ಇರಿಯಣ್ಣಿ ಶಾಲೆಯನ್ನು ಹೈಟೆಕ್ ಆಗಿ ಘೋಷಣೆ
ಮುಳ್ಳೇರಿಯ: ನವ ಕೇರಳ ಮಿಶನ್ನ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞದ ಅಂಗವಾಗಿ ಇರಿಯಣ್ಣಿ ಸರಕಾರಿ ವೊಕೇಶನಲ್ ಶಾಲೆಯನ್ನು ಶನಿವಾರ ಹೈಟೆಕ್ ಶಾಲೆ ಎಂದು ಘೋಷಿಸಲಾಯಿತು.
ಉದುಮ ಶಾಸಕ ಕೆ.ಕುಂಞಿರಾಮನ್ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಎ.ಪಿ.ಉಷಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇರಿಯಣ್ಣಿ ಸರಕಾರಿ ವೊಕೇಶನಲ್ ಶಾಲೆ 21 ತರಗತಿ ಕೋಣೆಗಳು ಈ ಯೋಜನೆಯಂತೆ ಹೈಟೆಕ್ ಆಗುತ್ತಿವೆ. ಎಲ್ಲಾ ತರಗತಿಗಳಿಗೆ ಲ್ಯಾಪ್ಟೋಪ್, ಪ್ರೊಜೆಕ್ಟರ್ ಸರಕಾರದ ವತಿಯಿಂದ ಲಭಿಸಿದರೆ, ಶಾಲಾ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ ತರಗತಿಗಳಿಗೆ ಇತರ ಸೌಕರ್ಯವನ್ನು ಒದಗಿಸಲಾಗಿದೆ. ಶಾಲಾ ಅಭಿವೃದ್ಧಿ ಸಮಿತಿ, ಶಿಕ್ಷಕರು, ಹಳೆ ವಿದ್ಯಾಥರ್ಿಗಳು, ಸಂಘ ಸಂಸ್ಥೆಗಳು ಮೊದಲಾದವುಗಳು ಸೇರಿಕೊಂಡು ಈ ಗುರಿಯನ್ನು ತಲಪಲಾಗಿದೆ. ಜಿಲ್ಲಾ ಪಂಚಾಯಿತಿ ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಎ.ಪಿ.ಉಷಾ ಅಧ್ಯಕ್ಷತೆ ವಹಿಸಿದ್ದರು. ಕೆ.ಪ್ರಭಾಕರನ್, ಕೆ.ಸುರೇಂದ್ರನ್, ಪಿ.ವಾಸು, ಪಿ.ವಿ.ಶಶಿ, ಪಿ.ರಾಮಕೃಷ್ಣನ್, ಕೆ.ಸುಗತ, ಶುಭ ಟೀಚರ್, ಸಜೀವನ್ ಮಾಸ್ಟರ್, ಮುಖ್ಯ ಶಿಕ್ಷಕ ಪಿ.ಬಾಬು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಕೆ.ನಾರಾಯಣನ್ ಸ್ವಾಗತಿಸಿ ವಂದಿಸಿದರು.