ಜೂ.30 ರಂದು ಹಿಂದಿ ಪ್ರಚಾರಕ್ ಎಸ್.ಆರ್. ಶೇಟ್ ಅವರಿಗೆ ಗೌರವಾರ್ಪಣೆ
ಬದಿಯಡ್ಕ: ಬದಿಯಡ್ಕದ ನವಜೀವನ ಹೈಯರ್ ಸೆಕೆಂಡರಿ ಶಾಲೆಯ ನಿವೃತ್ತ ಪ್ರಾಂಶುಪಾಲ, ಹಿಂದಿ ಪ್ರಚಾರಕ್ ಎಸ್.ಆರ್. ಶೇಟ್ರವರಿಗೆ ಗೌರವಾರ್ಪಣಾ ಕಾರ್ಯಕ್ರಮವು ಜೂನ್ 30ರಂದು ಬೆಳಗ್ಗೆ 10 ಗಂಟೆಗೆ ಪೆರಡಾಲ ನವಜೀವನ ಹೈಸ್ಕೂಲ್ ಸಭಾಂಗಣದಲ್ಲಿ ನಡೆಯಲಿರುವುದು. ಹಿಂದಿ ಅಧ್ಯಾಪಕರಾಗಿದ್ದು ಸುಮಾರು 40 ವರ್ಷಗಳಿಂದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಹಿಂದಿ ಪ್ರಚಾರಕರಾಗಿ ಅನೇಕ ಜನರನ್ನು ಹಿಂದಿ ಶಿಕ್ಷಕರನ್ನಾಗಿ ರೂಪಿಸುವಲ್ಲಿ ಕಾರಣಕರ್ತರೂ ಹಾಗೂ ಸಾರ್ವಜನಿಕವಾಗಿ ಗುರುತಿಸಿಕೊಂಡು ನಿಸ್ವಾರ್ಥವಾಗಿ ದುಡಿದ ಇವರು ಅನೇಕ ಶಿಷ್ಯರು, ಹಿತೈಷಿಗಳು ಹಾಗೂ ಅಭಿಮಾನಿಗಳನ್ನು ಹೊಂದಿರುತ್ತಾರೆ.
ಗೌರವಾರ್ಪಣೆ ಸಮಾರಂಭದಲ್ಲಿ ಪೆರಡಾಲ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ವಕೀಲ ಐ.ವಿ.ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ಉದ್ಯಮಿ ಬಿ. ವಸಂತ ಪೈ ಬದಿಯಡ್ಕ, ಪೆರಡಾಲ ಎಜ್ಯುಕೇಶನ್ ಸೊಸೈಟಿಯ ವ್ಯವಸ್ಥಾಪಕ ಡಾ.ಸೂರ್ಯ ಎನ್. ಶಾಸ್ತ್ರಿ, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಎಸ್.ಎನ್. ಮಯ್ಯ ಬದಿಯಡ್ಕ, ನಿವೃತ್ತ ಪ್ರಾಧ್ಯಾಪಕ ಕಾನತ್ತಿಲ ಮಹಾಲಿಂಗ ಭಟ್, ನೀಚರ್ಾಲು ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಉಪಸ್ಥಿತರಿರುವರು. ನವಜೀವನ ಹೈಯರ್ ಸೆಕೆಂಡರಿಯ ಪ್ರಾಂಶುಪಾಲ ಪಿ.ರಾಮಚಂದ್ರನ್, ಮುಖ್ಯೋಪಾಧ್ಯಾಯ ಕೆ.ಶ್ಯಾಮ ಭಟ್, ಪೆರ್ಲ ಶಾಲೆಯ ನಿವೃತ್ತ ಹಿಂದಿ ಶಿಕ್ಷಕ ಎಸ್.ಬಿ.ಖಂಡಿಗೆ, ಮೀಯಪದವು ವಿದ್ಯಾವರ್ಧಕ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್.ಗೋಪಾಲಕೃಷ್ಣ ಭಟ್, ನವಜೀವನ ಹೈಯರ್ ಸೆಕೆಂಡರಿ ಶಾಲೆಯ ನಿವೃತ್ತ ಪ್ರಾಂಶುಪಾಲ ಎಂ.ನಾರಾಯಣ ಭಟ್, ಜಿ.ಎಚ್.ಎಸ್.ಎಸ್. ಪೈವಳಿಕೆ ಕಾಯರ್ಕಟ್ಟೆಯ ನಿವೃತ್ತ ಪ್ರಾಂಶುಪಾಲ ಡಾ.ಬೇ.ಸೀ. ಗೋಪಾಲಕೃಷ್ಣ ಭಟ್ ಶುಭಾಶಂಸನೆಗೈಯ್ಯುವರು. ಶಿಷ್ಯರು, ಹಿತೈಷಿಗಳು ಹಾಗೂ ಅಭಿಮಾನಿಗಳು ಸೇರಿ ನಡೆಸುವ ಕಾರ್ಯಕ್ರಮದಲ್ಲಿ ಸಾರ್ವಜನಿರು ಪಾಲ್ಗೊಳ್ಳಬೇಕೆಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.