ಕನಸುಕಾಣಲೂ ಸೂರಿಲ್ಲ-ಸೋರುವ ಮನೆಯಲ್ಲಿ ಉಪನ್ಯಾಸಕಿಯಾಗುವ ಕನಸು ಕಾಣುತ್ತಿರುವ ಪ್ರತಿಭಾವಂತೆ
ಕಾಸರಗೋಡು: ಭೂರಹಿತ ಹಾಗೂ ವಸತಿ ರಹಿತ ರಾಜ್ಯವನ್ನಾಗಿ ಕೇರಳವನ್ನು ಮಾಪರ್ಾಡುಗೊಳಿಸಲು ಸರಕಾರ ಮುಂದಾಗುತ್ತಿರುವಾಗ ಕಾಸರಗೋಡಿನ ಪ್ರತಿಭಾವಂತ ವಿದ್ಯಾಥರ್ಿನಿಯೋರ್ವಳಿಗೆ ಸೋರುವ ಮನೆಯಲ್ಲಿ ಜೀವನ. ಕಾಸರಗೋಡು ತಾಲೂಕಿನ ಚೆರ್ಕಳ ಪಂಚಾಯಿತಿನ ಪಾಡಿಯ ಮಹಾಬಲ ರೈ ಹಾಗೂ ಸುಮಿತ್ರ ದಂಪತಿಯ ಪುತ್ರಿ ಸರಿತ. ಈಕೆ ಕನ್ನಡ ಬಿಎ ಪದವೀಧರೆಯಾಗಿದ್ದು, ಕಣ್ಣೂರು ವಿಶ್ವವಿದ್ಯಾಲಯದ ಬಿಎ ಪದವಿ ಪರೀಕ್ಷೆಯಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾಳೆ. ಸ್ನಾತಕೋತ್ತರ ಪದವಿ ಪಡೆದು ಉನ್ನತ ವಿದ್ಯಾಭ್ಯಾಸ ಹೊಂದಿ ಉಪನ್ಯಾಸಕಿ ಆಗಬೇಕು ಎಂಬುದು ಈಕೆಯ ಕನಸು. ಆದರೆ ಮೂಲಭೂತ ಸೌಕರ್ಯಗಳಿಲ್ಲದ ಮನೆಯಲ್ಲಿ ಇವರದ್ದು ಸಂಕಷ್ಟದ ಬದುಕು.
ತಂದೆ ಮಾಡುವ ಕೃಷಿ ಹಾಗೂ ತಾಯಿ ಬೀಡಿ ಕಟ್ಟಿ ಲಭಿಸುವ ಸಂಪಾದನೆಯೇ ಇವರಿಗೆ ಏಕ ಆಶ್ರಯ. ಮೂವತ್ತು ವರ್ಷಕ್ಕಿಂತ ಹೆಚ್ಚು ಹಳೆಯ ಈ ಮನೆಯ ಗೋಡೆಯನ್ನು ಮಣ್ಣಿನಿಂದ ನಿಮರ್ಿಸಲಾಗಿದ್ದು, ಗೋಡೆ ಎಲ್ಲವೂ ಮಳೆನೀರಿಗೆ ಕರಗಿ ಜರಿದು ಬಿದ್ದಿದೆ. ಮನೆಯ ಮಾಡಿಗೆ ಪಕ್ಕಾಸುಗಳ್ಯಾವುದೂ ಇಲ್ಲ. ಮಾಡೇ ಒಂದು ಬದಿಗೆ ಜರಿದಂತಿದೆ. ಮಣ್ಣಿನಿಂದ ನಿಮರ್ಿಸಿದ ಗೋಡೆಯ ಮೇಲೆ ಸೋಗೆ ಹಾಸಿದ್ದು ಅದರ ಮೇಲೆ ಟರ್ಪಲ್ ಹಾಸಲಾಗಿದೆ. ಈ ಟರ್ಪಲ್ ಹಾಗೂ ಸೋಗೆಯನ್ನು ಪ್ರತಿ ಮಳೆಗಾಲ ಆರಂಭದ ಮುನ್ನ ಇವರು ಬದಲಾಯಿಸಬೇಕಾಗುತ್ತದೆ. ಆದರೂ ಸೋರುವ ಮಾಡಿಗೆ ಮಾತ್ರ ಪರಿಹಾರವಿಲ್ಲ. ಕಳೆದ ಎರಡು ಮೂರು ವಾರಗಳಿಂದ ನಿರಂತರ ಸುರಿಯುವ ಮಳೆಗೆ ಇವರು ಮನೆಯೊಳಗೆ ಕೊಡೆ ಬಿಡಿಸಿ ನಿಲ್ಲಬೇಕಾದ ಸ್ಥಿತಿ ಯಾರನ್ನೂ ಕಣ್ಣೀರಿಡುವಂತೆ ಮಾಡುತ್ತಿದೆ. ರಾತ್ರಿ ಹಗಲಿಡೀ ಮಳೆ ಬಂದರೆ ಸೋರುವ ಮನೆಯಲ್ಲಿ ಇವರಿಗೆ ನಿದ್ರೆ ಮಾಡಲು ವ್ಯವಸ್ಥೆಯಿಲ್ಲ. ಯಾವುದೇ ಕ್ಷಣದಲ್ಲಿ ಈ ಮನೆ ಸಂಪೂರ್ಣವಾಗಿ ಜರಿದು ಬೀಳುವ ಸ್ಥಿತಿಯಲ್ಲಿದೆ.
ಸವಿತ ಅವರ ಸಹೋದರಿಯ ವಿವಾಹಕ್ಕಾಗಿ ಇವರು ಬ್ಯಾಂಕ್ನಲ್ಲಿ ಮಾಡಿದ ಸಾಲ ತೀರಿಸಲು ಇದುವರೆಗೆ ಸಾಧ್ಯವಾಗಿಲ್ಲ. ಒಂದೂವರೆ ಲಕ್ಷ ರೂ. ಬ್ಯಾಂಕ್ ಸಾಲವಿದ್ದು ಇದಕ್ಕೆ ಪ್ರತಿವರ್ಷ 20000ರೂ. ಬಡ್ಡಿಯನ್ನು ಪಾವತಿಸಲು ಕೂಡಾ ಇವರು ತುಂಬಾ ಸಂಕಷ್ಟ ಪಡುವಂತಾಗಿದೆ.
ಎಲ್ಲರಿಗೂ ಶೌಚಾಲಯ ಒದಗಿಸಿರುವುದಾಗಿ ಆಡಳಿತಗಾರರು ಹೇಳುತ್ತಿರುವಾಗ ಸವಿತಾಳ ಕುಟುಂಬಕ್ಕೆ ಇದುವರೆಗೆ ಶೌಚಾಲಯ ಸೌಕರ್ಯವಿಲ್ಲ. ಕುಡಿಯುವನೀರಿಗಾಗಿ ಒಂದು ಬಾವಿ ಇದೆಯಾದರೂ ಬೇಸಗೆಯಲ್ಲಿ ಇದರ ನೀರು ಬತ್ತುತ್ತದೆ. ಬೇಸಗೆ ಬಂದರೆ ಸಮೀಪದ ಮನೆಯ ಕೊಳವೆಬಾವಿಯಿಂದ ನೀರು ತರಬೇಕಾದ ದುಸ್ಥಿತಿ.
ಸವಿತಾಳ ಕುಟುಂಬದ ದುಸ್ಥಿತಿಯನ್ನು ಮನಗಂಡು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಆಥರ್ಿಕವಾಗಿ ಹಿಂದುಳಿದ ಈ ಕುಟುಂಬಕ್ಕೆ ಪುಟ್ಟ ಮನೆ ನಿಮರ್ಿಸಿ ನೀಡಲು ಮುಂದಾಗಿದೆ. ಇವರಿಗೆ ಸಹಾಯ ಮಾಡಲು ಇಚ್ಛಿಸುವವರು ಕಾಲೇಜಿನ ಎನ್ಎಸ್ಎಸ್ ಘಟಕವನ್ನು ಅಥವಾ ಸರಿತಾ ಅವರನ್ನು ಸಂಪಕರ್ಿಸಬಹುದು.
ಯೂನಿಯನ್ ಬ್ಯಾಂಕ್ ಖಾತೆ ನಂಬ್ರ: 501002010008056
ಐಎಫ್ಎಸ್ಸಿ ಕೋಡ್: ಯುಬಿಐಎನ್ಒ550108.
ದೂರವಾಣಿ: 8281826847, 8921413474. 8078955347.