HEALTH TIPS

No title

                  ನಾಲಂದದಲ್ಲಿ ಯೋಗ ದಿನಾಚರಣೆ
     ಪೆರ್ಲ: ಯೋಗದಿಂದ ರೋಗಮುಕ್ತರಾಗುತ್ತೇವೆ ಎಂದು ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ತಿಳಿಸಿದರು.
        ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ನಡೆದ  ಯೋಗ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
   ಯೋಗವನ್ನು ಪ್ರಾಥಮಿಕ ಶಿಕ್ಷಣದಲ್ಲಿ ಪಠ್ಯವಾಗಿ ಕಲಿಸುತ್ತಿದ್ದರೆ  ನಮ್ಮ ದೇಶದಲ್ಲಿ  ಇಷ್ಟು ಅತ್ಯಾಚಾರಗಳು ನಡೆಯುತ್ತಿರಲಿಲ್ಲ. ಅಷ್ಟಾಂಗ ಯೋಗವನ್ನು ಅಭ್ಯಾಸಮಾಡಿದರೆ ಅರಿಷಡ್ವರ್ಗಗಳನ್ನು ಹತೋಟಿಯಲ್ಲಿರಿಸುವ ಮಾನಸಿಕ ಶಕ್ತಿ ಮತ್ತು ಇಂದ್ರೀಯ ನಿಗ್ರಹ ಸಾಧ್ಯವಾಗುತ್ತದೆ.  ಯೋಗವೆಂಬುದು ನಿರಂತರವಾದ ಪ್ರಕ್ರಿಯೆಯಾದಾಗ ಮಾತ್ರ ಅದರ ಪ್ರಯೋಜನವಾಗುತ್ತದೆ. ಹೃದ್ರೋಗ, ಮಧುಮೇಹ, ರಕ್ತದೊತ್ತಡವೇ ಮೊದಲಾದ ರೋಗಗಳಿಗೆ ಯೋಗಾಸನಗಳಲ್ಲಿ  ಪರಿಹಾರವಿದೆ ಎಂದು ಯೋಗಾಭ್ಯಾಸವನ್ನು ಮಾಡಿತೋರಿಸುವುದರ ಮೂಲಕ ಯೋಗದ ಮಹತ್ವವನ್ನು ತಿಳಿಸಿಕೊಟ್ಟರು.
     ಕಾಲೇಜಿನ ಪ್ರಾಂಶುಪಾಲ ಡಾ. ವಿಘ್ನೇಶ್ವರ ವಮರ್ುಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಯೋಗಿಗಳಾಗಬೇಕಾದ ನಾವು ಭೋಗಿಗಳಾಗಿ ರೋಗಿಗಳಾಗಿದ್ದೇವೆ. ನಿರಂತರ  ಯೋಗಾಭ್ಯಾಸ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಸುದೃಢರಾಗುತ್ತೇವೆ. ಅದರಿಂದ ಸಾಮಾಜಿಕ ಮತ್ತು ಆಥರ್ಿಕ ಲಾಭವನ್ನು ಗಳಿಸುತ್ತೇವೆ ಎಂದು ನುಡಿದರು.
 ಕಾಲೇಜಿನ ಕಾರ್ಯನಿರ್ವಹಣಾಧಿಕಾರಿ ಕೆ.ಶಿವಕುಮಾರ್  ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಉಪನ್ಯಾಸಕಿ ಶಾಂಭವಿ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ಕೇಶವ ಶರ್ಮ ವಂದಿಸಿದರು. ಕಾಲೇಜಿನ ಉಪನ್ಯಾಸಕರು, ಉಪನ್ಯಾಸಕೇತರ ವರ್ಗ ಮತ್ತು ವಿದ್ಯಾಥರ್ಿಗಳು ಯೋಗಾಭ್ಯಾಸದಲ್ಲಿ ಪಾಲ್ಗೊಂಡರು.

 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries