ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ, ವಿಶ್ವಸಂಸ್ಥೆ ವರದಿಯನ್ನು ತಿರಸ್ಕರಿಸಿದ ಭಾರತ
ನವದೆಹಲಿ: ಕಾಶ್ಮೀರದಲ್ಲಿ ದುರುದ್ದೇಶಪೂರಿತ, ಪ್ರೇರಣೆಗಳಿಂದ ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿದೆ ಎನ್ನುವ ವಿಶ್ವಸಂಸ್ಥೆಯ ಆರೋಪವನ್ನು ಭಾರತ ತಳ್ಳಿಹಾಕಿದೆ.
ವಿಶ್ವಸಂಸ್ಥೆಯ ವರದಿಯ ಕುರಿತಂತೆ ಖಡಕ್ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ವರದಿಯು "ಪೂವರ್ಾಗ್ರಹಪೀಡಿತವಾಗಿದೆ" ಮತ್ತು "ಸುಳ್ಳು ನಿರೂಪಣೆಗಳನ್ನು" ಹೊಂದಿದೆ ಎಂದು ತಿಳಿಸಿದೆ.
ಗುರುವಾರ ವಿಶ್ವಸಂಸ್ಥೆ ಬಿಡುಗಡೆಗೊಳಿಸಿದ್ದ ವರದಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಆಡಳಿತದ ಕಾಶ್ಮೀರ ಪ್ರದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ, ಈ ದುರ್ವರ್ತನೆ ವಿರುದ್ಧ ಅಂತಾರಾಷ್ಟ್ರೀಯ ತನಿಖೆ ಆಗಬೇಕೆಂದು ಹೇಳಿದೆ.
"ಭಾರತ ಇದನ್ನು ತಿರಸ್ಕರಿಸುತ್ತದೆ.ಇದು ಸುಳ್ಳು ನಿರೂಪಣೆಯಿಂದ ಕುಡಿದೆ.ಪ್ರಚೋದನಾಕಾರಿಯಾಗಿದೆ.ಇಷ್ಟಕ್ಕೂ ಈ ವರದಿಯನ್ನು ಹೊರತಂದ ಉದ್ದೇಶವನ್ನು ನಾವು ಪ್ರಶ್ನಿಸುತ್ತೇವೆ" ಎಂಇಎ ಹೇಳಿದೆ.
ಈ ವರದಿಯಲ್ಲಿರುವ ಮಾಹಿತಿ ಸಾಕಷ್ಟು ಪರಿಶೀಲನೆನಡೆಸದೆ ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯ ವಿವರಿಸಿದೆ.
"ವರದಿಯು ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘಿಸಿದೆ.ಜಮ್ಮು ಮತ್ತು ಕಾಶ್ಮೀರದ ಸಂಪೂರ್ಣ ರಾಜ್ಯವು ಭಾರತದ ಅವಿಭಾಜ್ಯ ಅಂಗವಾಗಿದೆ. ಪಾಕಿಸ್ತಾನ ಅಕ್ರಮವಾಗಿ ಭಾರತೀಯ ರಾಜ್ಯದ ಒಂದು ಭಾಗವನ್ನು ಆಕ್ರಮಿಸಿಕೊಂಡಿದೆ ಎಂದು ಸಚಿವಾಲಯ ತಿಳಿಸಿದೆ