ಶಿರಡಿಬಾಬಾ ಮಂದಿರದ ಪ್ರಥಮ ಪ್ರತಿಷ್ಠಾ ವರ್ಧಂತಿ
ಕುಂಬಳೆ: ನಾಯ್ಕಾಪಿನಲ್ಲಿ ವರ್ಷದ ಹಿಂದೆ ಅಸ್ತಿತ್ವಕ್ಕೆ ಬಂದ ಕಾಸರಗೋಡು ಜಿಲ್ಲೆಯ ಪ್ರಪ್ರಥಮ ಮತ್ತು ಏಕೈಕ ಶಿರಡಿ ಶ್ರೀ ಸಾಯಿಬಾಬಾ ಮಂದಿರದ ಪ್ರಥಮ ಪ್ರತಿಷ್ಠಾ ವರ್ಧಂತಿ ಶನಿವಾರ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಹೋಮ, ಮಧ್ಯಾಹ್ನ ಪೂಜೆ, ಸಂತರ್ಪಣೆ ಮತ್ತು ಸಂಜೆ ಸಂಕೀರ್ತನೆಯೊಂದಿಗೆ ನಡೆದ ಸರಳ ಸಮಾರಂಭದಲ್ಲಿ ನೂರಾರು ಭಕ್ತರು, ನಾಗರಿಕರು ಪಾಲ್ಗೊಂಡರು. ಸಮಾರಂಭಕ್ಕೆ ಆಗಮಿಸಿದ್ದ ತಿರುಪತಿ ಮೂಲದ ಶ್ರೀ ರಮಾನಂದ ಸ್ವಾಮೀಜಿ ಹಾಗೂ ಶಿರಡಿಯಿಂದಲೇ ಆಗಮಿಸಿದ ಅಚ್ಯುತಾನಂದ ಬಾಬಾಜಿ ಅವರನ್ನು ನಾಯ್ಕಾಪು ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಸಂಸ್ಥಾಪಕರಾದ ಉದ್ಯಮಿ ಅಂಪ ನಾಯಕ್ ಫಲತಾಂಬೂಲಗಳನ್ನಿತ್ತು ಕಾಣಿಕೆ ಸಮಪರ್ಿಸಿ ಗೌರವಿಸಿದರು. ಪತ್ರಕರ್ತ ಎಂ.ನಾ.ಚಂಬಲ್ತಿಮಾರ್ ಕಾರ್ಯಕ್ರಮ ನಿರೂಪಿಸಿದರು. ವಿವೇಕ್ ಭಕ್ತ ಕುಂಬಳೆ, ನಾಗಪ್ಪ ಕುಂಬಳೆ ಮೊದಲಾದವರು ಉಪಸ್ಥಿತರಿದ್ದರು. ನಾಯ್ಕಾಪು ಪರಿಸರದಲ್ಲಿ ವರ್ಷದ ಹಿಂದೆ ಲೋಕಾರ್ಪಣೆಗೊಂಡ ಶ್ರೀ ಶಿರಡಿ ಬಾಬಾ ಮಂದಿರಕ್ಕೀಗ ನೂರಾರು ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ. ಪ್ರತಿ ಗುರುವಾರ ವಿಶೇಷ ಪೂಜೆ, ಸಂಕೀರ್ತನೆ ನಡೆಯುತ್ತಿದೆ.