HEALTH TIPS

No title

                  ಎ.ಬಿ.ವಿ.ಪಿ. ಮತ್ತು ಯುವಮೋಚರ್ಾ ವತಿಯಿಂದ ಪುಸ್ತಕ ವಿತರಣೆ
   ಮಂಜೇಶ್ವರ: ಗ್ರಾಮೀಣ ಪ್ರದೇಶದಲ್ಲಿರುವ ಸರಕಾರಿ ಶಾಲೆಗಳು ಉತ್ತಮ ರೀತಿಯಲ್ಲಿ ಶೈಕ್ಷಣಿಕ ಗುಣ ಮಟ್ಟವನ್ನು ಕಾಯ್ದುಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಯುವಮೋಚರ್ಾ ರಾಜ್ಯ ಮಾಧ್ಯಮ ಸಂಚಾಲಕ ವಿಜಯ್ ರೈ ಪರಂಕಿಲ ಹೇಳಿದರು.
    ಅವರು ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ಮತ್ತು ಯುವಮೋಚರ್ಾ ಕುಳೂರು ಘಟಕದ ವತಿಯಿಂದ ಶಾಲಾ ವಿದ್ಯಾಥರ್ಿಗಳಿಗೆ ಇತ್ತೀಚೆಗೆ ಉಚಿತವಾಗಿ ನೀಡಲಾದ ಸಮವಸ್ತ್ರ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಪ್ರಸ್ತುತ ದಿನದಲ್ಲಿ ಖಾಸಗಿ ಶಾಲೆಗೆ ಸೇರ್ಪಡೆಯಾಗುವುದು ಪ್ರತಿಷ್ಠೆಯ ವಿಷಯವಾಗಿದೆ. ಆದರೆ ಸರಕಾರಿ ಶಾಲೆಯಲ್ಲೂ ಅತ್ಯಂತ ಗುಣಮಟ್ಟದ ಶಿಕ್ಷಣ ಸಿಗುತ್ತಿರುವುದು ಕುಳೂರಿನಂತಹ ಗ್ರಾಮೀಣ ಪ್ರದೇಶದಲ್ಲಿರುವ ಈ ಶಾಲೆಯೇ ಉದಾಹರಣೆ ಎಂದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ರಾಜ್ಯ ಸಮಿತಿ ಸದಸ್ಯ ಮೋಹನ್ ಕೆ. ಮಾತನಾಡಿ ಎಬಿವಿಪಿ ವಿದ್ಯಾಥರ್ಿಗಳಲ್ಲಿ ರಾಷ್ಟ್ರಪ್ರೇಮವನ್ನು ನಿಮರ್ಾಣ ಮಾಡುವ ಕಾರ್ಯವನ್ನು ಹಲವು ದಶಕಗಳಿಂದ ನಡೆಸುತ್ತಾ ಬಂದಿದೆ ಎಂದರು.
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶಮರ್ಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಸದಸ್ಯೆ ಚಂದ್ರಾವತಿ, ಮಾಜಿ ಬ್ಲಾಕ್ ಪಂಚಾಯತ್ ಉಪಾಧ್ಯಕ್ಷ ಹರಿಶ್ಚಂದ್ರ ಮಂಜೇಶ್ವರ, ಎಬಿವಿಪಿ ಮಂಜೇಶ್ವರ ನಗರ ಅಧ್ಯಕ್ಷ ಚಂದ್ರಶೇಖರ್, ನಗರ ಕಾರ್ಯದಶರ್ಿ ಪ್ರಮೋದ್, ಪತ್ರಕರ್ತ ಜಗದೀಶ್ ಪ್ರತಾಪನಗರ, ಶಾಲಾ ಹಳೆ ವಿದ್ಯಾಥರ್ಿ ಸಂಘದ ಅಧ್ಯಕ್ಷ ಮಹಮ್ಮದ್ ಕಂಚಿಲ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
   ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಗಣ್ಯರು ವಿದ್ಯಾಥರ್ಿಗಳಿಗೆ ಪುಸ್ತಕ ಮತ್ತು ಸಮವಸ್ತ್ರವನ್ನು ವಿತರಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ  ಅಧ್ಯಕ್ಷ ಪ್ರಮೋದ್ ಶೆಟ್ಟಿ ಚಾರ್ಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜಯರಾಜ ಶೆಟ್ಟಿ ಚಾರ್ಲ ಕಾರ್ಯಕ್ರಮ ಸಂಯೋಜನೆ ಮಾಡಿದರು. ನಾರಾಯಣ ನಾಯ್ಕ್ ನಡುಹಿತ್ತಿಲು ಸಹಕಾರ ನೀಡಿದರು. ಚೇತನ್ ಕುಳೂರು ವಂದಿಸಿದರು.
    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries