HEALTH TIPS

No title

                ಪೈವಳಿಕೆಯಲ್ಲಿ ಹಲಸು ಮೇಳ
    ಉಪ್ಪಳ: ಹಲಸು ಬಹುಪಯೋಗಿಯಾಗಿದ್ದು ಹಲಸಿನ ಆಹಾರ ಉತ್ಪನ್ನಗಳಿಂದ ಉತ್ತಮ ಆರೋಗ್ಯ ಸಹಿತ ಮೌಲ್ಯವಧರ್ಿತ ಉತ್ಪನ್ನಗಳ ಮಾರಾಟದಿಂದ ಉತ್ತಮ ವರಮಾನ ಗಿಟ್ಟಿಸಿಕೊಳ್ಳಬಹುದಾಗಿದೆ ಎಂದು ಪೈವಳಿಕೆ ಗ್ರಾ.ಪಂ ಅಧ್ಯಕ್ಷೆ ಭಾರತೀ.ಜೆ.ಶೆಟ್ಟಿ ಹೇಳಿದರು.
   ಕುಟುಂಬಶ್ರೀ ಘಟಕದ ವತಿಯಿಂದ  ನಡೆದ ಹಲಸು ಮೇಳವನ್ನು ಮಂಗಳವಾರ ಪೈವಳಿಕೆ ಗ್ರಾ.ಪಂ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
  ಹಲವು ವರ್ಷಗಳ ಹಿಂದೆ ಬಡವನ ಬಂಧು ಎನಿಸಿದ್ದ ಹಲಸಿನ ಆಹಾರ ಉತ್ಪನ್ನಗಳು ಇಂದು ಶ್ರೀಮಂತನ ಮನೆಯಲ್ಲೂ ಆಹಾರ ಖಾದ್ಯವಾಗಿ ಬದಲಾಗುತ್ತಿದೆ. ಈ ಸಂದರ್ಭ ಹಲಸಿನ ಮೌಲ್ಯವಧರ್ಿತ ಆಹಾರ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಜೊತೆ ಬೇಡಿಕೆ ಹೆಚ್ಚಾದಲ್ಲಿ ಮಹಿಳೆಯರ ಸ್ವಾವಲಂಬಿ ಜೀವನಕ್ಕೂ ರಹದಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
    ಪೈವಳಿಕೆ ಕುರುವೇರಿಯ ಪ್ರಗತಿಪರ ಕೃಷಿಕ ವಿಶ್ವ ಕೇಶವ ಭಟ್ ಹಲಸಿನ ಬಹು ಉಪಯೋಗಗಳ ಬಗ್ಗೆ ತರಗತಿ ನಡೆಸಿದರು. ಗ್ರಾ.ಪಂ ಉಪಾಧ್ಯಕ್ಷೆ ಸುನಿತಾ ವಲ್ಟಿ ಡಿ'ಸೋಜಾ, ಮಂಜೇಶ್ವರ ಬ್ಲಾ.ಪಂ ಸದಸ್ಯ ಪ್ರಸಾದ್ ರೈ ಶುಭಾಶಂಸನೆಗೈದರು. ಕ್ಷೇಮ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ ಅಮೀರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಕುಟುಂಬಶ್ರೀ ಸಿಡಿಎಸ್ ಖತೀಜಾ ಸ್ವಾಗತಿಸಿದರು. ಸುಜಾತಾ.ಬಿ.ರೈ, ಸುಬ್ರಹ್ಮಣ್ಯ ಭಟ್, ಚನಿಯಾ ಕೊಮ್ಮಂಗಳ, ರಬಿಯಾ, ಫಾತಿಮ್ಮತ್ ಝೌರಾ, ವಸಂತಿ ಮೊದಲಾದವರು ಉಪಸ್ಥಿತರಿದ್ದರು.
    ಹಲಸು ಮೇಳದಲ್ಲಿ ವಿವಿಧ ಖಾದ್ಯಗಳ ಪ್ರದರ್ಶನ ಸಹಿತ ಮಾರಾಟ ಏರ್ಪಟ್ಟಿತು, ಆಸಕ್ತರಿಗೆ ಹಲಸಿನ ಗಿಡಗಳನ್ನು ವಿತರಿಸಲಾಯಿತು.


   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries