿತು.


   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries