HEALTH TIPS

No title

             ಸಂಸ್ಕೃತಿಯ ಮೇಲಾಗುವ ಧಾಳಿಗಳು ಅಧೀರಗೊಳಿಸದೆ ಒಗ್ಗೂಡಿಸಲಿ-ಪ್ರೇಮಲತಾ ಎಲ್ಲೋಜಿ ರಾವ್ ಕೋಟೆಕಣಿ
                      ಸಿರಿಚಂದನದ ಯಕ್ಷನುಡಿಸರಣಿಯ ಮೂರನೇ ಕಾರ್ಯಕ್ರಮ ಬಳ್ಳಮೂಲೆಯಲ್ಲಿ ಉದ್ಘಾಟನೆ
   ಮುಳ್ಳೇರಿಯ: ಗಡಿನಾಡಿನಲ್ಲಿ ಕನ್ನಡದ ಬಗೆಗಿನ ಜಾಗೃತಿ ಯುವ ಸಮೂಹದಲ್ಲಿ ಹೆಚ್ಚು ಕ್ರಿಯಾತ್ಮಕವಾದಷ್ಟು ಪರಂಪರೆಯ ರಕ್ಷಣೆಯಾಗುವುದು. ಯುವ ತಲೆಮಾರಿಗೆ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿಯೂ ಇದೆ. ಈ ನಿಟ್ಟಿನಲ್ಲಿ ಸಂಘಟಿತರಾಗಿ ಕ್ರಿಯಾಶೀಲರಾಗಬೇಕು ಎಂದು ಕನ್ನಡ ಪರ ಚಟುವಟಿಕೆಗಳ ಪೋಷಕಿ ಪ್ರೇಮಲತಾ ಎಲ್ಲೋಜಿ ರಾವ್ ಕೋಟೆಕಣಿ ಅಭಿಪ್ರಾಯ ವ್ಯಕ್ತಪಡಿಸಿದರು.
   ಕಾಸರಗೋಡಿನ ಭಾಷೆ, ಸಂಸ್ಕೃತಿಗಳ ಉಳಿವು=ಬೆಳವಣಿಗೆ ಮತ್ತು ಪರಿಸರ ಸಂರಕ್ಷಣೆಯ ಚಟುವಟಿಕೆಗಳಲ್ಲಿ ಸೇವೆ ಸಲ್ಲಿಸುತ್ತಿರುವ "ಸಿರಿಚಂದನ ಕನ್ನಡ ಯುವ ಬಳಗ"ದ ಯಕ್ಷ ನುಡಿಸರಣಿ "ಮನೆಮನೆ ಅಭಿಯಾನ"ದ ನಾಲ್ಕನೇ ಯಶಸ್ವಿ ಕಾರ್ಯಕ್ರಮವನ್ನು ಕೋಟೂರಿನ ಯಕ್ಷತೂಣೀರ ಸಂಪ್ರತಿಷ್ಠಾನದ ಸಹಯೋಗದೊಂದಿಗೆ ಶನಿವಾರ ಬಳ್ಳಮೂಲೆ ಗೋವಿಂದ ಭಟ್ ರವರ ನಿವಾಸದಲ್ಲಿ ದೀಪ ಪ್ರಜ್ವಲನೆಗೈದು ಉದ್ಘಾಟಿಸಿ ಅವರು ಮಾತನಾಡಿದರು.
   ವ್ಯಕ್ತಿತ್ವ ರೂಪಿಸುವಲ್ಲಿ ನೆರವಾಗುವ ಮಾತೃಭಾಷೆ, ಮಾತೃಭೂಮಿಯ ಋಣವನ್ನು ಆಯಾ ಕ್ಷೇತ್ರಗಳಲ್ಲಿ ಸೇವೆಗೈಯ್ಯುವ ಮೂಲಕ ಜವಾಬ್ದಾರಿ ನಿರ್ವಹಿಸುವ ಹೊಣೆ ಎಲ್ಲರ ಮೇಲಿದೆ. ಗಡಿನಾಡಿನ ಕನ್ನಡ ಭಾಷೆ, ಸಂಸ್ಕೃತಿಯ ಮೇಲಾಗುವ ಧಾಳಿಗಳು ನಮ್ಮನ್ನೆಂದೂ ಅಧೀರಗೊಳಿಸದೆ ಒಗ್ಗಟ್ಟಿನಿಂದ ಮುನ್ನಡೆಯುವ ಮನೋಬಲ ಪ್ರತಿಯೊಬ್ಬರಲ್ಲೂ ಮೂಡಿಬರಬೇಕೆಂದು ತಿಳಿಸಿದ ಅವರು ಈ ಬಗೆಗಿನ ಜಾಗೃತಿಯನ್ನು ಕನ್ನಡ ಯುವ ಬಳಗ ನಡೆಸುತ್ತಿರುವುದು ಸ್ತುತ್ಯರ್ಹ ಎಂದು ತಿಳಿಸಿದರು.
   ಸಿರಿಚಂದನ ಕನ್ನಡ ಯುವ ಬಳಗದ ಜೊತೆ ಕಾರ್ಯದಶರ್ಿ ಸೌಮ್ಯಾ ಪಿ.ಎಸ್. ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಅಡ್ಕ ಗೋಪಾಲಕೃಷ್ಣ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ ಕನ್ನಡ ಭಾಷೆ, ಸಂಸ್ಕೃತಿಯ ಬೆಳವಣಿಗೆಯಲ್ಲಿ ಯಕ್ಷಗಾನದ ಪಾತ್ರ ಮಹತ್ತರವಾಗಿದ್ದು, ವಿವಿಧ ಮನೆ ಭಾಷೆಗಳ ಸಾಧಕರು ಕನ್ನಡದಲ್ಲಿ ಯಕ್ಷಗಾನವನ್ನು ಕಟ್ಟಿ ಬೆಳೆಸಿದ ಉಪಕ್ರಮಗಳು ನಮ್ಮಿದಿರಿಗೆ ನಿದರ್ಶನವಾಗಿದೆ ಎಂದು ತಿಳಿಸಿದರು. ಪ್ರಜ್ಞಾವಂತ ನಾಗರಿಕ ಸಮಾಜ ನಿಮರ್ಾಣವು ಯಕ್ಷಗಾನದಂತಹ ಮಹಾನ್ ಕಲೆಯ ಕೊಡುಗೆಯಾಗಿದ್ದು, ಜಾತಿ, ಮತ, ವಿಭಾಗಳಾಚೆ ಜನರನ್ನು ಪರಸ್ಪರ ಬೆಸೆಯುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
   ಹಿರಿಯ ರಂಗಕನರ್ಿ, ಸಂಘಟಕ ವಾಸು ಬಾಯಾರ್ ಉಪಸ್ಥಿತರಿದ್ದು ಮಾತನಾಡಿ, ಭಾಷಾ ಶುದ್ದತೆ, ಫ್ರೌಢಿಮೆಗಳಿಗೆ ದಾರಿದೀಪವಾಗಿ ಯಕ್ಷಗಾನ ಜನಸಾಮಾನ್ಯರನ್ನು ಕಟ್ಟಿ ಬೆಳೆಸಿದೆ. ಗಡಿನಾಡಿನ ಜನಮಾನಸದ ಒಗ್ಗಟ್ಟಿನ ಶಕ್ತಿಯಾಗಿ ಸಿರಿಚಂದನ ಯುವ ಬಳಗ ಜಾಗೃತಿ ಮೂಡಿಸುತ್ತಿರುವುದು ಹೆಮ್ಮೆ ತಂದಿದೆ ಎಂದು ತಿಳಿಸಿದರು.
  ಹಿರಿಯ ಯಕ್ಷಗಾನ ಕಲಾವಿದ, ಸಂಘಟಕ ಬಳ್ಳಮೂಲೆ ಗೋವಿಂದ ಭಟ್, ಕೋಟೂರಿನ ಯಕ್ಷತೂಣೀರ ಸಂಪ್ರತಿಷ್ಠಾನದ ಅಧ್ಯಕ್ಷ ಈಶ್ವರ ಭಟ್ ಬಳ್ಳಮೂಲೆ, ಕಾರ್ಯದಶರ್ಿ ಮುರಳೀಕೃಷ್ಣ ಸ್ಕಂದ ಕೋಟೂರು, ಯಕ್ಷಗಾನ ಗುರು ದಿವಾಣ ಶಿವಶಂಕರ ಭಟ್ ಉಪಸ್ಥಿತರಿದ್ದು ಮಾತನಾಡಿದರು. ಸಿರಿಚಂದನ ಕನ್ನಡ ಯುವ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಶೋಧನಾ ವಿದ್ಯಾಥರ್ಿ ಸುಜಿತ್ ಉಪ್ಪಳ ಈ ಸಂದರ್ಭ ಕಾಸರಗೊಡಿನ ಸಂಸ್ಕೃತಿ=ಪರಂಪರೆ=ಜಾಗೃತಿ ವಿಷಯದಲ್ಲಿ ವಿಶೇಷೋಪನ್ಯಾಸ ನೀಡಿದರು.
   ಕಾರ್ಯಕ್ರಮ ಸಂಯೋಜಕ ಅಜಿತ್ ಶೆಟ್ಟಿ ಬೋವಿಕ್ಕಾನ ಸ್ವಾಗತಿಸಿ, ಧನೇಶ್ ಯು. ಕೋಟೆಕಣಿ ವಂದಿಸಿದರು. ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಡಾ.ರತ್ನಾಕರ ಮಲ್ಲಮೂಲೆ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.
   ಬಳಿಕ ಬಳಗದ ಕಲಾವಿದರಿಂದ ವೃಕ್ಷ ಸಂರಕ್ಷಣ ಕಥಾ ಭಾಗದ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ತಲ್ಪನಾಜೆ ಶಿವಶಂಕರ ಭಟ್, ಈಶ್ವರ ಭಟ್ ಬಳ್ಳಮೂಲೆ, ಕೃಷ್ಣ ಭಟ್ ಅಡ್ಕ, ಶ್ರೀಸ್ಕಂದ ದಿವಾಣ ಹಾಗೂ ಮುಮ್ಮೇಳದಲ್ಲಿ ದಿವಾಣ ಶಿವಶಂಕರ ಭಟ್, ವೇಣುಗೋಪಾಲ ಶೇಣಿ, ಡಾ.ರತ್ನಾಕರ ಮಲ್ಲಮೂಲೆ, ವಸುಂಧರಾ ಹರೀಶ್, ಮಹೇಶ್ ಏತಡ್ಕ, ಮನೋಜ್ ಎಡನೀರು, ಶಶಿಧರ ಕುದಿಂಗಿಲ, ಮಣಿಕಂಠ ಪಾಂಡಿಬಯಲು, ಶ್ರದ್ದಾ ಭಟ್ ನಾಯರ್ಪಳ್ಳ ಸಹಕರಿಸಿದರು.

   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries