HEALTH TIPS

No title

                   ಶೈಕ್ಷಣಿಕ ಪದವಿಗಿಂತಲೂ ಸಾಮಾಜಿಕ-ಔದ್ಯೋಗಿಕ ಪರಿಜ್ಞಾನ ಮುಖ್ಯ: ಡಾ. ಕೆ. ಅರವಿಂದಕೃಷ್ಣನ್
     ಕಾಸರಗೋಡು: ಶೈಕ್ಷಣಿಕ ಪದವಿಗಿಂತಲೂ ಸಾಮಾಜಿಕ-ಔದ್ಯೋಗಿಕ ಪರಿಜ್ಞಾನಇಂದಿನ ಕಾಲದಲ್ಲಿ  ಮುಖ್ಯ. ನಾವು ಕಾರ್ಯನಿರ್ವಹಿಸುತ್ತಿರುವ ಕ್ಷೇತ್ರ, ನಾವು ಅಧ್ಯಯನ ನಡೆಸುವ ಕ್ಷೇತ್ರದ ಬಗ್ಗೆ ಸಮಗ್ರವಾಗಿ ಅರಿತಿರಬೇಕು .  ಮಾತ್ರವಲ್ಲ ಸಾಮಾಜಿಕ ಮತ್ತು ಔದ್ಯೋಗಿಕ ಪರಿಜ್ಷಾನವು ಇಂದಿನ ಪ್ರತಿಯೊಬ್ಬ ವಿದ್ಯಾವಂತನಿಗೂ ಇರಬೇಕು. ಇದು ಓದಿನಿಂದ ಬರುವಂತಹದಲ್ಲ.  ಅದಕ್ಕೆ ಅನುಭವಗಳು ಬೇಕು. ಬದುಕಿನಲ್ಲಿ ಅನುಭವಗಳನ್ನು ಗಳಿಸುವ ವ್ಯಕಿ ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಾನೆ. ಕೇರಳದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕಾಸರಗೋಡಿನ ಬಹುತೇಕ ವಿದ್ಯಾವಂತರಿಗೆ  ಔದ್ಯೋಗಿಕ ಮಾಹಿತಿ ಕಡಿಮೆ. ಇಂತಹ ಸಂದರ್ಭದಲ್ಲಿ ಯುವ ತಂಡವೊಂದು ಜಿಲ್ಲೆಯ ಉದ್ಯೋಗಾಥರ್ಿಗಳನ್ನು ಉದ್ದೇಶಿಸಿಕೊಂಡು ಅವರ ಭವಿಷ್ಯ ನಿಮರ್ಾಣಕ್ಕೆ ಇಂತಹ ಉಚಿತ ಮಾಹಿತಿ ಶಿಬಿರ ಆಯೋಜಿಸುವುದು ಪ್ರಶಂಸನೀಯ ಮತ್ತು ಅನುಕರಣೀಯವು ಹೌದು. ಯುವಬಳಗಕ್ಕೆ ನೇತೃತ್ವ ನೀಡುವವರಲ್ಲಿ ಬಹುತೇಕರು ನಮ್ಮ ಕಾಲೇಜಿನ ಹಳೆ ವಿದ್ಯಾಥರ್ೀಗಳು ಎನ್ನುವುದರಲ್ಲಿ ಹೆಮ್ಮೆ ಹಾಗೂ ಅಭಿಮಾನವಿದೆ ಎಂದು ಕಾಸರಗೋಡು ಸರಕಾರಿ ಕಾಲೇಜಿನ ಪ್ರಿನ್ಸಿಪಾಲ್ ಡಾ. ಕೆ. ಅರವಿಂದಕೃಷ್ಣನ್ ಹೇಳಿದರು.
     ಸಿರಿಚಂದನ ಕನ್ನಡ ಯುವಬಳಗ ಕಾಸರಗೋಡು ಇದರ ಆಶ್ರಯದಲ್ಲಿ  ಕಣ್ಣೂರು ವಿಶ್ವವಿದ್ಯಾನಿಲಯದ ಭಾರತೀಯ ಭಾಷಾ ಅಧ್ಯಯನಾಂಗದ ಕನ್ನಡ ವಿಭಾಗದ ಸಹಯೋಗದೊಂದಿಗೆ ಭಾನುವಾರ ಕಾಸರಗೋಡು ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಉದ್ಯೋಗ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
      ಸಿರಿಚಂದನ ಕನ್ನಡ ಯುವಬಳಗ ಹಮ್ಮಿಕೊಂಡ  ಉದ್ಯೋಗ ಮಾಹಿತಿ ಶಿಬಿರ  ಒಂದು ಉತ್ತಮ ಯೋಜನೆಯಾಗಿದೆ ಎಂದ ಅವರು  ಕಾಸರಗೋಡು ಸರಕಾರಿ ಕಾಲೇಜಿನ ಹಳೆ ವಿದ್ಯಾಥರ್ಿಗಳು  ಯುವಬಳಗದಲ್ಲಿದ್ದುಕೊಂಡು  ಅದರ ನೇತೃತ್ವ ವಹಿಸುತ್ತಿರುವುದು ತನಗೆ ಹೆಮ್ಮೆಯ ವಿಚಾರ ಎಂದು ಹೇಳಿದರು. ಸಾಮಾಜಿಕ ಜಾಲತಾಣಗಳ ಉಪಯೋಗವನ್ನು  ಕಡಿಮೆಗೊಳಿಸಿ  ಇಂತಹ ಶಿಬಿರಗಳ ಪ್ರಯೋಜನ ಪಡೆಯುವಂತೆ ಅವರು ಕರೆ ನೀಡಿದರು. ಉಚಿತ ತರಬೇತಿ ಶಿಬಿರಗಳನ್ನು ದುಬಾರಿ ಎಂದು ಭಾವಿಸಿ ಅದರ ಪ್ರಯೋಜನ ಪಡೆದುಕೊಳ್ಳಬೇಕು. ಇದು ಈ ರೀತಿಯಲ್ಲೇ ಇದೇ ಆಸಕ್ತಿಯಲ್ಲೇ ಮುಂದುವರಿಯಬೇಕು. ಶಿಬಿರಾಥರ್ಿಗಳ ಉತ್ಸಾಹ ಯಾವಾಗಲೂ ಹೀಗೆ ಇರಬೇಕು ಎಂದು ಡಾ. ಅರವಿಂದ ಕೃಷ್ಣನ್ ಹೇಳಿದರು.
    ಸಿರಿಚಂದನ ಕನ್ನಡ ಯುವಬಳಗದ ಉದ್ಯೋಗ ಮಾಹಿತಿ ಸಮಿತಿ ಸಂಯೋಜಕ ಮಹೇಶ ಏತಡ್ಕ  ಅಧ್ಯಕ್ಷತೆ ವಹಿಸಿದ್ದರು.  ಬಳಗದ ಗೌರವ ಸಲಹೆಗಾರ ಜೋಗೇಂದ್ರನಾಥ ವಿದ್ಯಾನಗರ  ನಲ್ನುಡಿಗಳನ್ನಾಡಿದರು.  ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕ  ಡಾ. ರತ್ನಾಕರ ಮಲ್ಲಮೂಲೆ,  ಮೊಗ್ರಾಲ್  ಸರಕಾರಿ ಹಿರಿಯ ಪ್ರೌಢಶಾಲೆಯ  ಇಂಗ್ಲೀಷ್ ಉಪನ್ಯಾಸಕ ಚಂದ್ರಶೇಖರ ಏತಡ್ಕ, ಆದೂರು ಸರಕಾರಿ ಹೈಯರ್ ಸೆಕಂಡರಿ ಶಾಲೆಯ  ಅಧ್ಯಾಪಕ ಶರತ್ ಕುಮಾರ್ ಆರ್. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.  ಕಣ್ಣೂರು  ವಿಶ್ವವಿದ್ಯಾನಿಲಯದ ಭಾರತೀಯ ಭಾಷಾ ಅಧ್ಯಯನಾಂಗದ ನಿದರ್ೆಶಕ  ಡಾ. ರಾಜೇಶ್ ಬೆಜ್ಜಂಗಳ ಪ್ರಾಸ್ತಾವಿಕ ಮಾತುಗಳನ್ನಾಡಿದರು.  ಸಿರಿಚಂದನ ಕನ್ನಡ ಯುವಬಳಗದ ಅಧ್ಯಕ್ಷ ರಕ್ಷಿತ್ ಪಿ. ಎಸ್. ಸ್ವಾಗತಿಸಿ ಕೋಶಾಕಾರಿ ವಿನೋದ್ ಸಿ. ಎಚ್. ವಂದಿಸಿದರು. ಕಾತರ್ಿಕ್ ಪಡ್ರೆ ಕಾರ್ಯಕ್ರಮ ನಿರೂಪಿಸಿದರು. ವೃಂದಾ ಬಿ. ಜೆ. ಪ್ರಾರ್ಥನೆ ಹಾಡಿದರು. ನೂರಕ್ಕೂ ಮಿಕ್ಕಿ ಉದ್ಯೋಗಾಥರ್ಿಗಳು ಶಿಬಿರದ ಪ್ರಯೋಜನ ಪಡೆದರು.
     ಉಚಿತ ಉದ್ಯೋಗ ಮಾಹಿತಿ ಶಿಬಿರ ಪಾಕ್ಷಿಕವಾಗಿ ಮುಂದುವರಿಯಲಿದ್ದು, ಮುಂದಿನ ಶಿಬಿರವನ್ನು ಜೂ.17ರಂದು ನಡೆಸಲು ತೀಮರ್ಾನಿಸಲಾಯಿತು. ಸಾಮಾಜಿಕ ಬದ್ಧತೆ ಇರುವ ಮತ್ತು ಔದ್ಯೋಗಿಕ ಪರಿಜ್ಞಾನವಿರುವ ತರಬೇತುದಾರರನ್ನು  ಆಮಂತ್ರಿಸಿ ಉಚಿತ ಉದ್ಯೋಗ ಮಾಹಿತಿ ಶಿಬಿರ ನಡೆಸಲಾಗುವುದು. ಪಿಎಸ್ಸಿ ವನ್ಟೈಮ್ ನೋಂದಣಿ ನಡೆಸದವರಿಗೆ ಶಿಬಿರದಲ್ಲೇ ನೋಂದಣಿ ನಡೆಸಲು ಅವಕಾಶ ಒದಗಿಸಲು ತೀಮರ್ಾನಿಸಲಾಯಿತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries