ಕನ್ನಡ ಗಝಲ್-
ಕವಯಿತ್ರಿ ಚೇತನಾ ಕುಂಬಳೆ
.....................................................................................................
ಮನಸ್ಸು ಏಕಾಂತವನ್ನು ಬಯಸುವುದು ಹೊಸತೇನಲ್ಲ
ಭಾವಗಳ ಸುಳಿಯಲ್ಲಿ ಸಿಕ್ಕಿ ಒದ್ದಾಡುವುದು ಹೊಸತೇನಲ್ಲ
ನಗುವಲ್ಲಿ ಹಿಗ್ಗದೆ ಅಳುವಲ್ಲಿ ಕುಗ್ಗದಿರಲು ಕಲಿತಿರುವೆ
ನೋವು-ನಲಿವುಗಳ ಆಗಮನ ನಿರ್ಗಮನವದು ಹೊಸತೇನಲ್ಲ
ಅಪರಿಚಿತರು ಪರಿಚಿತರಾಗಿ ಬಳಿಯಿದ್ದವರು ದೂರಾಗುತ್ತಾರೆ
ಸ್ವಾಗತ ಮಾಡುವುದು ವಿದಾಯ ಹೇಳುವುದು ಹೊಸತೇನಲ್ಲ
ಕೆಲ ಕನಸುಗಳು ಬೆಳಕ ಕಾಣುವ ಮೊದಲೇ ಮರೆಯಾಗುತ್ತವೆ
ಕತ್ತಲ ಗರ್ಭದಲಿ ಹುಟ್ಟು ಸಾವು ನಡೆಯುವುದು ಹೊಸತೇನಲ್ಲ
'ತನು' ಬಂದದ್ದೂ ಒಂಟಿಯಾಗಿಯೇ ಹೋಗುವುದೂ ಒಬ್ಬಳೇ
ಅನುದಿನವೂ ಒಂಟಿತನ ಅನುಭವಿಸುವುದು ಹೊಸತೇನಲ್ಲ
ಚೇತನಾ ಕುಂಬಳೆ .