ಸ್ವರ್ಗದಲ್ಲಿ ಪಶು ಸಂಗೋಪನಾ ಉಪ ಕೇಂದ್ರ ಉದ್ಘಾಟನೆ
ಪೆರ್ಲ:ಮೃಗ ಸಂರಕ್ಷಣಾ ಇಲಾಖೆಯ ಅಧೀನದಲ್ಲಿರುವ ಪಶು ಸಂಗೋಪನಾ ಉಪ ಕೇಂದ್ರದ ಉದ್ಘಾಟನೆಯನ್ನು ಭಾನುವಾರ ಸ್ವರ್ಗದಲ್ಲಿ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಎ.ಕೆ. ಎಮ್. ಅಶ್ರಫ್ ಅವರು ನೆರವೇರಿಸಿದರು.ಬಳಿಕ ಸ್ವರ್ಗ ಶಾಲೆಯಲ್ಲಿ ನಡೆದ ಉದ್ಘಾಟನಾ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಭಿವೃದ್ಧಿ ವಿಚಾರದಲ್ಲಿ ಕಾಸರಗೋಡು ಜಿಲ್ಲೆ ಬಹಳಷ್ಟು ಹಿಂದಿದೆ.ಸರಕಾರದ ಸವಲತ್ತುಗಳು ಈ ಭಾಗಕ್ಕೆ ತಲಪುತ್ತಿಲ್ಲ.ಏಕ ಉದಾಹರಣೆ ಅಂದರೆ ಮಂಜೇಶ್ವರ ಕ್ಷೀರ ಅಭಿವೃದ್ಧಿ ಇಲಾಖೆಯ ಹಾಲು ಉತ್ಪನ್ನ ವಿಸ್ತರಣಾ ಅಧಿಕಾರಿ (ಡೈರಿ ಎಕ್ಸ್ಟೆಂಶನ್ ಓಫೀಸರ್) ಹುದ್ದೆಯು ಸುಮಾರು ಐದು ವರ್ಷಗಳ ಕಾಲ ಖಾಲಿ ಬಿದ್ದಿದ್ದು ಸತತ ಪ್ರಯತ್ನಗಳ ಫಲವಾಗಿ ಆ ಹುದ್ದೆಯನ್ನು ಭತರ್ಿಗೊಳಿಸಲಾಗಿದೆ.ಇದೀಗ ಗ್ರಾಮೀಣ ಪ್ರದೇಶ ಸ್ವರ್ಗದಲ್ಲಿ ಪಶು ಸಂಗೋಪನಾ ಉಪ ಕೇಂದ್ರವು ಕಾಯರ್ಾಚರಣೆ ಆರಂಭಿಸಿದ್ದು ಗ್ರಾಮೀಣ ಜನತೆ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪವಾಣಿ ಆರ್ ಭಟ್ ಮಾತನಾಡಿ ಗ್ರಾಮೀಣ ವಲಯಗಳಲ್ಲಿ ಅಭಿವೃದ್ಧಿಯ ಮಾನದಂಡ ಯಾವುದೆಂದರೆ ಕೃಷಿಕರಿಗೆ ಬೇಕಾದ ಸವಲತ್ತುಗಳ ಲಭ್ಯತೆ. ಕಾಸರಗೋಡಿಗೆ ಅವಗಣಿಸಲ್ಪಟ್ಟ ಜಿಲ್ಲೆಯೆಂಬ ಹಣೆ ಪಟ್ಟಿ ಇದ್ದು ಎಂಡೋಸಲ್ಫಾನ್ ಸಿಂಪಡನೆ ಪರಿಣಾಮ ಮಾಧ್ಯಮಗಳ ಮೂಲಕ ಪ್ರಚಾರ ಗಿಟ್ಟಿಸಿದ ಎಣ್ಮಕಜೆ ಸೇರಿದಂತೆ ಕೇರಳ ತೋಟಗಾರಿಕಾ ನಿಗಮದ ಆಸುಪಾಸಿನ ಗಡಿಭಾಗದ ಪಂಚಾಯಿತಿ ಅಥವಾ ಇತರ ಇಲಾಖೆಗಳಿಗೆ ದಕ್ಷಿಣ ಭಾಗದಿಂದ ಉದ್ಯೋಗ ಲಭಿಸಿ ಬಂದ ಅಧಿಕಾರಿಗಳು ಇಲ್ಲಿನ ಗಾಳಿ,ನೀರು,ನೆಲ ಎಲ್ಲವೂ ವಿಷಮಯ ಎಂದು ತಿಳಿದಿದ್ದ ಕಾಲವಿತ್ತು. ಇದೀಗ ಎಲ್ಲವೂ ಬದಲಾಗಿದೆ. ಅಗತ್ಯತೆ ಇರುವಲ್ಲಿಗೆ ಸವಲತ್ತುಗಳು ತಲಪಬೇಕಾಗಿರುವುದು ಮುಖ್ಯ. ಯೋಜನೆಗಳು ಮನೆ ಬಾಗಿಲಿಗೆ ಬಂದಾಗ ಅದನ್ನು ಸ್ವೀಕರಿಸುವ ವಿಶಾಲ ಮನಸ್ಥಿತಿ ನಮ್ಮಲ್ಲಿರಬೇಕು. ಜನರ ಅಶೋತ್ತರಗಳನ್ನು ನೆರವೇರಿಸುವುದು ಜನ ಪ್ರತಿನಿಧಿಗಳ ಕರ್ತವ್ಯ, ಶೀಘ್ರದಲ್ಲೇ ವಾಣೀನಗರದಲ್ಲೂ ಉಪ ಕೇಂದ್ರ ಕಾಯರ್ಾಚರಣೆ ಆರಂಭಿಸಲಿದೆ ಎಂದರು.
ಸಮಾರಂಭದ ಮುಖ್ಯ ಅತಿಥಿ ಪೆರ್ಲದ ಪಶು ಸಂಗೋಪನಾ ವೈದ್ಯಾಧಿಕಾರಿ ಚಂದ್ರಬಾಬು, ಜಿಲ್ಲಾ ಪಂಚಾಯಿತಿ ಸದಸ್ಯೆ ಪುಷ್ಪಾ ಅಮೆಕ್ಕಳ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ಜಯಶ್ರೀ ಎ ಕುಲಾಲ್,ಆರೋಗ್ಯ -ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಆಯಿಷಾ ಎ ಎ, ಪಂಚಾಯಿತಿ ಸದಸ್ಯರಾದ ಶಾರದಾ ವೈ, ಸಿದ್ದಿಕ್ ವಳಮೊಗರು,ಪಂ.ಸದಸ್ಯ ಹಾಗೂ ಹೈನು ಉದ್ಯಮಿ ಸಿದ್ದಿಕ್ ಖಂಡಿಗೆ, ಚಂದ್ರ ಮೋಹನ್ ಶುಭಾಶಂಸನೆಗೈದರು. ಬ್ಲಾಕ್ ಪಂಚಾಯಿತಿ ಸದಸ್ಯೆ ಸಫ್ರೀನಾ,ಗ್ರಾ.ಪಂ. ಪ್ರತಿನಿಧಿಗಳಾದ ಶಶಿಕಲಾ ವೈ, ಐತಪ್ಪ ಕುಲಾಲ್,ಪ್ರೇಮ,ಹನೀಫ್ ನಡುಬೈಲ್ ಮತ್ತಿತರರು ಉಪಸ್ಥಿತರಿದ್ದರು.
ಗ್ರಾ.ಪಂ. ಪ್ರತಿನಿಧಿ ಚಂದ್ರಾವತಿ ಸ್ವಾಗತಿಸಿ, ಪಶು ಸಂಗೋಪನಾ ಕೇಂದ್ರದ ಜಾನುವಾರು ಪರಿಶೋಧಕ(ಲೈವ್ ಸ್ಟೋಕ್ ಇನ್ ಸ್ಪೆಕ್ಟರ್) ನಿತಿನ್ ವಂದಿಸಿದರು.ಮಾಜಿ ಪಂಚಾಯಿತಿ ಸದಸ್ಯ ನರಸಿಂಹ ಎಸ್ ಬಿ ಕಾರ್ಯಕ್ರಮ ನಿರೂಪಿಸಿದರು.
ಇದೀಗ ಸ್ವರ್ಗದಲ್ಲಿ ಉದ್ಘಾಟನೆಗೊಂಡ ಪಶು ಸಂಗೋಪನಾ ಕೇಂದ್ರವು ಖಾಸಗೀ ವ್ಯಕ್ತಿಯ ಕಟ್ಟಡದಲ್ಲಿ ಕಾಯರ್ಾಚರಣೆ ಆರಂಭಿಸಿದ್ದು ಶೀಘ್ರದಲ್ಲೇ ಸರಕಾರಿ ಕಟ್ಟಡಕ್ಕೆ ಸ್ಥಾನಾಂತರಗೊಳ್ಳಲಿದೆ. ಎರಡು ತಿಂಗಳ ಬಳಿಕ ವಾಣೀನಗರದಲ್ಲೂ ಉಪ ಕೇಂದ್ರವು ಕಾಯರ್ಾಚರಣೆ ಆರಂಭಿಸಲಿದ್ದು ವಾರದ ಮೂರು ದಿನ ಸ್ವರ್ಗ ಹಾಗೂ ಉಳಿದ ಮೂರು ದಿನ ವಾಣೀನಗರದಲ್ಲಿ ಸೇವೆ ಲಭ್ಯವಾಗಲಿದ್ದು ಕೃಷಿ ಹಾಗೂ ಹೈನುಗಾರಿಕೆಯ ಆದಾಯವನ್ನು ಜೀವನೋಪಾಯ ಮಾರ್ಗವನ್ನಾಗಿ ಅವಲಂಬಿಸಿದ ಕೇರಳದ ಗಡಿ ಪ್ರದೇಶ ಸ್ವರ್ಗ ಹಾಗೂ ವಾಣೀನಗರದ ಜನತೆಯ ಬಹು ಕಾಲದ ಬೇಡಿಕೆ ಸಾಕ್ಷಾತ್ಕಾರ ಗೊಂಡಿದೆ.