HEALTH TIPS

No title

                    ಕಿತ್ತುಹೋದ ಕುಂಟಾರು-ಅತ್ತನಾಡಿ ರಸ್ತೆ; ದುರಸ್ತಿ ಮರೀಚಿಕೆ
        ಮುಳ್ಳೇರಿಯ: ಕುಂಟಾರು-ಅತ್ತನಾಡಿ ರಸ್ತೆಯು ತೀರಾ ಹದಗೆಟ್ಟಿದ್ದು ವಾಹನ ಸಂಚಾರ ಸಮಸ್ಯೆಗೆ ಕೊನೆಯಿಲ್ಲದಂತಾಗಿದೆ.
 ಕಾಸರಗೋಡು-ಸುಳ್ಯ ಪ್ರಧಾನ ರಸ್ತೆಗೆ ಸಂಪರ್ಕ ಕಲ್ಪಿಸುವ ಒಂದೂವರೆ ಕಿಲೋ ಮೀಟರ್ ಉದ್ದದ ಈ ರಸ್ತೆಯು ಹಲವು ವರ್ಷಗಳಿಂದ ಸಂಚಾರ ಸಮಸ್ಯೆಯನ್ನು ಎದುರಿಸುತ್ತಲೇ ಇದೆ. ಕಾರಡ್ಕ ಗ್ರಾಮ ಪಂಚಾಯಿತಿಗೆ ಸೇರಿದ ಕುಂಟಾರಿನಿಂದ ಅತ್ತನಾಡಿಗೆ ಸಾಗಲು ಅತೀ ನಿಕಟವಾದ ಈ ರಸ್ತೆಯ ಒಂದು ಕಿ.ಮೀ. ಭಾಗವನ್ನು ಡಾಮರೀಕರಿಸಿ ಹತ್ತು ವರ್ಷಗಳು ಕಳೆಯಿತು. ಪರಿಣಾಮವಾಗಿ ಬಹುಪಾಲು ರಸ್ತೆಯು ಹೊಂಡಮಯವಾಗಿ ವಾಹನಗಳು ಸಂಚರಿಸದ ಸ್ಥಿತಿ ಎದುರಾಗಿದೆ. ನಡುಬಯಲು ಪ್ರದೇಶದ ಮೂಲಕ ಹಾದು ಹೋಗುವ ಈ ರಸ್ತೆಯ ಭಾಗದಲ್ಲಿ ವಾಹನ ಚಾಲನೆಗೆ ಅಸಾಧ್ಯವಾಗುವ ರೀತಿಯಲ್ಲಿ ಕಿತ್ತುಹೋಗಿದೆ. ಇದರ ದುರಸ್ತಿಗಾಗಿ ಹಲವು ವರ್ಷಗಳಿಂದ ಒತ್ತಾಯಿಸಲಾಗುತ್ತಿದ್ದರೂ ದುರಸ್ತಿ ಮಾತ್ರಾ  ಮರೀಚಿಕೆಯಾಗಿದೆ. ಈಗ ಈ ರಸ್ತೆಯಲ್ಲಿ ಓಡಾಡುವ ವಾಹನಗಳಲ್ಲಿ ಬಹುಪಾಲು ಸುತ್ತುಬಳಸಿ ಓಡಾಡಬೇಕಾಗುತ್ತಿವೆ.
   ಇದೇ ರಸ್ತೆಯು  ಉಯಿತ್ತಡ್ಕ ಪ್ರದೇಶದಲ್ಲಿ ಅರ್ಧ ಕಿಲೋ ಮೀಟರ್ನಷ್ಟು ಭಾಗ ಬಹುಕಾಲದಿಂದ ಡಾಮರೀಕರಣಗೊಳ್ಳದೆ, ದುರಸ್ತಿಯೂ ಇಲ್ಲದೆ ನೆನೆಗುದಿಗೆ ಬಿದ್ದಿತ್ತು. ಸತತ ಒತ್ತಾಯದ ಪರಿಣಾಮವಾಗಿ ಸ್ಥಳೀಯರ ವಿರೋಧ ಹಾಗೂ ಒಪ್ಪಂದದ ಆಧಾರದಲ್ಲಿ 2015 ಮಾಚರ್್ ತಿಂಗಳಲ್ಲಿ ಕಾರಡ್ಕ ಗ್ರಾಮ ಪಂಚಾಯತ್ ವತಿಯಿಂದ 2ಲಕ್ಷ ರೂ.ವೆಚ್ಚದಲ್ಲಿ ಅಗಲಗೊಳಿಸಲಾಯಿತು. ಹಾಗೆಯೇ ಎಂಎಲ್ಎ ನಿಧಿಯನ್ನುಪಯೋಗಿಸಿ ಡಾಮರೀಕರಿಸಲಾಯಿತು. ಇದರಿಂದಾಗಿ ಈಗ ರಸ್ತೆಯಲ್ಲಿ ವಾಹನ  ಸಂಚಾರ ಸುಗಮಗೊಂಡಿತು. ಆದರೆ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಸಮಸ್ಯೆಗಳು ಇಲ್ಲಿಯೂ ಮರುಕಳಿಸುತ್ತಿವೆ. ಇನ್ನೊಂದು ದೊಡ್ಡ ಸಮಸ್ಯೆ ಎಂದರೆ ರಸ್ತೆ ದುರಸ್ತಿ ನಡೆದುದು ಮಾತ್ರವಲ್ಲದೆ ಚರಂಡಿ ವ್ಯವಸ್ಥೆ ಮಾಡಲೇ ಇಲ್ಲ! ಹೀಗಾಗಿ ಮುಂದಿನ ದಿನಗಳಲ್ಲಿ ಮಳೆಯು ಹೆಚ್ಚಾದಂತೆ ಈ ರೋಡು ಸಹಾ ಕಿತ್ತುಹೋಗಬೇಕಾದೀತು ಎಂಬ ಆತಂಕವನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ. ಇದರ ಮೂಲಕ ದಿನ ನಿತ್ಯ ನೂರಾರು ವಾಹನಗಳು, ಕಾಲ್ನಡಿಗೆಯ ಮೂಲಕ ಶಾಲಾ ವಿದ್ಯಾಥರ್ಿಗಳು, ಮಕ್ಕಳು, ಮಹಿಳೆಯರು ಮೊದಲಾದವರು ಸಾಗುತ್ತಾರೆ. ಆದರೆ ಇವೆಲ್ಲಕ್ಕೂ ದುರಸ್ತಿ ಇಲ್ಲದೆ ಹಾಗೆಯೇ ಉಳಿದ ಒಂದು ಕಿಲೋ ಮೀಟರ್ ರಸ್ತೆ ಅಡ್ಡಿಯಾಗಿದೆ.
   ಚರಂಡಿ ನಿಮರ್ಾಣ:
 ಈ ರಸ್ತೆಯ ಹದಗೆಡಲು ಪ್ರಮುಖ ಕಾರಣ ಸರಿಯಾದ ಚರಂಡಿ ನಿಮರ್ಾಣ ನಡೆಸದಿರುವುದು. ಪರಿಣಾಮವಾಗಿ ಮಳೆಗಾಲದಲ್ಲಿ ನೀರು ರಸ್ತೆಯಲ್ಲೇ ಹರಿಯುವ ಕಾರಣ ಬೇಗನೇ ರಸ್ತೆಯು ಕೆಟ್ಟು ಹೋಗುತ್ತಿದೆ. ರಸ್ತೆ ಕಾಮಗಾರಿ ನಡೆಸಿದವರು ಸಾಧಾರಣವಾಗಿ ಚರಂಡಿಯನ್ನು ನಿಮರ್ಿಸಬೇಕಿದ್ದರೂ ಅದನ್ನು ಕಡೆಗಣಿಸಿ ಜಾಗ ಖಾಲಿ ಮಾಡುವವರೇ ಹೆಚ್ಚು. ಇದರಿಂದ ರಸ್ತೆ ವರ್ಷಗಳಲ್ಲಿಯೇ ಹೊಂಡಾಗುಂಡಿಯಾಗುತ್ತಿದೆ.
 ಈ ರಸ್ತೆಯು ನಂದ್ಯಾರ್ ಪದವು-ಪಾರಶಾಲಾ ಮಲೆನಾಡು ಹೆದ್ದಾರಿಯನ್ನು ಅತ್ತನಾಡಿಯಲ್ಲಿ ಸಂಪಕರ್ಿಸುವ ಕಾರಣ ಈ ರಸ್ತೆಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ರಸ್ತೆಯ ಪ್ರಾಧಾನ್ಯತೆಯನ್ನು ಮನಗಂಡು ಕೂಡಲೇ ದುರಸ್ತಿಗೆ ಸಂಬಂಧಪಟ್ಟ ಅಧಿಕೃತರು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
   ಕೋಟ್ಸ್:
 ಈ ರಸ್ತೆಯನ್ನು ಡಾಮರೀಕರಿಸಿ ಹತ್ತು ವರ್ಷ ಕಳೆದರೂ ಸಂಪೂರ್ಣ ಹದಗೆಟ್ಟಿ ಈ ರಸ್ತೆಯನ್ನು ದುರಸ್ತಿಗೊಳಿಸದಿರುವುದು ವಿಪರ್ಯಾಸ. ಈ ರಸ್ತೆಯಲ್ಲಿ ವಾಹನ ಸಂಚಾರ ಬಹುತೇಕ ಸ್ಥಗಿತಗೊಂಡಿದೆ.  ದುರಸ್ತಿಗೆ ಗ್ರಾಮ ಪಂಚಾಯತ್ ಕೂಡಲೇ ಕ್ರಮ ಕೈಗೊಳ್ಳಬೇಕು.
                      ....ದಿಲೀಪ ಕುಂಟಾರು, ವಾಹನ ಚಾಲಕ

         

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries