ಕುಂಬಳೆಯಲ್ಲಿ ಮಾದಕ ವಸ್ತು ವಿರುದ್ದ ಜಾಗೃತಿಗೆ ಚಾಲನೆ
ಕುಂಬಳೆ: ಆಧುನಿಕ ಸಮಾಜ ವಿವಿಧ ಸೌಕರ್ಯಗಳಿಂದ ಸುಂದರ ಬದುಕನ್ನು ಮುನ್ನಡೆಸಬಹುದಾಗಿದ್ದರೂ ಮಾದಕ ವಸ್ತುಗಳಂತಹ ಪಿಡುಗಿನಿಂದ ನಲುಗು ಸ್ಥಿತಿ ಬೆಳೆಯುತ್ತಿರುವುದು ಆತಂಕಕಾರಿ. ಈ ಬಗ್ಗೆ ಶಿಕ್ಷಣದ ಜೊತೆಗೆ ಜಾಗೃತಿ ಮೂಡಿಸುವ ಕ್ರಿಯಾತ್ಮಕ ವ್ಯವಸ್ಥೆಗಳಿಗೆ ತುತರ್ು ಕ್ರಮ ಕೈಗೊಳ್ಳಬೇಕು ಎಂದು ಕುಂಬಳೆ ಗ್ರಾ.ಪಂ. ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್ ತಿಳಿಸಿದರು.
ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲಾ ಎನ್ಎಸ್ಎಸ್ ಘಟಕದ ವತಿಯಿಂದ ಆಯೋಜಿಸಲಾದ ಜಾಗೃತಿ ಮಾಹಿತಿ ತರಗತಿಯನ್ನು ಮಂಗಳವಾರ ಪತಾಕೆ ಹಾರಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜ್ಞಾವಂತ ಯುವ ಸಮಾಜ ದೇಶದ ಆಸ್ತಿಯಾಗಿದ್ದು, ಅಂತಹ ಸುಂದರ ಬದುಕನ್ನು ಅಡ್ಡದಾರಿಗಳ ಮೂಲಕ ನಾಶಗೊಳಿಸಬಾರದು. ತಾರುಣ್ಯದ ತಪ್ಪು ಹೆಜ್ಜೆಗಳು ಬದುಕಿನುದ್ದಕ್ಕೂ ತಿವಿದು ಅಸಂತೋಷಕ್ಕೆ ಕಾರಣವಾಗುತ್ತದೆ ಎಂದು ಅವರು ತಿಳಿಸಿದರು.
ಕುಂಬಳೆ ಅಬಕಾರಿ ಸಬ್ ಎನ್ಸ್ಫೆಕ್ಟರ್ ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಾದಕ ದ್ರವ್ಯ ವ್ಯಸನ ಹಾಗೂ ಅದರ ಪರಿಣಾಮಗಳ ಬಗ್ಗೆ ಪ್ರಿವೆನ್ಶನ್ ಅಧಿಕಾರಿ ಶಶಿ ಸಮಗ್ರ ಮಾಹಿತಿ ನೀಡಿದರು. ಕುಂಬಳೆ ಸಮುದಾಯ ಆರೋಗ್ಯ ಕೇಂದ್ರದ ಮೇಲ್ವಿಚಾರಕ ಸೆಬಾಸ್ಟಿಯನ್, ಆರೋಗ್ಯಾಧಿಕಾರಿ ನಾರಾಯಣ, ಬಾಲಚಂದ್ರನ್ ಉಪಸ್ಥಿತರಿದ್ದು ಮಾತನಾಡಿದರು. ಎನ್ಎಸ್ಎಸ್ ಸಂಯೋಜಕ ಕಾತರ್ಿಕೇಯನ್ ಸ್ವಾಗತಿಸಿ, ವಂದಿಸಿದರು. ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು, ಶಿಕ್ಷಕರು ಉಪಸ್ಥಿತರಿದ್ದರು.ಬಳಿಕ ಕುಂಬಳೆ ಪೇಟೆಯಲ್ಲಿ ಮಾದಕ ವಸ್ತುಗಳ ವಿರುದ್ದ ಜಾಗೃತಿ ರ್ಯಾಲಿ ನಡೆಯಿತು.