ಕನ್ನಡ ಗಝಲ್- ಕವಯಿತ್ರಿ ಚೇತನಾ ಕುಂಬಳೆ.
ಒಡಲಲಿ ಉಸಿರು ನಿಲ್ಲುವ ಮುನ್ನ
ನನ್ನುಸಿರಲ್ಲಿ ಉಸಿರಾಗಿ ಬಿಡು
ಎದೆಯ ಬಡಿತ ನಿಲ್ಲುವ ಮುನ್ನ
ಹೃದಯದ ಮಾತನು ಕೇಳಿ ಬಿಡು/
ಮುಪ್ಪು ಆವರಿಸುವ ಮುನ್ನ
ಸಿಂಧೂರ ತೊಡಿಸಿ ಸಪ್ತಪದಿ ತುಳಿದು ಬಿಡು
ಇಟ್ಟ ನಿರೀಕ್ಷೆಗಳು ಹುಸಿಯಾಗುವ ಮುನ್ನ
ಮನದ ಪ್ರೀತಿಯನು ಹೇಳಿ ಬಿಡು/
ಮಧುರ ಭಾವನೆಗಳು ಮುನಿಸಿಕೊಳ್ಳುವ ಮುನ್ನ
ಒಲವ ಸುಧೆಯ ಹರಿಸಿ ರಮಿಸಿ ಬಿಡು
ಒಂಟಿತನ ಕಾಡುವ ಮುನ್ನ
ಸವಿಮಾತುಗಳಿಗೆ ಕಿವಿಯಾಗಿ ಬಿಡು/
ಕಣ್ಣೀರು ಕಾಡಿಗೆಯನೊರೆಸುವ ಮುನ್ನ
ಕಣ್ಗಳೊಳಗೆ ನೀನೊಮ್ಮೆ ತುಂಬಿ ಬಿಡು
ನಡಿಗೆಯ ಲಯ ತಪ್ಪುವ ಮುನ್ನ
ಕೈ ಹಿಡಿದು ಒಮ್ಮೆ ನಡೆಸಿ ಬಿಡು/
ಚೇತನಾ ಕುಂಬೆ
ಒಡಲಲಿ ಉಸಿರು ನಿಲ್ಲುವ ಮುನ್ನ
ನನ್ನುಸಿರಲ್ಲಿ ಉಸಿರಾಗಿ ಬಿಡು
ಎದೆಯ ಬಡಿತ ನಿಲ್ಲುವ ಮುನ್ನ
ಹೃದಯದ ಮಾತನು ಕೇಳಿ ಬಿಡು/
ಮುಪ್ಪು ಆವರಿಸುವ ಮುನ್ನ
ಸಿಂಧೂರ ತೊಡಿಸಿ ಸಪ್ತಪದಿ ತುಳಿದು ಬಿಡು
ಇಟ್ಟ ನಿರೀಕ್ಷೆಗಳು ಹುಸಿಯಾಗುವ ಮುನ್ನ
ಮನದ ಪ್ರೀತಿಯನು ಹೇಳಿ ಬಿಡು/
ಮಧುರ ಭಾವನೆಗಳು ಮುನಿಸಿಕೊಳ್ಳುವ ಮುನ್ನ
ಒಲವ ಸುಧೆಯ ಹರಿಸಿ ರಮಿಸಿ ಬಿಡು
ಒಂಟಿತನ ಕಾಡುವ ಮುನ್ನ
ಸವಿಮಾತುಗಳಿಗೆ ಕಿವಿಯಾಗಿ ಬಿಡು/
ಕಣ್ಣೀರು ಕಾಡಿಗೆಯನೊರೆಸುವ ಮುನ್ನ
ಕಣ್ಗಳೊಳಗೆ ನೀನೊಮ್ಮೆ ತುಂಬಿ ಬಿಡು
ನಡಿಗೆಯ ಲಯ ತಪ್ಪುವ ಮುನ್ನ
ಕೈ ಹಿಡಿದು ಒಮ್ಮೆ ನಡೆಸಿ ಬಿಡು/
ಚೇತನಾ ಕುಂಬೆ