ಗುಂಪೆ ಹವ್ಯಕ ವಲಯ ಸಭೆ
ಕುಂಬಳೆ: ಶ್ರೀ ರಾಮಚಂದ್ರಾಪುರ ಮಠದ ನೇತೃತ್ವದಲ್ಲಿರುವ ಮುಳ್ಳೇರಿಯ ಮಂಡಲ ಗುಂಪೆ ಹವ್ಯಕ ವಲಯದ ಜೂನ್ ತಿಂಗಳ ಸಭೆಯು ಪುತ್ತಿಗೆಯಲ್ಲಿರುವ ಅಧಿಕಾರಿ ನಾರಾಯಣಯ್ಯ ಅವರ ಮನೆಯಲ್ಲಿ ಇತ್ತೀಚೆಗೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷ ಅಮ್ಮಂಕಲ್ಲು ರಾಮ ಭಟ್ ವಹಿಸಿದ್ದರು. ಧ್ವಜಾರೋಹಣವನ್ನು ಮನೆಯ ಯಜಮಾನರಾದ ಅಧಿಕಾರಿ ನಾರಾಯಣಯ್ಯ ನೆರವೇರಿಸಿದರು. ವಲಯ ಕಾರ್ಯದಶರ್ಿ ಸುಬ್ರಹ್ಮಣ್ಯ ಭಟ್ ವರದಿ ಮಂಡಿಸಿದರು. ಕೋಶಾಧಿಕಾರಿ ಜಯರಾಮ ಚೆಕ್ಕೆ ಲೆಕ್ಕಪತ್ರ ಮಂಡಿಸಿದರು. ವಿಭಾಗ ವರದಿಯನ್ನು ಮಾತೃ ವಿಭಾಗದಿಂದ ಗೋಸ್ವರ್ಗ ಅಭಿಯಾನ ಮನೆ ಸಂದರ್ಶನ, ಮುಂದಿನ ಶಂಕರ ಪಂಚಮಿ ವರೆಗೆ ಭಜನಾ ರಾಮಾಯಣ ಪಠಣದ ಬಗ್ಗೆ ಮಾಹಿತಿ ನೀಡಲಾಯಿತು.
ವಿದ್ಯಾ ವಿಭಾಗದಿಂದ ಕಳೆದ ಅಧ್ಯಯನ ವರ್ಷದಲ್ಲಿ 10 ನೇ ತರಗತಿ ಮತ್ತು ಮುಂದಿನ ತರಗತಿಗಳಲ್ಲಿ ಅಧಿಕ ಅಂಕ ಪಡೆದ ವಿದ್ಯಾಥರ್ಿಗಳ ಯಾದಿ ತಯಾರಿಸಿ ಅವರನ್ನು ವಲಯ ವತಿಯಿಂದ ಅಭಿನಂದಿಸಲು ತೀಮರ್ಾನಿಸಲಾಯಿತು.
ಮುಷ್ಠಿ ಭಿಕ್ಷಾ ವಲಯದಲ್ಲಿ ಮುಷ್ಠಿ ಅಕ್ಕಿ ಹೆಚ್ಚಿಸಲು ತೀಮರ್ಾನಿಸಲಾಯಿತು ಮತ್ತು ವಿತರಣೆಯ ಬಗ್ಗೆ ಮಾಹಿತಿ ನೀಡಲಾಯಿತು. ಮಂಡಲ ವಿದ್ಯಾ ಪ್ರಧಾನ ಕೇಶವ ಪ್ರಸಾದ ಎಡಕ್ಕಾನ ಭಾನ್ಕುಳಿಯಲ್ಲಿ ನಡೆದ ಗೋಸ್ವರ್ಗ ಲೋಕಾರ್ಪಣಾ ಕಾರ್ಯಕ್ರಮ ಹಾಗೂ ಗೋಸ್ವರ್ಗದ ಸಂಪೂರ್ಣ ಚಿತ್ರಣವನ್ನು ಸಭೆಗೆ ನೀಡಿದರು. ಜೂನ್ 17 ರಂದು ಮುಜುಂಗಾವು ನೇತ್ರ ಚಿಕಿತ್ಸಾಲಯದಲ್ಲಿ ನಡೆಯಲಿರುವ ನೂತನ ಉಪಕರಣಗಳ ಉದ್ಘಾಟನೆ ಮತ್ತು ಕಣ್ಣಿನ ಪೊರೆ ತಪಾಸಣೆ ಹಾಗೂ ಉಚಿತ ನೇತ್ರ ಶಿಬಿರದ ಬಗ್ಗೆ ಸಭೆಗೆ ಮಾಹಿತಿ ನೀಡಲಾಯಿತು. ಭಾನ್ಕುಳಿ ಗೋಸ್ವರ್ಗದಲ್ಲಿ ಸೇವೆ ಸಲ್ಲಿಸುವ ಅವಶ್ಯಕತೆಗಳ ಬಗ್ಗೆ ಅಧ್ಯಕ್ಷ ಅಮ್ಮಂಕಲ್ಲು ರಾಮ ಭಟ್ ಸಭೆಗೆ ತಿಳಿಸಿದರು. ರಾಮತಾರಕ ಜಪ ಶಾಂತಿ ಮಂತ್ರ, ಧ್ವಜಾವತರಣದೊಂದಿಗೆ ಸಭೆ ಮುಕ್ತಾಯವಾಯಿತು.