HEALTH TIPS

No title

                 ಯುಜಿಸಿ ರದ್ದುಗೊಳಿಸಿ ಉನ್ನತ ಶಿಕ್ಷಣ ಆಯೋಗ ರಚನೆ: ಜನರ ಸಲಹೆ ಕೇಳಿದ ಕೇಂದ್ರ
    ನವದೆಹಲಿ: ಯೋಜನಾ ಆಯೋಗ ರದ್ದಗೊಳಿಸಿ ನೀತಿ ಆಯೋಗ ರಚಿಸಿರುವ ಕೇಂದ್ರ ಸಕರ್ಾರ ಈಗ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ(ಯುಜಿಸಿ)ವನ್ನು ರದ್ದುಗೊಳಿಸಿ ಉನ್ನತ ಶಿಕ್ಷಣ ಆಯೋಗ ರಚಿಸಲು ಮುಂದಾಗಿದ್ದು, ಈ ಸಂಬಂಧ ಶಿಕ್ಷಣ ತಜ್ಞರು ಹಾಗೂ ಸಾರ್ವಜನಿಕರು ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡುವಂತೆ ಕೋರಿದೆ.
    ಭಾರತದಲ್ಲಿ ವಿಶ್ವವಿದ್ಯಾಲಯಗಳ ಸಮನ್ವಯತೆ ಮತ್ತು ಶಿಕ್ಷಣದ ಗುಣಮಟ್ಟ ಸುಧಾರಣೆಗಾಗಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಯುಜಿಸಿ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದು, ಉನ್ನತ ಶಿಕ್ಷಣ ಆಯೋಗ ಕಾಯ್ದೆ 2018 ಎಂಬ ಹೊಸ ವಿಧೇಯಕದ ಕರಡು ಪ್ರತಿಯನ್ನು ಸಿದ್ಧಪಡಿಸಿದೆ.
   ಉನ್ನತ ಶಿಕ್ಷಣ ಆಯೋಗ ರಚನೆ ಬಗ್ಗೆ ಜುಲೈ 7ರಂದು ಸಂಜೆ 5 ಗಂಟೆಯೊಳಗೆ ನಿಮ್ಮ ಸಲಹೆ ಮತ್ತು ಸೂಚನೆಗಳನ್ನು ತಿಳಿಸುವಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರು ಮನವಿ ಮಾಡಿದ್ದಾರೆ.
   ಇದೇ ಮೊದಲ ಬಾರಿಗೆ ಉನ್ನತ ಶಿಕ್ಷಣ ಆಯೋಗಕ್ಕೆ, ಶಿಕ್ಷಣದ ಗುಣಮಟ್ಟದ ಮಾನಂಡಗಳನ್ನು ಜಾರಿಗೊಳಿಸುವ ಮತ್ತು ಗುಣಮಟ್ಟ ಕಾಯ್ದುಕೊಳ್ಳದ ಹಾಗೂ ನಕಲಿ ಸಂಸ್ಥೆಗಳನ್ನು ಬಂದ್ ಮಾಡುವ ಅಧಿಕಾರ ನೀಡಲಾಗಿದೆ.
   ಸಂಸತ್ ಮುಂಗಾರು ಅಧಿವೇಶನದಲ್ಲಿ ಈ ವಿಧೇಯಕ ಮಂಡನೆಯಾಗುವ ಸಾಧ್ಯತೆ ಇದೆ. ಯೋಜನಾ ಆಯೋಗದಂತೆ ಯುಜಿಸಿ ಸಹ ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಅವಧಿಯಲ್ಲೇ ಸ್ಥಾಪನೆಯಾಗಿದ್ದು, ಈ ಸಂಸ್ಧೆಗೂ ಸಕರ್ಾರ ತಿಲಾಂಜಲಿ ನೀಡದರೆ ಮೋದಿ ಸಕರ್ಾರ ರದ್ದು ಮಾಡುತ್ತಿರುವ ನೆಹರೂ ಅವಧಿಯಲ್ಲಿ ಸ್ಥಾಪಿಸಿದ ಎರಡನೇ ಸಂಸ್ಥೆ ಇದಾಗಲಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries