ರಾಜ್ಯಶ್ರೀ ಕುಳಮರ್ವ ಅವರ
ಕಾದಂಬರಿ ಬಿಡುಗಡೆ
ಕುಂಬಳೆ : ಕನ್ನಡ ಮತ್ತು ಆಂಗ್ಲ ಸಾಹಿತ್ಯ ಕ್ಷೇತ್ರದಲ್ಲಿ ಬಾಲ್ಯದಿಂದಲೇ ವಿಶಿಷ್ಟ ಸಾಧನೆಯನ್ನು ಮಾಡಿ ಹಲವು ಕೃತಿಗಳನ್ನು ಹೊರತಂದಿರುವ ಕಾಸರಗೋಡಿನ ಯುವಪ್ರತಿಭೆ ರಾಜ್ಯಶ್ರೀ ಕುಳಮರ್ವ ಅವರ " ಬಂಡೂಲ " ಎಂಬ ವಿಶಿಷ್ಟ ಕಾದಂಬರಿಯು ಜೂ. 10 ರಂದು ಭಾನುವಾರ ಬೆಳಗ್ಗೆ 10-30 ಕ್ಕೆ ಬೆಂಗಳೂರಿನ ಬಸವನಗುಡಿಯ "ವಾಡಿಯಾ ಸಭಾಂಗಣ"ದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಖ್ಯಾತ ಪಾಶ್ಚಾತ್ಯ ಲೇಖಕ ವಿಕಿಕಾನ್ ಸ್ಟಟೀನ್ ಕ್ರುಕ್ ಅವರ ಸುಮಾರು ನಾಲ್ಕುನೂರಕ್ಕೂ ಮಿಕ್ಕಿದ ಪುಟಗಳುಳ್ಳ ಬೃಹತ್ ಇಂಗ್ಲಿಷ್ ಕಾದಂಬರಿಯ ಅನುವಾದವಿದು.
ಖ್ಯಾತ ಸಾಹಿತಿಗಳಾದ ಪ್ರೊ.ಷ.ಶೆಟ್ಟರ್,ಎಸ್ ಸುರೇಂದ್ರನಾಥ ಮತ್ತಿತರು ಹಿರಿಯ ಸಾಹಿತಿಗಳು ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಲಿರುವರು.
ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಮಾರಂಭದಲ್ಲಿ ಭಾಗವಹಿಸಿ ಗಡಿನಾಡಿನ ಯುವ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕೆಂದು ಸಿರಿಗನ್ನಡ ವೇದಿಕೆಯ ಕೇರಳ ಹೊರನಾಡ ಘಟಕದ ಅಧ್ಯಕ್ಷ ವಿ.ಬಿ.ಕುಳಮರ್ವ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.