'ಸ್ವರ್ಗವಿಷನ್' ಎರಡನೇ ವರ್ಷಕ್ಕೆ ಪಾದಾರ್ಪಣೆ
ಪೆರ್ಲ: ಸ್ವರ್ಗ ಸ್ವಾಮೀ ವಿವೇಕಾನಂದ ಅನುದಾನಿತ ಶಾಲೆಯ ಮುದ್ರಿತ ಹಾಗೂ ಆನ್ಲೈನ್ ಶಾಲಾ ವಾರ ಪತ್ರಿಕೆ 'ಸ್ವರ್ಗವಿಷನ್' ನ ಎರಡನೆಯ ವರ್ಷದ ಪ್ರಕಟಣೆ ಸೋಮವಾರ ಆರಂಭವಾಯಿತು.
ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಬಿ. ಈ ಶೈಕ್ಷಣಿಕ ವರ್ಷದ ಮೊದಲ ಸಂಚಿಕೆಯನ್ನು ಮಕ್ಕಳಿಗೆ ಹಸ್ತಾಂತರಿಸುವುದರ ಮೂಲಕ ಚಾಲನೆ ನೀಡಿದರು.
ಕಳೆದ ಶೈಕ್ಷಣಿಕ ವರ್ಷದಲ್ಲಿ ಒಟ್ಟು 38 ಸಂಚಿಕೆಗಳನ್ನು ಪ್ರಕಟಿಸಿ ಬಿಡುಗಡೆ ಗೊಳಿಸಿದ ಸ್ವರ್ಗವಿಷನ್ 'ಎ ಸ್ನೇಕ್ ಇನ್ ದ ಗ್ರಾಸ್' ಎಂಬ ಶಾಲಾ ಮಕ್ಕಳೇ ಅಭಿನಯಿಸಿದ ಇಂಗ್ಲೀಷ್ ಕಿರು ಚಿತ್ರವನ್ನು ಬಿಡುಗಡೆಗೊಳಿಸಿತ್ತು.ಜೊತೆಗೆ ತರಗತಿ ಲೈಬ್ರೆರಿ,ಸಾಕ್ಷ್ಯ ಚಿತ್ರಗಳು,ಸ್ವರ್ಗ ವಿಷನ್ ಸ್ಕೂಲ್ ಕ್ಯಾಲೆಂಡರ್ ಮೊದಲಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸತನ ತಂದು ಸಂಚಲನವನ್ನು ಮೂಡಿಸಿತ್ತು.
ಶಾಲಾ ಚಟುವಟಿಕೆಗಳ ವರದಿ,ಮಕ್ಕಳ ಸೃಜನಾತ್ಮಕ ರಚನೆಗಳಾದ ಕತೆ,ಕವನ,ಪ್ರಬಂಧ,ಚಿತ್ರ ಇತ್ಯಾದಿಗಳ ಮೂಲಕ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಅಗತ್ಯ ಮಾರ್ಗದರ್ಶನ ನೀಡುವ ಮೂಲಕ ಅನಾವರಣಗೊಳಿಸುವ ವೇದಿಕೆಯಾಗಿ ರೂಪುಗೊಂಡಿದೆ.
ಒಂದರಿಂದ ಏಳನೇ ತರಗತಿ ವರೆಗೆ ತಲಾ ಒಂದರಂತೆ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಒಂದು ಸಂಪಾದಕೀಯ ಮಂಡಳಿಯನ್ನು ರಚಿಸಿ ಕಾರ್ಯ ನಿರ್ವಹಿಸುತ್ತಿರುವ ಸ್ವರ್ಗ ವಿಶನ್ ಪ್ರತಿ ಸಂಚಿಕೆಯಲ್ಲೂ ವಿವಿಧ ಸ್ಪಧರ್ೆಗಳನ್ನು ನಡೆಸಿ ಮಕ್ಕಳಿಗೆ ಬಹುಮಾನ ನೀಡಿ ಹೊಸ ಛಾಪನ್ನು ಮೂಡಿಸಿ ಗ್ರಾಮೀಣ ಪ್ರದೇಶದ ಮುಗ್ಧ ಮಕ್ಕಳಿಗೆ ಪತ್ರಿಕಾ ಕಾರ್ಯವೈಖರಿಯ ನೈಜ ಅನುಭವವನ್ನು ನೀಡುವಲ್ಲಿ ಸಫಲವಾಗಿದೆ.
ಯುವ ಅಧ್ಯಾಪಕ ಮಂಜುನಾಥ್ ಭಟ್ 'ಸ್ವರ್ಗ ವಿಶನ್' ವ್ಯವಸ್ಥೆಯ ನೇತೃತ್ವವನ್ನು ವಹಿಸಿಕೊಂಡಿದ್ದು ಅಧ್ಯಾಪಕ-ಸಿಬ್ಬಂದಿವರ್ಗ,ರಕ್ಷಕ-ಶಿಕ್ಷಕ ಸಂಘ, ಮಹಿಳಾ ಮಂಡಳಿ, ಶಾಲಾ ವ್ಯವಸ್ಥಾಪಕರ ಪ್ರೋತ್ಸಾಹದೊಂದಿಗೆ ವಿದ್ಯಾಥರ್ಿಗಳಲ್ಲಿ ಶಿಕ್ಷಣದೊಂದಿಗೆ ಇತರ ಕ್ಷೇತ್ರಗಳಲ್ಲಿನ ಜ್ಞಾನಾರ್ಜನೆಗೆ ಸಮಾಜದ ಆಗು ಹೋಗುಗಳ ಅರಿವು ಮೂಡಿಸುತ್ತಾ ಯೋಜನೆ ಮುಂದುವರಿಯುತ್ತಿದೆ.