ಕನ್ನಡ ಗಝಲ್
ಕವಯಿತ್ರಿ: ಚೇತನಾ ಕುಂಬಳೆ.
ಕತ್ತಲಲ್ಲಿ ಒಂಟಿ ನಕ್ಷತ್ರ ನರಳುವುದನ್ನು ಕಂಡು ಎದೆ ಮರುಗಿದೆ
ಚಂದಿರನ ಹೂನಗು ಮಾಸಿರುವುದನ್ನು ಕಂಡು ಎದೆ ಮರುಗಿದೆ
ಆಗಸದ ಅಂಗಳದಲ್ಲಿ ಬಾನಾಡಿಗಳ ಕಲರವ ಸಂಭ್ರಮ
ಕರಿಮುಗಿಲ ಮರೆಯಲ್ಲಿ ರವಿ ಅವಿತಿರುವುದನ್ನು ಕಂಡು ಎದೆ ಮರುಗಿದೆ
ಬೆಳಕಿಟ್ಟ ಕಚಗುಳಿಗೆ ಅರಳಿದ ಹೂಗಳು ಕಂಪ ಬೀರಿವೆ ಎಲ್ಲೆಡೆ
ಬಿಸಿಲ ಎಳೆಗೆ ಇಬ್ಬನಿಯೊಂದು ಕರಗುವುದನ್ನು ಕಂಡು ಎದೆ ಮರುಗಿದೆ
ಕಡಲ ಮೊರೆತಕ್ಕೆ ಬಂಡೆಗಳೂ ಮರುಗಿ ಸುಯ್ದಿವೆಯೇನು
ಬರೆದ ಅಕ್ಷರಗಳ ತೆರೆಗಳಳಿಸುವುದನ್ನು ಕಂಡು ಎದೆ ಮರುಗಿದೆ
ಮಿಡಿವ ಹೃದಯ ಹಗಲಿರುಳೂ ನಿನ್ನನ್ನೇ ಕನಸುತ್ತಿದೆ
ಮಾತುಗಳು ಮೌನದೊಳಗೆ ಹುದುಗಿರುವುದನ್ನು ಕಂಡು ಎದೆ ಮರುಗಿದೆ
'ತನು'ವಿನೊಡಲಿನ ತುಂಬ ಪ್ರೀತಿಯ ಗಂಧ ಪಸರಿಸಿದೆ
ನಿನ್ನಾಗಮನವ ಕಾದ ಕಂಗಳು ಬಸವಳಿದುದನ್ನು ಕಂಡು ಎದೆ ಮರುಗಿದೆ
-ಚೇತನಾ ಕುಂಬಳ