HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಗೂಗಲ್ ಮ್ಯಾಪ್'ಗೆ ಬರಲಿದೆ ಮತ್ತೊಂದು ವಿಶಿಷ್ಟ ಫೀಚರ್!
     ಕಾಸರಗೋಡು:    ಎಲ್ಲರ ಸಾಮಾನ್ಯ ಸಮಸ್ಯೆಗಳಿಗೆ ಇಂಟರ್ನೆಟ್ ಮೂಲಕ ಪರಿಹಾರವನ್ನು ಹುಡುಕಿ ಬೃಹದಾಕಾರವಾಗಿ ಬೆಳೆದ ಕಂಪೆನಿ ಎಂದರೆ ಅದು ಗೂಗಲ್.! ಇಂದು ಗೂಗಲ್ ಇಲ್ಲದೆಯೇ ನಾವಿಲ್ಲ ಎನ್ನುವಷ್ಟು ನಾವು ಗೂಗಲ್ಗೆ ಅಂಟಿಕೊಂಡಿದ್ದೇವೆ. ಅದಕ್ಕೆ ಕಾರಣ ಕೂಡ ಗೂಗಲ್ ನೀಡುತ್ತಿರುವ ಅತ್ಯುತ್ತಮ ಸೇವೆಗಳು.!!
   ಗೂಗಲ್ ಇಷ್ಟೆಲ್ಲಾ ಸೇವೆ ನೀಡುತ್ತಿದ್ದರೂ ಸಹ ಈಗಲೂ ಹೊಸ ಹೊಸ ಸೇವೆಗಳನ್ನು ಮತ್ತೆ ತರುವುದನ್ನು ನಿಲ್ಲಿಸುತ್ತಿಲ್ಲ.! ಇದೀಗ 'ಗೂಗಲ್ ಮ್ಯಾಪ್' ಸೇವೆಗೆ ಮತ್ತೊಂದು ವಿಶಿಷ್ಟ ಫೀಚರ್ ಅನ್ನು ಗೂಗಲ್ ಸಂಸ್ಥೆ ತರಲು ಮುಂದಾಗಿದ್ದು, ಈ ಆಯ್ಕೆ ನಿಮ್ಮನ್ನು ಎದ್ದೇಳಿಸುವ ಕೆಲಸವನ್ನು ಮಾಡಲಿದೆ.! ಹಾಗಾದರೆ, ಏನಿದು ಫೀಚರ್? ಇದರ ಉಪಯೋಗ ಏನು ಎಂಬುದನ್ನು ಕೆಳಗಿನ ಸ್ಲೈಡರ್ಗಳಲ್ಲಿ ಇಂತಿವೆ!!
      ಎದ್ದೇಳಿಸುವ ಕೆಲಸ ಮಾಡಲಿದೆ ಗೂಗಲ್!!
ಬಸ್ಸಿನಲ್ಲಿಯೋ ಅಥವಾ ರೈಲಿನಲ್ಲಿಯೋ ಪ್ರಯಾಣಿಸುವಾಗ ಜನರು ನಿದ್ದೇ ಹೋದರೆ ಗೂಗಲ್ ನೋಟಿಫಿಕೇಷನ್ಗಳ ಮೂಲಕ ಅವರನ್ನು ಎಚ್ಚರಿಸುವ ಕೆಲಸ ಮಾಡಲು ಮುಂದಾಗಿದೆ.! ಇದರಿಂದಾಗಿ ಎಷ್ಟೋ ಜನರು ತಾವು ಇಳಿಯಬೇಕಾದ ಸ್ಥಳದಿಂದ ಮುಂದೆ ಪ್ರಯಾಣಿಸಿ ಆಗಬಹುದಾದ ತೊಂದರೆ ತಪ್ಪಲಿದೆ.!!
     ಹೇಗೆ ಕೆಲಸ ಮಾಡಲಿದೆ ಫೀಚರ್!!
     ನೀವು ಪ್ರಯಾಣಿಸಬೇಕಾದರೆ ಗುರುತಿಸಿರುವ ಜಾಗವನ್ನು ಗೂಗಲ್ ನೆನಪಿಟ್ಟುಕೊಳ್ಳುತ್ತದೆ. ಬಸ್ಸಿನಲ್ಲಿಯೋ ಅಥವಾ ರೈಲಿನಲ್ಲಿಯೋ ಪ್ರಯಾಣಿಸಿ ನೀವು ಆ ಸ್ಥಳವನ್ನು ತಲುಪಿದ ನಂತರ ನಂತರ ನಿಮ್ಮ ಮೊಬೈಲ್ ಲೊಕೇಷನ್ ಗುರುತಿಸಿ ನಿಮಗೆ ನೋಟಿಫಿಕೇಷನ್ಗಳ ಮೂಲಕ ಎಚ್ಚರಿಸುತ್ತದೆ.!!
   ಸ್ಮಾಟರ್್ಫೋನ್ ಲಾಕ್ ಆಗಿದ್ದರೂ ಕೆಲಸ ಮಾಡುತ್ತೆ!!
ಒಂದು ವೇಳೆ ನಿಮ್ಮ ಸ್ಮಾಟರ್್ಫೋನ್ ಲಾಕ್ ಆಗಿದ್ದರೂ ನೀವು ಇಳಿಯಬೇಕಾದ ಸ್ಥಳವನ್ನು ಗುರುತಿಸುವ ಕೆಲಸವನ್ನು ಗೂಗಲ್ ಮ್ಯಾಪ್ ಮಾಡಲಿದೆ. ನೆಟ್ವಕರ್್ ಮತ್ತು ಆಂಡ್ರಾಯ್ಡ್ ಸಾಧನ ಚಲಿಸುತ್ತಿರುವ ಆಧಾರದಲ್ಲಿ ಗೂಗಲ್ ಮ್ಯಾಪ್ ಕೆಲಸ ನಿರ್ವಹಿಸುತ್ತದೆ ಎನ್ನುತ್ತವೆ ವರದಿಗಳು.!!
     ಸ್ಥಳ ತಲುಪದಿದ್ದರೆ?
    ಒಂದು ವೇಳೆ ಪ್ರಯಾಣಿಸುವಾಗ ನಿದರ್ಿಷ್ಟಪಡಿಸಿದ ಸ್ಥಳವನ್ನು ನೀವು ತಲುಪದೆ ಇನ್ನಾವುದೇ ಸ್ಥಳವನ್ನು ತಲುಪಿದ್ದರೂ ಅದರ ಹತ್ತಿರದ ಪ್ರದೇಶಗಳನ್ನು ಕೂಡ ಸ್ವಯಂ ತಿಳಿದು ನಿಮಗೆ ಆಗಾಗ್ಗೆ ಎಚ್ಚರಿಸುತ್ತದೆ. ಒಂದು ವೇಳೆ ನೀವು ಹೋಗುತ್ತಿರುವ ಬಸ್ ಮಾರ್ಗ ಬದಲಾಗಿದ್ದರೂ ಕೂಡ ಗೂಗಲ್ ನಿಮ್ಮನ್ನು ಎಚ್ಚರಿಸುತ್ತದೆ.!!
    ಶೀಘ್ರದಲ್ಲಿಯೇ ಬಳಕೆಗೆ!!
    ಈ ತಂತ್ರಾಂಶ ಸೇವೆ ಎಂದಿನಿಂದ ಬಳಕೆಗೆ ಲಭ್ಯವೆಂಬ ಬಗ್ಗೆ ಮಾಹಿತಿಯನ್ನು ಗೂಗಲ್ ಗುಪ್ತವಾಗಿರಿಸಿದ್ದು, ಇನ್ನು ನೆಟ್ ನಲ್ಲಿ ಸಚರ್್ ಮಾಡಿ ಸದ್ಯ ಹುಡುಕಾಡುವ ಅಗತ್ಯವಿಲ್ಲವೆಂಬುದೂ ಗಮನಾರ್ಹ. 
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries