HEALTH TIPS

No title

               ಕ್ಯಾಲ್ಸಿಯಂ ಕಾಬರ್ೈಡ್ ಬಳಸಿದ ಮಾವಿನಹಣ್ಣುಗಳ ರಾಶಿರಾಶಿ
     ಕುಂಬಳೆ: ಹಣ್ಣುಗಳ ರಾಜ ಮಾವಿನ ಹಣ್ಣಿನ ಸೀಸನ್ ಆಗಿರುವ ಈಗ ಜಿಲ್ಲೆಯಲ್ಲಿ ಹಣ್ಣುಗಳನ್ನು ಕೃತಕವಾಗಿ ಹಣ್ಣು ಮಾಡಿಸಿ ಮಾರಾಟ ಮಾಡುವಂತಹ ದಂಧೆ ವ್ಯಾಪಕವಾಗಿ ನಡೆಯುತ್ತಿರುವುದು ವ್ಯಾಪಕಗೊಂಡಿದೆ. 
    ಮನುಷ್ಯರ ಆರೋಗ್ಯದ ಮೇಲೆ ಗಂಭೀರ ಸ್ವರೂಪದ ದುಷ್ಪರಿಣಾಮ ಬೀರುವಂತಹ ವಿಷಕಾರಿ ಕ್ಯಾಲ್ಸಿಯಂ ಕಾಬರ್ೈಡ್ನ್ನು ಬಳಸಿಕೊಂಡು ಮಾವಿನಹಣ್ಣು ಸಹಿತ ಇತರ ಹಣ್ಣುಗಳನ್ನು ಶೀಘ್ರವಾಗಿ ಹಣ್ಣು ಹಾಗೂ ಬಣ್ಣ ಬರಿಸುವ ದಂಧೆ ವ್ಯಾಪಕವಾಗಿ ನಡೆಯುತ್ತಿದೆ.
     ಜಿಲ್ಲೆಯಲ್ಲಿ ಈಗಾಗಲೇ ಧಾರಾಳ ಮಾವಿನ ಹಣ್ಣುಗಳು ಲಭಿಸುತ್ತಿದ್ದು, ಜನರ ಬೇಡಿಕೆಯನ್ನು ಮನಗಂಡು ಲಾಭದಾಸೆಗೆ ಮತ್ತು ಗ್ರಾಹಕರನ್ನು ಆಕಷರ್ಿಸುವ ಸಲುವಾಗಿ ಕ್ಯಾಲ್ಸಿಯಂ ಕಾಬರ್ೈಡ್ ರಾಸಾಯಿನಿಕ ಬಳಸಿ ಅವಧಿಕೂ ಮುನ್ನವೇ ಕೃತಕವಾಗಿ ಹಣ್ಣಾಗಿಸಿ ಮಾರಾಟ ಮಾಡಲಾಗುತ್ತಿದೆ.
    ಜಿಲ್ಲೆಗೆ ನೆರೆಯ ತಮಿಳುನಾಡಿನಿಂದ ಬಾಕ್ಸ್ಗಳಲ್ಲಿ ಮಾವಿನ ಕಾಯಿಗಳನ್ನು ತಂದು ಅದನ್ನು ದಾಸ್ತಾನಿರಿಸಿ ಕೃತಕವಾಗಿ ಕಾಬರ್ೈಡ್ ಉಪಯೋಗಿಸಿ ಹಣ್ಣು ಮಾಡುವುದಲ್ಲದೇ ಆಕರ್ಷಕ ಬಣ್ಣ ಬರುವಂತೆ ಮಾಡಿ ಗ್ರಾಹಕರನ್ನು ಸೆಳೆಯುವಂತೆ ಮಾಡುವುದು ಕಂಡುಬಂದಿದೆ. 
    ಆರೋಗ್ಯದ ಮೇಲೆ ದುಷ್ಪರಿಣಾಮ:
   ಈ ರೀತಿಯಲ್ಲಿ ಕೃತಕವಾಗಿ ಹಣ್ಣು ಮಾಡಿಸುವ ಮಾವು ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಕ್ಯಾಲ್ಸಿಯಂ ಕಾಬೈರ್ಡ್ನಲ್ಲಿರುವ ಆರ್ಸನಿಕ್ ರಾಸಾಯಿನಿಕವು ವಿಷಾಂಶವನ್ನು ಹೊಂದಿದ್ದು, ಇದು ಮನುಷ್ಯರ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೇ ಕ್ಯಾನ್ಸರ್ ಕಾಯಿಲೆಯ ಸಾಧ್ಯತೆ ಹೆಚ್ಚಿರುವುದಾಗಿ ತಜ್ಞರು ಹೇಳುತ್ತಾರೆ.
    ಈಗಾಗಲೇ ನಗರದಲ್ಲಿ ಇಂತಹ ಅಟ್ಟೆಗಳ ತಪಾಸಣೆ ಕೈಗೊಳ್ಳಲಾಗಿದೆ. ಅಲ್ಲದೇ ಹಣ್ಣು ಮಾಡುವಂತಹ ರಖಂ ಗೋದಾಮುಗಳಿಗೆ ದಾಳಿ ನಡೆಸಲಾಗಿದೆ. ಇದರಂತೆ ನಗರದ ನಾನಾ ಕಡೆ ಕಾಬರ್ೈಡ್ಗಳನ್ನು ಉಪಯೋಗಿಸಿ ಬಾಕ್ಸ್ಗಳಲ್ಲಿರಿಸಿದ ಮಾವಿನಹಣ್ಣನ್ನು ವಶಪಡಿಸಿಕೊಳ್ಳಲಾಗಿದೆ.
   ನಗರದಲ್ಲಿ ಚಿಲ್ಲರೆ ಮಾರಾಟಕ್ಕಾಗಿ ಸರಬರಾಜು ಮಾಡುವುದಾಗಿದೆ. ಕಾಬರ್ೈಡ್ ಉಪಯೋಗಿಸಿ ಹಣ್ಣು ಮಾಡಿ ದಾಸ್ತಾನಿರಿಸಿದನ್ನು ಅಲ್ಲಿಯೇ ಅದನ್ನು ನಾಶಗೊಳಿಸಲಾಗಿದೆ. ಸ್ಯಾಂಪಲ್ ಪಡೆದುಕೊಂಡು ಪರಿಶೀಲನೆಗಾಗಿ ಕಳುಹಿಸಿಕೊಡಲಾಗಿದೆ.
   ಕುಂಬಳೆ, ಮಂಜೇಶ್ವರ, ಉಪ್ಪಳ, ಬದಿಯಡ್ಕ, ಮುಳ್ಳೇರಿಯ ಪೆಟೆಗಳಲ್ಲಿ ಈ ರೀತಿಯ ವರ್ಣಮಯ ಮಾವುಗಳು ಕಂಡುಬರುತ್ತಿದ್ದು, ವ್ಯಾಪಾರಿಗಳಿಗೆ ಮತ್ತು ಗ್ರಾಹಕರಿಗೆ ಜಾಗೃತಿ ಮೂಡಿಸುವ ಅಗತ್ಯ ತುತರ್ು ಇದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries