ಶಾಲೆ, ಬದುಕಿನ ಪರಿಸರದಲ್ಲಿ ಸಾಂಸ್ಕೃತಿಕ ಸದಭಿರುಚಿಗಳಿರಬೇಕು= ಎಂ.ನಾ.
ಕುಬಣೂರು ಶಾಲೆಯ ವಿದ್ಯಾರಂಗ ವೇದಿಕೆ ಉದ್ಘಾಟನೆ; ವಾಚನಾ ಸಪ್ತಾಹ ಸಮಾರೋಪ
ಉಪ್ಪಳ: ಕಲೆ ಸಾಹಿತ್ಯಾದಿ ಸಾಂಸ್ಕೃತಿಕ ಪ್ರಜ್ಞೆ ವಿದ್ಯಾಥರ್ಿ ದೆಸೆಯಲ್ಲೇ ಅರಳಬೇಕು. ಆಧುನಿಕ ಸ್ಪಧರ್ಾತ್ಮಕ ಜಗತ್ತಿನಲ್ಲಿ ವಿದ್ಯಾಥರ್ಿಗಳಲ್ಲಿ ಸ್ಪಧರ್ೆಯ ಮನೋಭಾವದೊಂದಿಗೆ ಮಾನಸಿಕ ಸಂಘರ್ಷಗಳು ಹೆಚ್ಚುತ್ತಿರುವುದು ಆತಂಕಕಾರಿ. ಮಕ್ಕಳ ಮನಸ್ಸು ಅರಳಿ ವಿಕಾಸಗೊಂಡು, ಸೃಜನಶೀಲತೆಯಿಂದ ಅವರು ಸಾಧನಾಶೀಲರಾಗಿ ಪರಿವತರ್ಿತರಾಗಬೇಕಿದ್ದರೆ ಶಾಲೆ ಮತ್ತು ಬದುಕಿನ ಪರಿಸರದಲ್ಲಿ ಸಾಂಸ್ಕೃತಿಕ ಸದಭಿರುಚಿಗಳು ಇರಬೇಕು. ಸೃಜನಶೀಲ ಚಟುವಟಿಕೆಯ ಆರೋಗ್ಯಕರ ಯೋಚನೆಗಳ ಕ್ರಿಯಾಶೀಲ ಚಟುವಟಿಕೆಯ ನಡುವಿನಿಂದಲೇ ಅತ್ಯುತ್ತಮ ಸಾಧಕರು ಹುಟ್ಟಿಬರಬಲ್ಲರು. ಈ ನಿಟ್ಟಿನಲ್ಲಿ ಶೈಕ್ಷಣಿಕ ಸಂಸ್ಥೆಗಳು ಪಠ್ಯ ಮತ್ತು ಅಂಕದಷ್ಟೇ ಪ್ರಾಮುಖ್ಯತೆ ವಿದ್ಯಾಥರ್ಿಗಳನ್ನು ರೂಪಿಸುವುದಕ್ಕೂ ನೀಡಬೇಕು. ಕಲೆ-ಸಾಹಿತ್ಯ-ಸಾಂಸ್ಕೃತಿಕ ಚಟುವಟಿಕೆಗಳಿಂದ ಮಾತ್ರವೇ ಈ ಮಾನವ ನಿಮರ್ಾಣ ಕಾರ್ಯ ಸಾಧ್ಯ ಎಂದು 'ಕಣಿಪುರ' ಯಕ್ಷಗಾನ ಮಾಸಪತ್ರಿಕೆ ಸಂಪಾದಕ, ಲೇಖಕ ಎಂ.ನಾ.ಚಂಬಲ್ತಿಮಾರ್ ಹೇಳಿದರು.
ಕುಬಣೂರು ಶ್ರೀರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2018-19ನೇ ವರ್ಷದ ವಿದ್ಯಾರಂಗ ಕಲಾಸಾಹಿತ್ಯ ವೇದಿಕೆಯನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಇದೇ ಸಂದರ್ಭ ಶಾಲೆಯ ವಾಚನಾ ಸಪ್ತಾಹದ ಸಮಾರೋಪ ಭಾಷಣವನ್ನೂ ಮಾಡಿದ ಅವರು 'ಮಕ್ಕಳ ಮನಸ್ಸನ್ನು ಅರಳಿಸುವ ಸಾಂಸ್ಕೃತಿಕ ಪರಿಸರ ನಿಮರ್ಾಣ ನಮಗೆ ಅಗತ್ಯವಿದೆ. ಸಮಾಜ ಈ ಕರ್ತವ್ಯವವನ್ನು ಮರೆತಂತಿದೆ. ಆದರೆ ಶಾಲೆಗಳ ಮೂಲಕ ಅಧ್ಯಾಪಕರು ಈ ಪೂರಕ ವಾತಾವರಣ ನಿಮರ್ಾಣಕ್ಕೆ ತಮ್ಮನ್ನು ಸಮಪರ್ಿಸಬೇಕಾಗಿದೆ ಎಂದರು.
ಶಾಲಾ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಮಾಸ್ತರ್ ಪಂಜತೊಟ್ಟಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಶಾಲಾ ಮಾತೃಸಂಘದ ಅಧ್ಯಕ್ಷೆ ತ್ರಿವೇಣಿ ಆಚಾರ್ಯ ಅಧ್ಯಕ್ಷತೆ ವಹಿಸಿದರು. ಶಾಲಾ ಪ್ರಬಂಧಕಿ ಮೋಕ್ಷದಾ ಶೆಟ್ಟಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಶಾಲಾ ವಿದ್ಯಾಥರ್ಿಗಳ ವೈವಿಧ್ಯ ಸಾಹಿತ್ಯ ರಚನೆಗಳುಳ್ಳ 'ಚಿಗುರು' ಹಸ್ತಪ್ರತಿಯನ್ನು ಎಂ.ನಾ.ಚಂಬಲ್ತಿಮಾರ್ ಬಿಡುಗಡೆಗೊಳಿಸಿದರು. ಶಾಲಾ ಆಡಳಿತ ಮಂಡಳಿ ಪರವಾಗಿ ಅವರನ್ನು ಸ್ಮರಣಿಕೆ ಇತ್ತು ಶಾಲು ಹೊದಿಸಿ ಗೌರವಿಸಲಾಯಿತು. ವಿದ್ಯಾರಂಗ ಸಾಹಿತ್ಯ ವೇದಿಕೆಯ ಉದ್ಘಾಟನೆಯಂಗವಾಗಿ ವಿದ್ಯಾಥರ್ಿಗಳಿಂದ ಕವನ ವಾಚನ, ಕಥಾ ನಿರೂಪಣೆ, ಪ್ರಬಂಧ ವಾಚನ, ಪದ್ಯ ಹಾಡುವುದು ಮೊದಲಾದುದು ನಡೆಯಿತು. ವಾಚನಾ ಸಪ್ತಾಹದ ಅಂಗವಾಗಿ ವಿದ್ಯಾಥರ್ಿಗಳಿಗೆ ನಡೆಸಿದ ವಿವಿಧ ಸಾಹಿತ್ಯ ಸ್ಪಧರ್ೆಗಳಲ್ಲಿ ವಿಜೇತರಾದ ಮಕ್ಕಳಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು. ಶಾಲಾ ಅಧ್ಯಾಪಿಕೆ ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕ ಸತೀಶ್ ವಂದಿಸಿದರು.