ಉದ್ದ ಸಮುದ್ರ ತೀರವಿದ್ದರೂ ಸೂಕ್ತ ಮೀನುಗಾರಿಕಾ ಬಂದರು ವ್ಯವಸ್ಥೆ ಇಲ್ಲದ ಜಿಲ್ಲೆ
ಉದ್ಯೋಗವಿಲ್ಲದೆ ಕೈಕಟ್ಟಿ ಕುಳಿತಿರುವ ಕಾಸರಗೋಡಿನ ಮೀನುಗಾರರು
ಮಂಜೇಶ್ವರ: ಟ್ರಾಲಿಂಗ್ ನಿಷೇಧದಿಂದ ಹೈರಾಣಾಗಿರುವ ಮೀನುಗಾರರಿಗೆ, ತಮ್ಮ ಸಾಂಪ್ರದಾಯಿಕ ದೋಣಿಗಳನ್ನು ಸಮುದ್ರಕ್ಕೆ ಇಳಿಸಲು ಸೂಕ್ತ ಬಂದರು ವ್ಯವಸ್ಥೆಯು ಇಲ್ಲದ ಕಾರಣ ಹಲವು ಕುಟುಂಬಗಳು ಆಥರ್ಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪ್ರಕ್ಷುಬ್ದ ಸಮುದ್ರ ತೀರದ ಸಮೀಪ ವಾಸಿಸುವ ಮೀನುಗಾರ ಕುಟುಂಬಗಳು ಮಳೆಗಾಲದಲ್ಲಿ ಯಥೇಚ್ಛ ಮೀನಿದ್ದರೂ ಸುವ್ಯವಸ್ಥಿತ ಬಂದರು ವ್ಯವಸ್ಥೆ ಇಲ್ಲದ ಕಾರಣ ಅದೃಷ್ಟ ವಂಚಿತರಾಗುತ್ತಿದ್ದಾರೆ.
ಜಿಲ್ಲೆಯಲ್ಲಿ 70 ಕಿ.ಮೀ ಉದ್ದದ ಸಮುದ್ರ ತೀರ ಪ್ರದೇಶವಿದ್ದರೂ, ಸೂಕ್ತ ಬಂದರು ವ್ಯವಸ್ಥೆ ಇಲ್ಲ ಎನ್ನುತ್ತಾರೆ ಇಲ್ಲಿನ ಮೀನುಗಾರರು ಮತ್ತು ಮೀನುಗಾರ ಸಮುದಾಯ ನಾಯಕರು. ಕಾಸರಗೋಡಿನಲ್ಲಿ ಮೀನುಗಾರಿಕಾ ಬಂದರು ನಿಮರ್ಾಣಗೊಂಡಿದೆ. ಬಂದರು ಇಲಾಖೆ ವತಿಯಿಂದ ಫಲಕಂಡ ಯೋಜನೆಯಲ್ಲಿ ಹಲವು ಲೋಪಗಳು ಇರುವ ಕಾರಣ ಸರಕಾರವು ಇದನ್ನು ಉದ್ಘಾಟಿಸಿಲ್ಲ ಎನ್ನುತ್ತಾರೆ ರಾಜ್ಯ ದೀವರ ಸಭಾ ಉಪಾಧ್ಯಕ್ಷ ಯು.ಎಸ್ ಬಾಲನ್. ಸುರಕ್ಷಿತ ಬಂದರು ಇದ್ದಲ್ಲಿ ಸಾಂಪ್ರದಾಯಿಕ ದೋಣಿಗಳು ಸಮುದ್ರಕ್ಕೆ ಇಳಿಯಬಹುದು, ಆದರೆ ಇಲ್ಲಿ ಅಂತಹ ವ್ಯವಸ್ಥೆ ಇರದ ಕಾರಣ ಅಲೆಗಳು ಸಣ್ಣ ದೋಣಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿ ಮೀನುಗಾರ ಸಮುದಾಯಗಳಿಗೆ ಕೆಲಸವಿಲ್ಲದಂತೆ ಆಗಿದೆ ಎಂದು ಕೇರಳ ಪ್ರದೇಶ ಮತ್ಸ್ಯ ಕಾಮರ್ಿಕ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ನಾರಾಯಣ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 8,400 ಮಂದಿ ಮೀನುಗಾರರು ಕ್ಷೇಮ ನಿಧಿ ಯೋಜನೆಯಡಿ ನೋಂದಣಿಯಾಗಿದ್ದಾರೆ. ಆದರೆ ಒಟ್ಟು 9,800 ಮಂದಿ ಮೀನುಗಾರರು ಸಮುದ್ರವನ್ನೆ ಅವಲಂಬಿಸಿದ್ದಾರೆ, 400 ಮಂದಿ ಹಿನ್ನೀರ ಮೀನುಗಾರಿಕೆಯಲ್ಲಿ ತೊಡಗಿದ್ದಾರೆ. ಆದರೆ ತೀಕ್ಷ್ಣ ಮಳೆಗಾಲದ ವೇಳೆ ಮೀನುಗಾರಿಕೆಗೆ ಪೂರಕ ವ್ಯವಸ್ಥೆಗಳಿಲ್ಲದೆ ಕಾರಣ ಮೀನುಗಾರರು ಹತಾಶರಾಗಿದ್ದಾರೆ.
ಆರು ತಿಂಗಳಿಂದ ಸಮುದ್ರ ದೂರ!:
ಸಾಂಪ್ರದಾಯಿಕ ಮೀನುಗಾರರು ಕಳೆದ ಆರು ತಿಂಗಳಿಂದ ಸಮುದ್ರಕ್ಕೆ ಇಳಿದಿಲ್ಲ. ಮುಂಗಾರು ಮಳೆಗೂ ಹಿಂದೆ ಸಮುದ್ರದಲ್ಲಿ ಮೀನುಗಳಿಗೆ ಬರವಿತ್ತು. ಸಮುದ್ರಕ್ಕೆ ಇಳಿದರೂ ಖಾಲಿ ಕೈಯ್ಯಲ್ಲಿ ಹಿಂತಿರುಗಬೇಕಿತ್ತು. ಪ್ರಸ್ತುತ ಯಥೇಚ್ಚ ಮೀನುಗಳಿವೆ, ಆದರೆ ಸಮುದ್ರಕ್ಕೆ ಇಳಿಯಲು ಸಾಧ್ಯವಿಲ್ಲದಾಗಿದೆ ಎನ್ನುತ್ತಾರೆ ಕಾಞಂಗಾಡು ಅಜನೂರು ದೋಣಿಯ ಯಜಮಾನ ಪ್ರಶಾಂತ್.ಕೆ. ಇವರ ಸಮೀಪವತರ್ಿ ವೇಣು ಎಂಬುವರಿಗೂ ಕೆಲಸವಿಲ್ಲದಾಗಿದೆ, ಯನೆಯೊಡತಿ ಚಂದ್ರಿಕಾ ತನಗೆ ಸಿಗುವ ಅಲ್ಪಸ್ವಲ್ಪ ಮೀನುಗಳನ್ನು ಮಾರಿ ಕುಟುಂಬ ಪೋಷಿಸುವಂತಾಗಿದೆ. ಈ ಹಿಂದೆ ಪ್ರಶಾಂತ್ ಮೀನುಗಾರಿಕೆಗೆ 6 ಲಕ್ಷ ರೂ.ಗಳಿಗೆ ಬೋಟ್ ಕೊಂಡುಕೊಂಡಿದ್ದು, ಸಾಲದ ಬಡ್ಡಿ ತೀರಿಸಲು ಪರದಾಡುವಂತಾಗಿದೆ.
ಬಂದರು ಸರಿಪಡಿಸಿಬೇಕಿದೆ:
ಸರಕಾರವು ಮೀನುಗಾರಿಕಾ ಬಂದರು ನಿಮರ್ಾಣ ತೊಡಕುಗಳನ್ನು ಸರಿಪಡಿಸಿ ನಿಮರ್ಾಣ ಕಾರ್ಯ ಪೂರ್ಣಗೊಳಿಸಬೇಕಿದ್ದು, ಆ ಮೂಲಕ ಮಳೆಗಾಲದಲ್ಲೂ ಮೀನುಗಾರಿಕೆಗೆ ಅನುವು ಮಾಡಿಕೊಡಬೇಕಿದೆ. ವಿನಾಕಾರಣ ಸಾರ್ವಜನಿಕ ಹಣವನ್ನು ಪೋಲು ಮಾಡಬಾರದೆಂದು ಬಾಲನ್ ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಸರಗೋಡು ಬಂದರಿಗೆ ಒಟ್ಟು 30 ಕೋಟಿ ರೂ. ವ್ಯಯಿಸಲಾಗಿದೆ. ಎರಡು ಬ್ರೇಕ್ ವಾಟರ್ ಸೌಲಭ್ಯವನ್ನು 470 ಮೀ. ತನಕ ಸಮನಾಗಿ ಹೆಚ್ಚಿಸಲಾಗಿದೆ, ಬಂದರಿನ ಮುಖ ಪ್ರದೇಶದಲ್ಲಿ ನೀರಿನ ಹರಿವು ಮತ್ತು ಹೊಡೆತ ಪ್ರಖರವಾಗಿದ್ದು ಇದರಿಂದ ಬಂದರು ನಿಷ್ಪಪ್ರಯೋಜಕವಾದಂತಾಗಿದೆ ಎನ್ನುತ್ತಾರೆ ಬಾಲನ್. 2017 ರಲ್ಲಿ ಈ ಸಮಸ್ಯೆಯಿಂದ ಮೂರು ದೋಣಿಗಳು ನಾಶವಾಗಿವೆ, 2016ರಲ್ಲಿ ಒಟ್ಟು 5 ದೊಣಿಗಳು ಮರಳಿನ ದಿಬ್ಬಕ್ಕೆ ಅಪ್ಪಳಿಸಿ ನಾಶಗೊಂಡಿದ್ದವು ಎನ್ನುತ್ತಾರೆ ಇವರು. ಸರಕಾರವು ಈ ತನಕ ಯಾವುದೇ ನಷ್ಟ ಪರಿಹಾರವನ್ನು ನೀಡಿಲ್ಲ. ಪ್ರಸ್ತುತ ಬ್ರೇಕ್ ವಾಟರ್ ಸೌಲಭ್ಯವನ್ನು ಹೆಚ್ಚಿಸಲು ಬಂದರು ಇಲಾಖೆಗೆ 60 ಕೋಟಿ ರೂ. ಬೇಕಿದ್ದು, 59 ಕೋಟಿ ರೂ. ಗಳನ್ನು ನಬಾಡರ್್ ಮೂಲಕ ಪಡೆಯಲಿದೆ. ಕಾಞಂಗಾಡಿನ ಅಜನೂರು ಯೋಜನೆಯು ಸರಕಾರದ ಮುಂದಿದ್ದು, ಈ ಹಿಂದಿನ ಬಜೆಟ್ಟಿನಲ್ಲಿ ಯೋಜನೆಗೆ ಅವಶ್ಯಕವಾದ ಹಣವನ್ನು ಮೀಸಲಿರಿಸಲಾಗಿಲ್ಲ ಎನ್ನುತ್ತಾರೆ ವೇಣು.
ಪಡಿತರ ಸಾಮಾಗ್ರಿಯಿಲ್ಲ:
ಟ್ರಾಲಿಂಗ್ ನಿಷೇಧದ ಸಮಯದಲ್ಲಿ ಸರಕಾರವು ಸಾಮಾನ್ಯವಾಗಿ ಪಡಿತರ ಸಾಮಾಗ್ರಿಗಳನ್ನು ವಿತರಿಸುತ್ತದೆ, ಮತ್ತು ಬೋಟ್ ಕಾಮರ್ಿಕರಿಗೆ ಅಕ್ಕಿಯನ್ನು ನೀಡುತ್ತದೆ. ಈ ಬಾರಿ ಅಕ್ಕಿಯ ಬದಲು ಹಣವನ್ನು ನೀಡಬೇಕೆಂದು ಸರಕಾರಿ ಅಧಿಕೃತರಲ್ಲಿ ಬೇಡಿಕೆಯಿರಿಸಿತ್ತು. ಜೂ.9 ರ ಟ್ರಾಲಿಂಗ್ ನಿಷೇಧದ ಒಂದು ವಾರ ಮುಂಚಿತವಾಗಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿಧರ್ಾರವನ್ನು ಕೈಗೊಳ್ಳಲಾಗಿತ್ತು. ಕಳೆದ ವರ್ಷ ಕಳಪೆ ಗುಣಮಟ್ಟದ ಅಕ್ಕಿ ವಿತರಣೆಯಾದ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಪಕ್ಷ ಪ್ರತಿನಿಧಿಗಳು ಮತ್ತು ವಿವಿಧ ಮೀನುಗಾರ ಒಕ್ಕೂಟಗಳು ಹಣ ನೀಡಬೇಕೆಂದು ಬೇಡಿಕೆಯಿಟ್ಟಿದ್ದವು. ಆದರೆ ಈ ಬಾರಿ ಹಣವು ಬಂದಿಲ್ಲ ಅಕ್ಕಿಯೂ ಇಲ್ಲ ಎನ್ನುತ್ತಾರೆ ಮೀನುಗಾರ ನಾರಾಯಣ.