HEALTH TIPS

No title

               ಮಾನ್ಯ ಶಾಲಾ ಕಸವಿಲೇ ವ್ಯವಸ್ಥೆಗೆ ಶಾಸಕರಿಂದ ಶ್ಲಾಘನೆ
     ಬದಿಯಡ್ಕ: ಸ್ವಚ್ಛ ಭಾರತದ ಕನಸನ್ನು ನನಸಾಗಿಸಲು ಪ್ರತಿಯೊಬ್ಬ ಭಾರತೀಯನೂ ಕೈಜೋಡಿಸಬೇಕು. ನಮ್ಮ ಮನೆ, ಕಛೇರಿ, ಶಾಲಾ ಪರಿಸರವನ್ನು ಸ್ವಚ್ಛವಾಗಿಡುವುದನ್ನು ರೂಢಿಸಿಕೊಂಡರೆ ಇದು ಸುಲಭ ಸಾಧ್ಯ ಎಂದು   ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ಅಭಿಪ್ರಾಯಪಟ್ಟರು.
  ಅವರು ನೀಚರ್ಾಲು ಸಮೀಪದ ಮಾನ್ಯದ ಜ್ಞಾನೋದಯ ಹಿರಿಯ ಪ್ರಾಥಮಿಕ ಶಾಲೆಯನ್ನು ಇತ್ತೀಚೆಗೆ ಸಂದಶರ್ಿಸಿದ ಸಂದರ್ಭದಲ್ಲಿ ಹೊಸದಾಗಿ ಸ್ಥಾಪಿಸಿದ ಪೆಂಗ್ವಿನ್ ಆಕೃತಿಯ ಕಸದ ತೊಟ್ಟಿಯನ್ನು ವೀಕ್ಷಿಸಿದ ಅವರು ಶಾಲಾ ಶಿಕ್ಷಕರನ್ನು ಅಭಿನಂದಿಸಿ ಮಾತನಾಡಿದರು.
   ಮಾನ್ಯ ಶಾಲೆಯು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು ಉತ್ತಮ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದೆ. ಸ್ವಚ್ಛ ಸುಂದರ ಪರಿಸರ, ಹಾಗೂ ಪ್ಲಾಸ್ಟಿಕ್ ರಹಿತ ಕ್ಯಾಂಪಸ್ ನಾಳೆಯ ಜನಾಂಗವನ್ನು ಸಾಮಾಜಿಕ ಕಾಳಜಿ ಹಾಗೂ ಉತ್ತಮ ಚಿಂತನೆಗಳೊಂದಿಗೆ ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತಿದೆ. ಬಾಲ್ಯದಲ್ಲಿ ಮಕ್ಕಳಿಗೆ ನೀಡುವ ಜ್ಞಾನವು ಅವರ ಬದುಕನ್ನು ಉತ್ತಮ ರೀತಿಯಲ್ಲಿ ರೂಪಿಸುತ್ತದೆ. ಕಸದ ಬುಟ್ಟಿಯ ಉಪಯೋಗ ಹಾಗೂ ಪರಿಸರ ಸಂರಕ್ಷಣೆಯ ಪಾಠವು ಆರೋಗ್ಯವಂತ ಸಮಾಜದ ನಿಮರ್ಾಣಕ್ಕೆ ಸಹಕಾರಿ ಎಂದು ಅವರು ಹೇಳಿದರು.
   ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎನ್ ಕೃಷ್ಣ ಭಟ್, ಬದಿಯಡ್ಕ ಗ್ರಾಮ ಪಂಚಾಯತು ಆರೋಗ್ಯ, ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ, ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೈಲಾಸಮೂತರ್ಿ, ಉಪಜಿಲ್ಲಾ ಯೋಜನಾಧಿಕಾರಿ ಎನ್ ವಿ ಕುಂಞಿಕಣ್ಣನ್, ಬದಿಯಡ್ಕ ಗ್ರಾಮ ಪಂಚಾಯತು ಮಾಜಿ ಅಧ್ಯಕ್ಷ ಮಾಹೀನ್ ಕೇಳೋಟ್, ಸುಬ್ರಹ್ಮಣ್ಯ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸತೀಶ, ರಾಮ ಕಮರ್ಾರ್, ನವೀನ್ ಚಂದ್ರ, ಎಂ.ವಿ ಸುರೇಂದ್ರನ್ ,ಆಶಾ ಕಿರಣ್, ಪ್ರದೀಪ್ ಮಾಸ್ತರ್ ಉಪಸ್ಥಿತರಿದ್ದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries