HEALTH TIPS

No title

              ತೀವ್ರಗೊಳ್ಳುತ್ತಿರುವ ಕಡಲ್ಕೊರೆತ-ತಡೆಗೋಡೆ ಇಲ್ಲ ಯಾಕೆ
   ಕುಂಬಳೆ: ಮಂಜೇಶ್ವರ, ಉಪ್ಪಳ, ಕುಂಬಳೆ ಪ್ರದೇಶಗಳ ಕರಾವಳಿಯ ಸಮುದ್ರ ತೀರ ಪ್ರದೇಶಗಳ ವಾಸಿಗಳು ಕಳೆದ ಹಲವು ದಶಕಗಳಿಂದ ವ್ಯಾಪಕ ಕಡಲ್ಕೊರೆತದ ಸವಾಲುಗಳಿಂದ ಹೈರಾಣರಾಗುತ್ತಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ಶಾಶ್ವತ ತಡೆಗೋಡೆಗಳಂತಹ ಉಪಕ್ರಮಗಳಿಗೆ ಮುಂದಾಗದಿರುವುದು ತೀವ್ರ ಹತಾಶೆಗೊಳಪಡಿಸಿದೆ.
   ಮಂಜೇಶ್ವರದ ಕಣ್ವತೀರ್ಥ, ಮಂಗಲ್ಪಾಡಿಯ ಹನುಮಾನ್ ನಗರ, ಶಾರದಾನಗರ, ಐಲ, ಮಣಿಮುಂಡ, ಶಿರಿಯ, ಕುಂಬಳೆ ವ್ಯಾಪ್ತಿಯ ಪೆರುವಾಡ್, ಮೊಗ್ರಾಲ್, ನಾಂಗಿ, ಕೊಪಾಡಿ ಕಡಪ್ಪರ ಪ್ರದೇಶಗಳಲ್ಲಿ ಹಲವಾರು ವರ್ಷಗಳಿಂದ ಕಡಲ್ಕೊರೆತ ತೀವ್ರಗೊಳ್ಳುತ್ತಿದ್ದು, ನೂರಾರು ಕುಟುಂಬಗಳು ಮನೆ-ಮಠಗಳನ್ನು ಈಗಾಗಲೇ ಕಳೆದುಕೊಂಡಿದ್ದರೆ, ಇನ್ನೂ ಹಲವು ಕುಟುಂಬಗಳು ಅತಂತ್ರಗೊಳ್ಳುವ ಸ್ಥಿತಿ ಮುಂದುವರಿದಿದೆ. ಅಧಿಕಾರಿಗಳು, ರಾಜಕೀಯ ನೇತಾರರು ಕಡಲ್ಕೊರೆತ ಅಧಿಕವಾಗಿದ್ದಾಗ ಭೇಟಿ ನೀಡಿ ಭರವಸೆಯ ಮಾತುಗಳನ್ನಾಡಿ ತೆರಳುವುದಲ್ಲದೆ ಬೇರೆ ಪರಿಹಾರಕ್ರಮಗಳ ಬಗ್ಗೆ ಆ ಬಳಿಕ ಕ್ರಮ ಕೈಗೊಳ್ಳುತ್ತಿಲ್ಲ.
   ಈಗಾಗಲೇ ಕಳೆದ 4 ವರ್ಷಗಳಿಂದ ತೀವ್ರಗೊಂಡಿರುವ ಕಡಲ್ಕೊರೆತದಿಂದ ಬಸವಳಿದು ಕುಂಬಳೆಯ 11, ಮಂಗಲ್ಪಾಡಿಯ 9 ಹಾಗೂ ಮಂಜೇಶ್ವರದ 7 ಕುಟುಂಬಗಳು  ಮನೆಗಳನ್ನು ಬಿಟ್ಟು ಸ್ಥಳಾಂತರಗೊಂಡಿರುವುದಾಗಿ ತಿಳಿದುಬಂದಿದೆ.
    ಮಂಜೇಶ್ವರದಿಂದ ಕುಂಬಳೆ, ಮೊಗ್ರಾಲ್ ಪುತ್ತೂರು ಸಮೀಪದ ಕಡಲ ಕಿನಾರೆಯ ವರೆಗೆ ಶಾಶ್ವತ ತಡೆಗೋಡೆಯನ್ನು ನಿಮರ್ಿಸಬೇಕಿದ್ದು, ಸಂಸದರು ಹಾಗೂ ಶಾಸಕರು ಈ ಬಗ್ಗೆ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಸಂತ್ರಸ್ಥರು ಪತ್ರಿಕೆಗೆ ತಮ್ಮ ಅಳಲನ್ನು ತೋಡಿಕೊಂಡಿರುವರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries