HEALTH TIPS

No title

         ದೇವರ ನಾಡಲ್ಲಿ ಅಂಬ್ಯುಲೆನ್ಸ್ ಅಲಭ್ಯತೆ, ಗಭರ್ಿಣಿ ಮಹಿಳೆಯನ್ನು ಜೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ತಂದ ಕುಟುಂಬ!
     ಪಾಲಕ್ಕಾಡ್: ಅಂಬ್ಯುಲೆನ್ಸ್ ಅಲಭ್ಯವಾದ ಕಾರಣ ಗಭರ್ಿಣಿ ಮಹಿಳೆಯೊಬ್ಬರನ್ನು ಜೋಲಿಯಲ್ಲಿರಿಸಿಕೊಂಡು ಹೆಗಲಮೇಲೆ ಹೊತ್ತು ಆಸ್ಪತ್ರೆಗೆ ಸಾಗಿಸಿದ ಘಟನೆ ಕೇರಳದ ಪಾಲಕ್ಕಾಡಲ್ಲಿ ನಡೆದಿದೆ.
   ಪಾಲಕ್ಕಾಡ್ ಜಿಲ್ಲೆ ಅಟ್ಟಪ್ಪಾಡಿಯಲ್ಲಿ  ನೆಲೆಸಿದ್ದ ಬುಡಕಟ್ಟು  ಸಮುದಾಯದ ಒಂಭತ್ತು ತಿಂಗಳ ತುಂಬು ಗಭರ್ಿಣಿಯನ್ನು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಿಸಬೇಕಾಗಿತ್ತು. ಆದರೆ ಸಕಾಲಕ್ಕೆ ಅಂಬ್ಯುಲೆನ್ಸ್ ಲಭ್ಯವಾಗಿಲ್ಲ. ಅದಕ್ಕಾಗಿ ಆಕೆ ಸಂಬಂಧಿಕರು ಮರದ ಸಲಾಕೆಗಳು ಮತ್ತು ಬಟ್ಟೆ ಬಳಸಿ ತಯಾರಿಸಿದ ಜೋಲಿಯಲ್ಲಿ ಆಕೆಯನ್ನು ಮಲಗಿಸಿಕೊಂಡು ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ಕರೆತಂದಿದ್ದಾರೆ.
    ಇಬ್ಬರು ಪುರುಷರು ಜೋಲಿಯನ್ನು ಹೊತ್ತು ಕಲ್ಲು ಮುಳ್ಳಿನ ಹಾದಿಯಲ್ಲಿ ಸಾಗುತ್ತಿರುವ ಚಿತ್ರವನ್ನು ಎಎನ್ಐ ಪ್ರಸಾರ ಮಾಡಿದೆ. ಅದೇ ಚಿತ್ರದಲ್ಲಿ ಇನ್ನೂ ಮೂವರು ಪುರುಷರು ಹಾಗೂ ಇಬ್ಬರು ಮಹಿಳೆಯರನ್ನೂಕಾಣಬಹುದಾಗಿದೆ.
   ಸಾಹಸಿಕವಾಗಿ ಮಾಡಿ ಮುಖ್ಯ ರಸ್ತೆಯಲ್ಲಿರುವ ನ್ಯಾಷನಲ್ ಹೆಲ್ತ್ ಮಿಷನ್ ಆಸ್ಪತ್ರೆಗೆ ಸಾಗಿಸಿದ ಬಳಿಕ ಮಹಿಳೆ ಹೆಣ್ಣು ಮಗುವಿಗೆ ಜನ್ಮವಿತ್ತಿದ್ದಾಳೆ.
   ಕಳೆದ ಆರೇಳು ತಿಂಗಳುಗಳ ಅವಧಿಯಲ್ಲಿ ಉತ್ತರ ಪ್ರದೇಶ, ಒಡಿಶಾ ಸೇರಿ ದೇಶದ ನಾನಾ ಭಾಗಗಳಲ್ಲಿ ಇಂತಹಾ ಘಟನೆಗಳು ವರದಿಯಾಗಿದ್ದವು.
   ಕೇರಳ ಮೂಲದ ಕೆ.ಎ. ರಾಮು ತಮ್ಮ ಫೇಸ್ಬುಕ್  ಖಾತೆಯಲ್ಲಿ ಈ ಸಂಬಂಧದ ವೀಡಿಯೋ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries