HEALTH TIPS

No title

                  ಏತಡ್ಕದಲ್ಲಿ ಐತಿಹಾಸಿಕ ಹಲಸಿನ ಅಪ್ಪಸೇವೆ ಜೂ.24 ರಂದು
                  ಐದು ದಶಕಗಳ ಇತಿಹಾಸ!
  ಬದಿಯಡ್ಕ: ಏತಡ್ಕದ ಶ್ರೀಸದಾಶಿವ ದೇವಸ್ಥಾನದಲ್ಲಿ ಕಳೆದ ಐದು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಚಾಲ್ತಿಯಲ್ಲಿರುವ ಹಲಸಿನ ಹಣ್ಣಿನ ಅಪ್ಪಸೇವೆ ಈ ಬಾರಿ ಜೂ. 24 ರಂದು ಸಾಂಪ್ರದಾಯಿಕ ಶ್ರದ್ದಾ ಭಕ್ತಿಗಳಿಂದ ನಡೆಯಲಿದೆ.
   ಪ್ರತಿವರ್ಷ ಕಾತರ್ಿಕ ಮಾಸದಲ್ಲಿ ಈ ವಿಶೇಷ ಸೇವೆಯನ್ನು ನಡೆಸಲಾಗುತ್ತಿದ್ದು, ಹಲಸಿನ ಹಣ್ಣಿನ ಅಪ್ಪ ತಯಾರಿಸಿ ಏತಡ್ಕ ಗ್ರಾಮಸ್ಥರೆಲ್ಲರೂ ಜೊತೆಯಾಗಿ ಹಲಸಿನ ಮಹಿಮೆಯನ್ನು ದೇವರ ಮುಂದೆ ಕೊಂಡಾಡಿ ತಯಾರಿಸಿದ ಅಪ್ಪವನ್ನು ನ್ಯಪೇದ್ಯವಾಗಿ ಭಗವದರ್ಪಣೆಗೈದು ಕೃತಾರ್ಥರಾಗುತ್ತಾರೆ. ಹಳೆಯ ತಲೆಮಾರಿನ ಹಿರಿಯರು ಹೊಟ್ಟೆಹೊರೆಯಲು ಹಲಸನ್ನು ಬಳಸಿ ಬದುಕಿದ ಉಪಕಾರ ಸ್ಮರಣೆ ಇಲ್ಲಿಯ ಗ್ರಾಮಸ್ತರದ್ದು.
   ಹಿನ್ನೆಲೆ:
   ದಶಕಗಳ ಹಿಂದೆ ಏತಡ್ಕ ಗ್ರಾಮವಾಸಿಯೊಬ್ಬರಿಗೆ ಮನೆಯಲ್ಲಿ ಉಣ್ಣುವುದಕ್ಕೆ ಬಡತನದಿಂದ ಸಂಕಷ್ಟ ಎದುರಾದಾಗ ಆಗಮಿಸಿದ ಬಂಧುಗಳಿಗೆ ರುಚಿಕಟ್ಟಾದ ಹಲಸಿನ ಹಣ್ಣಿನ ತೊಳೆಯನ್ನು ನೀಡಿ ಬಳಿಕ ಊಟದ ತಟ್ಟೆ ಇಟ್ಟಾಗ ಒಂದಿಷ್ಟು ಗಂಜಿಯಲ್ಲಿ ಮಯರ್ಾದೆ ಉಳಿದ ಬಗ್ಗೆ ಗೃಹಿಣಿಯೋವರ್ೆ ಏತಡ್ಕ ಶ್ರೀದೇವರ ನಡೆಯಲ್ಲಿ ನಿವೇದಿಸಿದರಂತೆ. ತನ್ನ ಮಯರ್ಾದೆಯನ್ನು ಉಳಿಸಿದ ಶ್ರೀದೇವರ ಸ್ಮರಣೆಗೆ ಆ ಮಹಿಳೆ ಹಲಸಿನ ಹಣ್ಣಿನ ಅಪ್ಪ ತಯಾರಿಸಿ ನೀಡಿದ್ದರ ಪ್ರತೀಕವಾಗಿ ಇದೀಗಲೂ ವರ್ಷಕ್ಕೊಮ್ಮೆ ಕಾತರ್ಿಕ ಮಾಸದಲ್ಲಿ ಈ ಸೇವೆ ಶ್ರದ್ದಾ ಭಕ್ತಿಯಿಂದ ನಡೆದುಬರುತ್ತಿದೆ.
   ಜೂ. 24 ರಂದು ಭಾನುವಾರ ಏತಡ್ಕ ಶ್ರೀಕ್ಷೇತ್ರದಲ್ಲಿ ಮಧ್ಯಾಹ್ನ ಅಪ್ಪಸೇವೆ ನಡೆಯಲಿದ್ದು ಗ್ರಾಮದ-ಪರವೂರಿನ ನೂರಾರು ಮಂದಿ ಪಾಲ್ಗೊಳ್ಳುತ್ತಾರೆ.
  

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries