ಕಿಳಿಂಗಾರು ಶಾಲಾ ಮಕ್ಕಳಿಂದ ಜಲಪಾತ ವೀಕ್ಷಣೆ
ಬದಿಯಡ್ಕ: ಪ್ರಾಕೃತಿಕ ಮಹತ್ವಗಳನ್ನು ತಿಳಿಯಪಡಿಸುವ ನಿಟ್ಟಿನಲ್ಲಿ ವಿದ್ಯಾಥರ್ಿಗಳಿಗೆ ಸಹಜ ಪ್ರಪಂಚದ ನೇರ ಚಿತ್ರಣವೊದಗಿಸುವ ಕ್ರಮಗಳು ಇದೀಗ ಶಾಲೆಗಳಲ್ಲಿ ಬೆಳೆದುಬರುತ್ತಿದ್ದು, ಪಠ್ಯಕ್ಕಿಂತ ಹೊರತಾದ ಹೊಸತನವನ್ನು ಇವುಗಳು ಒದಗಿಸುತ್ತವೆ. ಆಧುನಿಕ ಜೀವನ ಕ್ರಮಗಳು ಯಾಮತ್ರೀಕರಣಗೊಳ್ಳುತ್ತಿರುವಂತೆ ಜನರು ಪ್ರಕೃತಿಯಿಂದ ದೂರವಾಗುತ್ತಿದ್ದು, ಇದು ವ್ಯಾಪಕ ಸವಾಲುಗಳಿಗೂ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಗಸ, ಸಸ್ಯಕಾಶಿ ಕಾಡು, ಗುಡ್ಡ-ಬೆಟ್ಟ, ತೊರೆ-ನದಿ-ಜಲಪಾತಗಳು ಮೊದಲಾದವುಗಳ ವೀಕ್ಷಣೆ, ವಿರಣೆಗಳು ವಿದ್ಯಾಥರ್ಿಗಳ ಭೌದ್ದಿಕತೆಗೆ ಹೆಚ್ಚು ಒತ್ತುನೀಡುವುದರ ಜೊತೆಗೆ ಪ್ರಕೃತಿ ಮತ್ತು ಜೀವಸಂಬಂಧಗಳನ್ನು ಅರಿಯುವಲ್ಲಿ ನೆರವಾಗುತ್ತಿವೆ.
ಈ ಹಿನ್ನೆಲೆಯಲ್ಲಿ ಬೇಳ ಸಮೀಪದ ಕಿಳಿಂಗಾರು ಅನುದಾನಿತ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳು ಶಾಲಾ ಸಮೀಪದ ಕೊಡ್ವಕರೆ ಶಿವ ಕುಮಾರ್ ಅವರ ಹಿತ್ತಿಲಿನಲ್ಲಿರುವ ಕಿರು ಜಲಪಾತ, ಝರಿ, ಸುರಂಗಗಳ ವೀಕ್ಷಣೆಯನ್ನು ಇತ್ತೀಚೆಗೆ ಮಾಡಿಸಲಾಯಿತು. ಧುಮ್ಮಿಕ್ಕಿ ಹರಿಯುವ ಜಲಪಾತ, ಜಲಪಾತದ ನೀರು ನೆಲಕ್ಕೆ ಬಿದ್ದೊಡನೆ ಬಳಿಕ ಸಂಚರಿಸುವ ಅದರ ಓಘ, ಸುರಂಗಗಳ ಮೂಲಕ ನೀರಿನ ಲಭ್ಯತೆ, ಸುರಂಗದಲ್ಲಿ ನೀರಿನ ಹರಿವು ಮೊದಲಾದವುಗಳ ಬಗ್ಗೆ ವಿದ್ಯಾಥರ್ಿಗಳಿಗೆ ಸಮಗ್ರ ಮಾಹಿತಿ ನೇರವಾಗಿ ನೀಡಲಾಯಿತು.
ಶಾಲಾ ಅಧ್ಯಾಪಕ ಪ್ರದೀಪ್ ಕುಮಾರ್ ಶೆಟ್ಟಿ, ಅಧ್ಯಾಪಿಕೆಯರಾದ ಶ್ರೀವಿದ್ಯಾ, ಸುನೀತ ನೇತೃತ್ವ ನೀಡಿ ವಿದ್ಯಾಥರ್ಿಗಳಿಗೆ ಮಾಹಿತಿ ನೀಡಿದರು.