HEALTH TIPS

No title

              ಕೇಂದ್ರ ಸಾಧನೆಗಳ ಜೊತೆ ವೈಫಲ್ಯಗಳನ್ನೂ ಒಪ್ಪಿಕೊಳ್ಳಬೇಕು: ನೀತಿ ಆಯೋಗ ಉಪಾಧ್ಯಕ್ಷ
     ನವದೆಹಲಿ: ಆಡಳಿತ ವೈಫಲ್ಯ, ಅಸಮರ್ಪಕ ನೀತಿ ನಿರೂಪಣೆ, ಕ್ಷೀಣಿಸುತ್ತಿರುವ ಆಥರ್ಿಕತೆ ಇದೆಲ್ಲದರ ಪರಿಣಾಮದ ಹೊರತಾಗಿ ಕೇಂದ್ರ ಸಕರ್ಾರದ ಹಿರಿಯ ನಾಯಕರು ಕಾಂಗ್ರೆಸ್ ಮೇಲೆ ಮುಗಿ ಬಿದ್ದಿದ್ದಾರೆ. ಆದರೆ ಇದೀಗ ನೀತಿ ಆಯೋಗದ ಉಪಾಧ್ಯಕ್ಷ ಹೇಳುವಂತೆ  ಕೇಂದ್ರ ಸಕರ್ಾರವು ಕೇವಲ ಅದರ ಸಾಧನೆಗಳಿಗೆ ಮಾತ್ರವಲ್ಲ ಅದರ ವೈಫಲ್ಯಗಳಿಗೂ ಹೊಣೆಗಾರನಾಗುತ್ತದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದರು.
     ಕಳೆದ ನಾಲ್ಕು ವರ್ಷಗಳ ನರೇಂದ್ರ ಮೋದಿ ಸಕರ್ಾರ ಯುಪಿಎ ಆಡಳಿತದ ಅವಧಿಯಲ್ಲಿದ್ದ ಬಹುತೇಕ ಆಥರ್ಿಕ ಸಮಸ್ಯೆಗಳನ್ನು ಬಗೆಹರಿಸಿದೆ. ಮತ್ತು ಇದೀಗ ಸಕರ್ಾರ ತನ್ನ ಸ್ವಂತ ಅರ್ಹತೆಯ ಮೇಲೆ  ತೀಮರ್ಾನಕ್ಕೆ ಬರಲು ಮುಂದಾಗಲಿದೆ ಎಂದು ಅವರು ಹೇಳಿದ್ದಾರೆ.
    "ಆಥರ್ಿಕತೆಯು ಅದರ ಪಾರಂಪರಿಕ ಸಮಸ್ಯೆಗಳಿಂದ ಹೊರಬಂದಿದೆ. ಇದನ್ನು ಯಾರೊಬ್ಬರೂ ಹಗುರವಾಗಿ ಪರಿಗಣಿಸಬಾರದು. ಅದೇನು ಆಗಬೇಕಿದೆಯೋ ಅದನ್ನು ಸಕರ್ಾರ ಸಂಪೂರ್ಣವಾಗಿ ಕಾರ್ಯಗತಗೊಳಿಸಲಿದೆ"
    "ಎಲ್ಲಾ ಸಮಸ್ಯೆಗಳ ಹೊರತಾಗಿಯೂ ಸಕರ್ಾರ ಏನೆಲ್ಲವನ್ನೂ ಮಾಡಿದ್ದು ಇದಕ್ಕಾಗಿ ಸಕರ್ಾರ ದೊಡ್ಡ ಪ್ರಮಾಣದ ರಚನಾತ್ಮಕ ಸುಧಾರಣೆಗಳಾದ ಅಪನಗದೀಕರಣ, ಜಿಎಸ್ಟಿ, ದಿವಾಳಿತನ ಸಂಹಿತೆ ಹಾಗೂ ಬೇನಾಮಿ ಕಾಯ್ದೆ, ರೇರಾ, ಬ್ಯಾಂಕುಗಳ ಸುಧಾರಣೆಗೆ ನಾನಾ ಕ್ರಮ ಕೈಗೊಂಡಿದೆ. ಇದೀಗ ನಾವುಗಳು ಹಳೆಯ ಸಮಸ್ಯೆಗಳಿಂದ ಹೊರತಾಗಿದ್ದು ಸಕರ್ಾರವು  ತನ್ನದೇ ಆದ  ತೀಮರ್ಾನ ತೆಗೆದುಕೊಳ್ಳುವುದಕ್ಕೆ ಶಕ್ತವಾಗಿದೆ" ರಾಜೀವ್ ಹೇಳಿದ್ದಾರೆ.
  ಬಿಜೆಪಿ ಸಕರ್ಾರ, ಪ್ರಧಾನಿ ಮೋದಿ, ಅರುಣ್  ಜೇಟ್ಲಿ ಸೇರಿದಂತೆ ಹಲವು ಹಿರಿಯ ಮುಖಂಡರು ಕಾಂಗ್ರೆಸ್ ನ ಯುಪಿಎ ಅಧಿಕಾರಾವಧಿಯಲ್ಲಿ ನಿರೂಪಿತವಾದ ಕೆಲವು ಕ್ರಮಗಳಿಂದ ದೇಶದ ಆಥರ್ಿಕತೆಯನ್ನು ಸುಧಾರಿಸಲು ನಮಗೆ ಸಮಯ ಹಿಡಿಯುತ್ತದೆಂದು ಇತ್ತೀಚಿನವರೆಗೆ ಹೇಳುತ್ತಲೇ ಬಂದಿದ್ದರು. ಈ ಹಿನ್ನೆಲೆಯಲ್ಲಿ ನೀತಿ ಆಯೋಗದ ಉಪಾಧ್ಯಕ್ಷರ ಈ ಹೇಳಿಕೆ ಪ್ರಾಮುಖ್ಯತೆ ಪಡೆದುಕೊಂಡಿದೆ.
   ನೀರವ್ ಮೋದಿ ಪಿಎನ್ಬಿ ವಂಚನೆಯಿಂದ ಹಿಡಿದು, ನಿಧಾನಗತಿಯ ಜಿಡಿಪಿ ಬೆಳವಣಿಗ, ಹಣಕಾಸಿನ ಕೊರತೆ, ಹೆಚ್ಚುತ್ತಿರುವ ತೈಲ ಬೆಲೆ ಎಲ್ಲಕ್ಕೂ ಹಿಂದಿನ ಯುಪಿಎ ಸಕರ್ಾರದ ನೀತಿಗಳು ಕಾರಣ ಎಂದು ಕೇಂದ್ರ ನಾಯಕರು ಹೇಳುತ್ತಾ ಬಂದಿದ್ದಾರೆ. ಇದೀಗ ನೀತಿ ಆಯೋಗ ಉಪಾಧ್ಯಕ್ಷರು ಇದಕ್ಕೆ ವ್ಯತಿರಿಕ್ತವಾದ   ವಿವರಣೆ ನಿಡಿದ್ದಾರೆ.
   "ಕೇಂದ್ರ ಸಕರ್ಾರ ಅಧಿಕಾರಕ್ಕೆ ಬಂದ ವೇಳೆ ಆಥರ್ಿಕ ಪರಿಸ್ಥಿತಿ ಭಯಾನಕವಾಗಿತ್ತು. ಆಡಳಿತ ನೀತಿ ನಿರೂಪಣೆಯು ಸಂಪೂರ್ಣ ನೆಲಕಚ್ಚಿತ್ತು. ಪಾರಂಪರಿಕ ಆಥರ್ಿಕ ಸಮಸ್ಯೆಗಳಿದ್ದವು. ವಿಶ್ವ ಆಥರ್ಿಕತೆಯೂ ಸಹ ಉತ್ತಮವಾದ ಪರಿಸ್ಥಿತಿಯಲ್ಲಿರಲಿಲ್ಲ. ಇಷ್ಟೆಲ್ಲದರ ಹೊರತಾಗಿಯೂ ಈ ಸಕರ್ಾರ ಉತ್ತಮ ಕೆಲಸ ಮಾಡಿದೆ ಎಂದು ನಾನು ಭಾವಿಸುತ್ತೇನೆ "ಕುಮಾರ್ ಹೇಳಿದರು.
      2014 ರಲ್ಲಿ ಬಿಜೆಪಿ ಅಧಿಕಾರ ವಹಿಸಿಕೊಂಡಾಗ ಹಣದುಬ್ಬರವು ಶೇ. 9ರಾಷ್ಟಿತ್ತು, ಬೆಳವಣಿಗೆ ದರ ಶೇಕಡ 6 ಕ್ಕಿಂತ ಕಡಿಮೆಯಾಗಿತ್ತು ಎಂದು ಅವರು ಹೇಳಿದ್ದಾರೆ.
ಆಗಿನ ಹಣಕಾಸು ಸಚಿವರಾಗಿದ್ದ ಪಿ. ಚಿದಂಬರಂ "2.8 ರಿಂದ  6.4 ಶೇಕಡಾ ವರೆಗೆಹಣದುಬ್ಬರ ಹೆಚ್ಚಳವಾಗಲು ಕಾರಣರಾಗಿದ್ದರು. ಆದರೆ ನಾವಿಂದು  6.7 ರಷ್ಟು ಬೆಳವಣಿಗೆ ದರವನ್ನು ಸಾಧಿಸಿದ್ದೇವೆ.  ಕಳೆದ ತ್ರೈಮಾಸಿಕದಲ್ಲಿಬೆಳವಣಿಗೆ ದರದ ಪ್ರಮಾಣ  7.7 ಶೇಕಡಾಗೆ ತಲುಪಿದೆ. ಹಣದುಬ್ಬರ ಪ್ರಮಾಣ 3.8 ಶೇಕಡಾ ಆಗಿದೆ.ಇದು ಗಮನಾರ್ಹ ಬೆಳವಣಿಗೆ ಎಂದು ಪರಿಗಣಿಸಬಹುದು.
   2017-18ರಲ್ಲಿ ಹಣಕಾಸಿನ ಕೊರತೆಯು 3.5 ಶೇ. ಮತ್ತು ಪ್ರಸಕ್ತ ಆಥರ್ಿಕ ವರ್ಷದಲ್ಲಿ 3.3 ಶೇ.ದಷ್ಟಾಗಿದೆ."ಈ ಸಕರ್ಾರವು ಸ್ಥೂಲ ಆಥರ್ಿಕ ಸಮತೋಲನವನ್ನು ಉಳಿಸಿಕೊಂಡಿದೆ ಮತ್ತು ಅದರ ಮಾರ್ಗದಲ್ಲಿ ಬೆಳವಣಿಗೆ ಸಾಧಿಸಿದೆ ಅಷ್ಟೇ ಅಲ್ಲದೆ  ಆಥರ್ಿಕತೆಯನ್ನು ಹೆಚ್ಚು ಸ್ವಚ್ಛಗೊಳಿಸಿದೆ ಮತ್ತು ಹೆಚ್ಚು ಜನೋಪಕಾರಿಯನ್ನಾಗಿಸಿದೆ." ಅವರು ಹೇಳಿದರು.
     ಸಕರ್ಾರ ಗುರುತಿಸಿರುವ ಒಂದು ಸ್ಪಷ್ಟವಾದ ಪಾತ್ರ ರೈತರ ಆದಾಯವಾಗಿದೆ.ಇದೀಗ ಆ ಅಂಶವನ್ನು ಬಜೆಟ್ ನಲ್ಲಿ ಹೇಳುವವರಿದ್ದಾರೆ ಎಂದು ನಾನು ಭಾವಿಸುತ್ತೇನೆ.. ಕೃಷಿ ಕ್ಷೇತ್ರವು ಹಿಂದುಳಿದ ವಲಯ ಮತ್ತು ಇದಕ್ಕೆ ಸಾಕಷ್ಟು ಸುಧಾರಣೆಗಳು ಬೇಕಾಗುತ್ತವೆ. ರಫ್ತು ಕ್ಷೇತ್ರದಲ್ಲಿನ ಕಾರ್ಯಕ್ಷಮತೆ ಕಳವಳಕ್ಕೆ ಕಾರಣವಾಗಿದೆ ನೀರಿನ ಬಿಕ್ಕಟ್ಟು ಬಲವಾಗುತ್ತಾ ಸಾಗಿದೆ., ಶಿಕ್ಷಣದ ಗುಣಮಟ್ಟದ ಕಡೆ ಗಮನಹರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇವುಗಳು ದೀರ್ಘಕಾಲದ ಸಮಸ್ಯೆಗಳಾಗಿವೆ ಆದರೆ ಅವರು ಈ ಸಮಸ್ಯೆಗಳನ್ನು ಸಕರ್ಾರ ಗುರುತಿಸಿದೆ. ಅದಕ್ಕಾಗಿ ಸಕರ್ಾರವನ್ನು ಮೆಚ್ಚಬೇಕು. ಸಮಸ್ಯೆಗಳನ್ನು ಮರೆಮಾಚಲು, ಅಥವಾ ಮುಚ್ಚಿಡಲು ಅದು ಪ್ರಯತ್ನಿಸುತ್ತಿಲ್ಲ.ಅವರು ಹೊಸ ವಿಧಾನಗಳನ್ನು ಪ್ರಯೋಗಿಸುತ್ತಿದ್ದಾರೆ.. ಶಿಕ್ಷಣ ಗುಣಮಟ್ಟ, ಜಲ ಸಂರಕ್ಷಣೆ, ಆರೋಗ್ಯ ಕ್ಷೇತ್ರದ ಮೇಲೆ ಹೆಚ್ಚಿನ ಕಾರ್ಯಕ್ರಮ ನಿರೂಪಿಸಬೇಕು.ಕುಮಾರ್ ಹೇಳಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries