ಸಮರೋತ್ಸಾಹದ ಸಹಿ ಸಂಗ್ರಹ ಅಭಿಯಾನ
ಕುಂಬಳೆ: ಭಾಷಾ ಅಲ್ಪಸಂಖ್ಯಾತ ಪ್ರದೇಶ ಕಾಸರಗೋಡಿನಲ್ಲಿ ಕನ್ನಡ ವಿದ್ಯಾಥರ್ಿಗಳ ಮೇಲೆ ಕಡ್ಡಾಯ ಮಲಯಾಳ ಕಲಿಯಬೇಕೆಂಬ ಒತ್ತಡ ಹೇರಬಾರದೆಂದು ಒತ್ತಾಯಿಸಲು ಕಾಸರಗೋಡು ಕನ್ನಡ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆಯುವ ಚಳುವಳಿಯ ಅಂಗವಾಗಿ ಸಹಿ ಸಂಗ್ರಹ ಭರದಿಂದ ಸಾಗುತ್ತಿದೆ.
ಶ್ರೀ ನಾರಾಯಣ ಗುರು ಯುವ ವೇದಿಕೆ ಮತ್ತು ತುಳು ಬಿಲ್ಲವ ಸೇವಾ ಸಂಘ ಕಿದೂರು ಘಟಕದ ಆಶ್ರಯದಲ್ಲಿ ಕಳತ್ತೂರು ಶಾಲೆಯಲ್ಲಿ ಜರಗಿದ ಉಚಿತ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅಪಾರ ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ಸಹಿಹಾಕುವುದರ ಮೂಲಕ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದರು. ಬಿಲ್ಲವ ಮುಂದಾಳುಗಳಾದ ಶಶಿಕಾಂತ ಕಳತ್ತೂರು, ಶಂಕರ ಟೈಲರ್, ಸುರೇಶ ಕಿದೂರು, ಶಶಿಕಿದೂರು, ಬೋಜರಾಜ್, ಉಮೇಶ, ಚನಿಯಪ್ಪ ಪೂಜಾರಿ, ಸನತ್ ಕುಮಾರ್ ಹಾಗೂ ಅಧ್ಯಾಪಕರಾದ ರಾಧಾಕೃಷ್ಣ ತುಂಗ, ರಾಜು ಕಿದೂರು ಮೊದಲಾದವರು ಸಹಿ ಹಾಕಿದ ಪ್ರಮುಖರಾಗಿದ್ದಾರೆ. ಕನ್ನಡ ಹೋರಾಟ ಸಮಿತಿಯ ಪ್ರಧಾನ ಕಾರ್ಯದಶರ್ಿ, ಬಿಲ್ಲವ ಮುಂದಾಳು ಭಾಸ್ಕರ ಕಾಸರಗೋಡು ಉಪಸ್ಥಿತರಿದ್ದರು.