HEALTH TIPS

No title

                 ಯೋಗ ಜನರ ಅಭಿಯಾನವಾಗಬೇಕು; ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು
      ಮುಂಬೈ: ಯೋಗ ಜನರ ಅಭಿಯಾನವಾಗಬೇಕು ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಗುರುವಾರ ಹೇಳಿದರು. 
           4ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರು ಅವರು, ಇದು ಉತ್ತಮ ಆರಂಭ. ನಾಲ್ಕು ವರ್ಷಗಳ ಹಿಂದೆ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಕಾರ್ಯಕ್ರಮವನ್ನು ಆರಂಭಿಸಿದ್ದರು. ಯೋಗ ಜನರ ಅಭಿಯಾನವಾಗಬೇಕೆಂದು ಬಯಸಿದ್ದೇನೆ. ಏಕೆಂದರೆ ಇದು ರಾಜಕೀಯ ಹಾಗೂ ಧಾಮರ್ಿಕವಲ್ಲದ ಕಾರ್ಯಕ್ರಮವಾಗಿದೆ. ನಮ್ಮ ಜೀವನ ಉತ್ತಮವಾಗಿಸಲು ಯೋಗ ಉಪಯುಕ್ತವಾಗಿದೆ. ಇದನ್ನು ಕೇವಲ ಒಂದು ದಿನದ ಆಚರಣೆಯಾಗಿ ಮಾಡಬಾರದು. ನಮ್ಮ ದಿನ ನಿತ್ಯದ ಜೀವನದಲ್ಲಿ ಅದು ಭಾಗವಾಗಬೇಕು ಎಂದು ಹೇಳಿದರು. 
   ಜೊತೆಗೆ ಬ್ಯಾಡ್ಮಿಂಟನ್ ಕ್ರೀಡೆಯನ್ನು ಹೊಗಳಿರುವ ಅವರು, ಪ್ರತೀನಿತ್ಯ 1 ಗಂಟೆಯಾದರೂ ಬ್ಯಾಡ್ಮಿಂಟನ್ ಆಟವನ್ನು ಆಡುತ್ತೇನೆ. ಇದರಿಂದ ನನ್ನ ದೇಹ ಆರೋಗ್ಯಕರವಾಗಿದ್ದು, ಅಧಿಕೃತ ಕೆಲಸಗಳನ್ನು ಶ್ರಮವಿಲ್ಲದಂತೆ ಮಾಡುತ್ತೇನೆಂದು ತಿಳಿಸಿದ್ದಾರೆ.
    ಜನರು ಪ್ರತೀನಿತ್ಯ ಯೋಗವನ್ನು ಮಾಡಿದರೆ, ಅದು ವಿಶ್ವ ಹಾಗೂ ರಾಷ್ಟ್ರವನ್ನು ಆರೋಗ್ಯವಾಗಿರುವಂತೆ ಮಾಡುತ್ತದೆ ಎಂದಿದ್ದಾರೆ.
ಬಳಿಕ ಮಾತನಾಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, ನಮ್ಮಿಂದ ಅಂತರಾಷ್ಟ್ರೀಯ ಯೋಗ ದಿನ ಆರಂಭವಾಗಿದ್ದಕ್ಕೆ ನಮಗೆ ಬಹಳ ಹೆಮ್ಮೆಯಿದೆ. ಇಂದು ವಿಶ್ವದಾದ್ಯಂತ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಉಪರಾಷ್ಟ್ರಪತಿ ತಿಳಿಸಿರುವರು

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries