ಅಪಾಯಕಾರಿ ಕಾಲ್ಸೇತುವೆಯಲ್ಲಿ ಕಂದಮ್ಮಗಳ ನಿತ್ಯಸಂಚಾರ;
ಒದಗಿ ಬರುವುದೇ ಇದಕ್ಕೊಂದು ಶಾಶ್ವತ ಪರಿಹಾರ??
ಮುಳ್ಳೇರಿಯ: ಬೆಳ್ಳೂರು ಗ್ರಾಮ ಪಂಚಾಯಿತಿ ಪೆರುವತ್ತೋಡಿಯಿಂದ ಕಾಯಿಮಲೆ ತೆರಳುವ ಹಾದಿಯಲ್ಲಿನ ಅಪಾಯಕಾರಿ ಕಾಲ್ಸೇತುವೆ ದುರಂತವನ್ನು ಆಹ್ವಾನಿಸುವಂತಿದೆ.
ದಿನ ನಿತ್ಯ 20ರಷ್ಟು ಮುಗ್ಧ ಕಂದಮ್ಮಗಳು ಪೆರುವತ್ತೋಡಿಯಿಂದ ಬೆಳ್ಳೂರು,ಅಗಲ್ಪಾಡಿ, ಬೆಳಿಂಜ,ಬದಿಯಡ್ಕ ಶಾಲೆಗಳಿಗೆ ಹಾಗೂ ಕಾಯಿಮಲೆಯಿಂದ ಪನೆಯಾಲ,ವಾಣೀನಗರ ಶಾಲೆಗಳಿಗೆ ಈ ಕಾಲ್ಸೇತುವೆಯ ಮೂಲಕ ತೆರಳಬೇಕಾಗಿದೆ. ಸಣ್ಣ ಮಕ್ಕಳನ್ನು ಪೋಷಕರು ದಿನನಿತ್ಯ ಬೆಳಗ್ಗೆ ಹಾಗೂ ಸಂಜೆ ಮಕ್ಕಳನ್ನು ಸೇತುವೆ ದಾಟಿಸಲು ಜೊತೆಗೆ ಬರಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ.
ಸೇತುವೆಯ ಒಂದು ಭಾಗ ಪಂಚಾಯಿತಿಯ 11 ನೇ ವಾಡರ್್ ಕಾಯಿಮಲೆ, ಇನ್ನೊಂದು ಭಾಗ 12ನೇ ವಾಡರ್್ ಪೆರ್ವತ್ತೋಡಿ ವ್ಯಾಪ್ತಿಯಲ್ಲಿ ಒಳಗೊಂಡಿದೆ. ಪೆರ್ವತ್ತೋಡಿಯಿಂದ ಬೀಜದಕಟ್ಟೆ ಹಾದಿಯಾಗಿ ಬದಿಯಡ್ಕ ಹಾಗೂ ಮುಳ್ಳೇರಿಯಾ ತಲಾ 12 ಕಿ.ಮೀ, ಕಿನ್ನಿಂಗಾರು, ನಾಟೆಕಲ್ಲು ತಲಾ ಮೂರು ಕಿ.ಮೀ. ದೂರವಿದೆ.
ಕಿನ್ನಿಂಗಾರ್ ನಲ್ಲಿ ಕೇರಳ ಗ್ರಾಮೀಣ ಬ್ಯಾಂಕ್, ಗ್ರಾಮ ಕಚೇರಿ, ಅಂಚೆ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಕೃಷಿಭವನಗಳಿದ್ದರೆ ಬೆಳ್ಳೂರು ನಲ್ಲಿ ಗ್ರಾಮ ಪಂಚಾಯತಿ ಕಛೇರಿ, ಸಹಕಾರಿ ಬ್ಯಾಂಕ್ ಹಾಗೂ ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಆಯುವರ್ೇದ ಆಸ್ಪತ್ರೆಗಳಿವೆ. ಬೆಳಿಂಜದಲ್ಲಿ ಮಲಯಾಳಂ ಮಾಧ್ಯಮ ಶಾಲೆ ಇದೆ. ಇಲ್ಲಿನ ಜನರು ದಿನ ನಿತ್ಯ ವ್ಯವಹಾರಗಳಿಗೆ ಕಿನ್ನಿಂಗಾರು, ನಾಟೆಕಲ್ಲು, ಬದಿಯಡ್ಕ, ಮುಳ್ಳೇರಿಯಾ ಪೇಟೆಗಳನ್ನು ಆಶ್ರಯಿಸುತ್ತಿದ್ದು ಎರಡೂ ಭಾಗದ ಜನರು ಕಿ.ಮೀ. ಗಟ್ಟಲೆ ಸುತ್ತಿ ಬಳಸಿ ಹೋಗ ಬೇಕಾದ ಸನ್ನಿವೇಶ ಇದೆ.
ಸೇತುವೆಯ ಎರಡೂ ಭಾಗಗಳಲ್ಲಿ ಕೆಲವೇ ಮೀಟರ್ ದೂರದಲ್ಲಿ ರಸ್ತೆ ಇದೆ.ಇಲ್ಲಿ ಸಂಪರ್ಕ ಸೇತುವೆ ನಿಮರ್ಾಣವಾದಲ್ಲಿ ಎರಡೂ ಭಾಗಗಳಿಗೆ ವಾಹನದ ಮೂಲಕ ತೆರಳಲು ನಾಲ್ಕುಕಿ.ಮೀ ನಷ್ಟು ನಿಕಟವಾಗಲಿದೆ.
ಕಾಯಿಮಲೆಯಿಂದ ಬೆಳಿಂಜ- ಅಗಲ್ಪಾಡಿ ಹಾದಿಯಾಗಿ ಮತ್ತು ಪೊಡಿಪ್ಪಳ್ಳ-ನಾರಂಪಾಡಿಯಾಗಿ ಬಸ್ ಸೌಕರ್ಯವಿದೆ. ಎಲ್ಲಾ ಭಾಗಗಳ ವಿವಿಧ ವಿದ್ಯಾಸಂಸ್ಥೆ ಗಳಿಗೆ ಸೇರಿದ ಬಸ್ ಗಳು ವಿದ್ಯಾಥರ್ಿಗಳನ್ನು ಕೊಡೊಯ್ಯಲು ಕಾಯಿಮಲೆ ತನಕ ಬರುತ್ತಿದೆ.
ಸ್ಥಳೀಯರು ಸ್ವಂತ ಖಚರ್ಿನಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ಸುಜಾತಾ ಎಂ ರೈ, ನೇತೃತ್ವದಲ್ಲಿ ಸಮಗ್ರ ಯೋಜನಾ ವರದಿ (ಡಿಪಿಆರ್),ಅಂದಾಜು ಲೆಕ್ಕ ಪಟ್ಟಿ ತಯಾರಿಸಿದ್ದರೂ ಫಲ ಇಲ್ಲದಾಗಿದೆ. ಮನವಿಯ ಅನ್ವಯ ನೀರಾವರಿ ಇಲಾಖೆ, ನಬಾಡರ್್ ಉದ್ಯೋಗಸ್ಥರು ಪಂಚಾಯಿತಿ ಅಧ್ಯಕ್ಷೆ ಲತಾ ಯುವರಾಜ್,ಕಾರಡ್ಕ ಬ್ಲಾಕ್ ಪಂ ಸದಸ್ಯ ಶ್ರೀಧರ ಎಂ. ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಭಾರೀ ಮಳೆಗೆ ತೋಡಿನಲ್ಲಿ ನೆರೆ ಉಕ್ಕಿ ಬರುತ್ತಿದ್ದು ನಡೆದು ಹೋಗುವ ಹಾದಿಯಲ್ಲೂ ಅಲ್ಲಲ್ಲಿ ಮಣ್ಣಿನ ಸವಕಳಿ ಉಂಟಾಗಿದೆ.ಆ ಭಾಗಗಳಲ್ಲಿ ಪ್ರಸ್ತುತ ಕಂಗನ್ನು ಜೋಡಿಸಿ ಸೇತುವೆ ನಿಮರ್ಿಸಲಾಗಿದ್ದು, ಭಯಾತಂಕದ ನಡಿಗೆ ಗಾಬರಿಗೊಳಿಸುತ್ತದೆ. ಸಂಬಂಧಪಟ್ಟವರು ಶೀಘ್ರ ಶಾಶ್ವತ ಕಾಲ್ಸಂಕ ಅಥವಾ ಸೇತುವೆ ನಿಮರ್ಿಸುವಲ್ಲಿ ಮುತುವಜರ್ಿ ವಹಿಸಬೇಕಿದೆ.
ಏನಂತಾರೆ:
ಸಂಚಾರ ಸಮಸ್ಯೆಯ ಸೇತುವೆಯ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳ ಸಹಿತ ಮೇಲಧಿಕಾರಿಗಳಿಗೆ ಮನವಿ ನೀಡಲಾಗಿದೆ. ಲೋಕೋಪಯೋಗಿ ಇಲಾಖಾ ವ್ಯಾಪ್ತಿಗೊಳಪಟ್ಟಿರುವುದರಿಂದ ಅವರಿಗೂ ಮನವಿ ನೀಡಲಾಗಿದೆ. ಲೋಕೋಪಯೋಗಿ ಇಲಾಖೆಯು ಈಗಾಗಲೇ ಭರವಸೆ ನಿಡಿರುವರೇ ಹೊರತು ಯಾವುದೇ ಉಪಕ್ರಮಗಳನ್ನು ಆರಂಭಿಸಿಲ್ಲ. ಜೊತೆಗೆ ಇದೀಗ ಈ ಬಗ್ಗೆ ಪ್ರಧಾನಿಯವರಿಗೂ ಪತ್ರಬರೆಯಲಾಗಿದೆ.
ಶ್ರೀಧರ ಎಂ. ಬೆಳ್ಳೂರು.
ಕಾರಡ್ಕ ಬ್ಲಾಕ್ ಪಂಚಾಯತು ಸದಸ್ಯ.