HEALTH TIPS

No title

                 ಅಬ್ಬರದ ಮಳೆ=ಅಪಾರ ನಾಶನಷ್ಟ: ಮರಗಳು ಬಿದ್ದು ಹಲವೆಡೆ ಸಾರಿಗೆ ಅಡಚಣೆ= ವಿದ್ಯುತ್ ಇಲ್ಲದೆ ಕತ್ತಲಲ್ಲಿ ಗ್ರಾಮೀಣ ಜನರು
      ಕಾಸರಗೋಡು: ಧಾರಾಕಾರ  ಮಳೆ ಮತ್ತು ಬಿರುಗಾಳಿ ಜಿಲ್ಲೆಯ ಹಲವೆಡೆ  ಮುಂದುವರಿಯುತ್ತಿದ್ದು ಭಾರೀ ನಾಶನಷ್ಟವುಂಟುಮಾಡಿದೆ.
         ವಿದ್ಯಾನಗರ ಕೈಗಾರಿಕಾ ಪ್ರಾಂಗಣದ ಒಳಗಡೆ ಕಲೆಕ್ಟರೇಟ್ಗೆ ತೆರಳುವ ಕಿರು ಗೇಟಿನ ಬಳಿ ಶುಕ್ರವಾರ ರಾತ್ರಿ  ಬೃಹತ್ ಮರ ಬುಡಸಹಿತ ಕುಸಿದು ರಸ್ತೆಗೆ ಅಡ್ಡವಾಗಿ ಬಿದ್ದಿದು ಅದರ ಅಡಿಯಲ್ಲಿ ನಿಲ್ಲಿಸಿದ್ದ ಹಳೆ ಕಾರು  ನಜ್ಜುಗುಜ್ಜಾಗಿದೆ.
    ನಗರದ ತಾಳಿಪಡ್ಪು ಉಮಾ ನಸರ್ಿಂಗ್ ಹೋಮ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ರಾತ್ರಿ ತೇಗಿನ ಮರ ಕುಸಿದು ರಸ್ತೆಗೆ ಬಿದ್ದಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಒಂದು ತಾಸು ಸಾರಿಗೆ ಅಡಚಣೆಯುಂಟಾಯಿತು. ಜೊತೆಗೆ ಕರಂದಕ್ಕಾಡ್ ಜಂಕ್ಷನ್ ಬಳಿಯೂ ರಸ್ತೆಗೆ ಮರ ಬಿದ್ದಿದೆ.
    ಮುಳಿಯಾರು ಬಳಿಯ  ಕೋಟೂರು ತಿರುವಿನಲ್ಲಿ ಮರ ಕುಸಿದು ರಸ್ತೆಗೆ ಅಡ್ಡಾದಿಡ್ಡಿಯಾಗಿ ಬಿದ್ದಿದೆ. ಎರಡು ವಿದ್ಯುತ್ ಕಂಬಗಳು ಇಲ್ಲಿ ಮುರಿದು ಬಿದ್ದಿವೆ. ಬೇವಿಂಜ ತಿರುವಿನಲ್ಲಿ ಮರ ರಸ್ತೆಗೆ ಬಿದ್ದಿದೆ. ಕಾಸರಗೋಡು ಅಗ್ನಿಶಾಮಕದಳ ತೆರಳಿ ಮರ ಕಡಿದು ರಸ್ತೆ ತಡೆ ತೆರವುಗೊಳಿಸಿದೆ.
    ಗಾಳಿ ಮಳೆಗೆ ಮರಗಳು ತುಂಡಾಗಿ ವಿದ್ಯುತ್ ಕಂಬ ಮತ್ತು ತಂತಿಗಳ ಮೇಲೆ ಬಿದ್ದಿರುವುದರಿಂದ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕಿನ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವುಂಟಾಗಿದೆ.  ವಿದ್ಯಾನಗರ ಬಿ.ಸಿ ರೋಡ್ನಲ್ಲಿ ಮರ ಮುರಿದು ವಿದ್ಯುತ್ ತಂತಿ ಮೇಲೆ ಬಿದ್ದಿದೆ. ಇದರಿಂದ ಈ ಪ್ರದೇಶದಲ್ಲಿ ವಿದ್ಯುತ್ ವಿತರಣೆ ಮೊಟಕುಗೊಂಡಿದೆ.
    ಮಂಜೇಶ್ವರಳ
    ವಕರ್ಾಡಿ, ಮೀಂಜ ಪಂಚಾಯತ್ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಮರ ಬಿದ್ದು ರಸ್ತೆ ತಡೆ ಸೃಷ್ಟಿಯಾಗಿದೆ.
       ಕುಂಜತ್ತೂರು ತೂಮಿನಾಡು ಎಂಬಲ್ಲಿ ವಿದ್ಯುತ್ ಕಂಬವೊಂದು ಚಲಿಸುತ್ತಿದ್ದ ಆಟೋರಿಕ್ಷಾಕ್ಕೆ ಬಿದ್ದಿದೆ. ಇದರಿಂದ ರಿಕ್ಷಾಕ್ಕೆ ಹಾನಿಯಾಗಿದ್ದು, ಪ್ರಯಾಣಿಕರು ಗಾಯಗಳಿಲ್ಲದೆ ಪಾರಾಗಿದ್ದಾರೆ. ಇದರ ಸಮೀಪದ ಶ್ರೀ ಮಹಾಕಾಳಿ ಭಜನಾ ಮಂದಿರದ ದ್ವಾರದ ಬಳಿ ಮರವೊಂದು ರಸ್ತೆಗೆ ಬಿದ್ದು ಅಲ್ಪ ಹೊತ್ತು ರಸ್ತೆ ತಡೆಗೆ ಸೃಷ್ಟಿಯಾಗಿದೆ. ತೂಮಿನಾಡು ಉದಯನಗರದ ಮಾಧವ, ಲಕ್ಷ್ಮಿ ಎಂಬವರ ಮನೆಗೆ ಸಮೀಪ ಬೃಹತ್ ಹಲಸಿನ ಮರ ಮುರಿದು ಬಿದ್ದಿದ್ದು, ಆದರೆ ಮನೆಗಳಿಗೆ ಹಾನಿ ಉಂಟಾಗಿಲ್ಲ.  ಮುರತ್ತಣೆ ಗಾಂಧಿ ನಗರದಲ್ಲಿ ಅಕೇಶಿಯಾ ಮರವೊಂದು ರಸ್ತೆಗೆ ಬಿದ್ದು, ಸಂಚಾರ ತಡೆ ಸೃಷ್ಟಿಯಾಗಿದೆ. ಇದರ ಸಮೀಪವೇ ಅಲ್ಪದೂರ ಇನ್ನೊಂದು ಮರ ಎಚ್.ಟಿ. ಲೈನ್ಗೆ ಬಿದ್ದಿದ್ದು, ಈ ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.
ಹೊಸಂಗಡಿ ಯಿಂದ ಆನೆಕಲ್ಲು ಭಾಗಕ್ಕೆ ತೆರಳುವ ಬಸ್ ಸಹಿತ ವಾಹನಗಳು ಪಾವೂರು ಕ್ರಾಸ್ ರಸ್ತೆಯಾಗಿ ಬೇಕರಿ ಜಂಕ್ಷನ್ ಮೂಲಕ ಸಂಚರಿಸುತ್ತಿವೆ.
   ಉಪ್ಪಳ ಮಣಿಮುಂಡ ದ್ವೀಪ:
   ಉಪ್ಪಳ: ಉಪ್ಪಳ ಸಮೀಪದ ಕಡಲ ಸನಿಹದ ಪ್ರದೇಶಗಳಾದ ಮಣಿಮುಂಡ ಕೀಯೂರು ಹಾಗೂ ಶಾರದಾನಗರ ಭಾರೀ ಮಳೆಗೆ ಅಕ್ಷರಶಃ ದ್ವೀಪವಾಗಿ ಮಾರ್ಪಟ್ಟಿದೆ. ಶುಕ್ರವಾರ ರಾತ್ರಿ ಹಾಗೂ ಶನಿವಾರ ಈ ಪ್ರದೇಶಗಳ 20 ರಷ್ಟು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು ಮುಂದಿನ ಒಂದುವಾರಗಳಷ್ಟು ಕಾಲ ವಿದ್ಯುತ್ ಇಲ್ಲದೆ ಕಳೆಯಬೇಕಿದೆ. ಜೊತೆಗೆ ಹಲವಾರು ಮರಗಳೂ ಧರಾಶಾಯಿಯಾಗಿದೆ.
    ಮಣಿಮುಂಡ, ಶಾರದಾನಗರಗಳು ರೈಲು ಮಾರ್ಗದ ಹೊರಬದಿಗಿರುವುದರಿಂದ ಆ ಪ್ರದೇಶಗಳಿಂದ ಉಪ್ಪಳ ಸಹಿತ ಹೊರ ಪ್ರದೇಶಗಳಿಗೆ ತೆರಳಲು ನಾಗರಿಕರು ಪರಡಾಡುತ್ತಿದ್ದಾರೆ. ಬೇಸಿಗೆಯಲ್ಲಾದರೆ ರೈಲಿ ಹಳಿಯ ಸೇತುವೆ ಕೆಳಭಾಗದಿಂದ ತೆರಳಬಹುದಾಗಿದ್ದರೆ ಮಳೆಗಾಲ ಆರಂಭವಾಗುತ್ತಿರುವಂತೆ ಹೊರ ಪ್ರದೇಶಗಳಿಗೆ ತೆರಳಲಾರದ ಸ್ಥಿತಿ ಇದೆ. ಇದು ನೂರಾರು ಕುಟುಂಬಗಳ ತುತರ್ು ಅಗತ್ಯಗಳಿಗೆ ತೊಂದರೆಯಾಗುತ್ತಿದೆ. ಈ ಮಧ್ಯೆ ರೈಲ್ವೇ ಮೇಲ್ಸೇತುವೆಯ ಹಲವು ವರ್ಷಗಳ ಬೇಡಿಕೆ ಈಡೇರದಿರುವುದೂ ಸಮಸ್ಯೆ ಮುಂದುವರಿಯಲು ಕಾರಣವಾಗಿದೆ. ಜೊತೆಗೆ ಕಡಲ ತೆರೆಗಳ ಉಬ್ಬರವೂ ಅಧಿಕಗೊಂಡಿರುವುದರಿಂದ ನೂರಾರು ಕುಟುಂಬಗಳು ಅತಂತ್ರತೆಯ ಭೀತಿ ಎದುರಿಸುತ್ತಿವೆ.
   






Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries