ಮವ್ವಾರು ಅಂಗನವಾಡಿಯಲ್ಲಿ ಬೀಳ್ಗೊಡುಗೆ ಸಮಾರಂಭ
ಬದಿಯಡ್ಕ : ಎಳವೆಯಲ್ಲಿಯೇ ಪುಟಾಣಿಗಳಿಗೆ ಸರಿಯಾದ ಸಂಸ್ಕಾರ ದೊರಕಿದರೆ ಅದು ಅವರ ಬದುಕಿನುದ್ದಕ್ಕೂ ಪ್ರಭಾವ ಬೀರುತ್ತದೆ. ಒಂದು ಸುಭದ್ರ ಕಟ್ಟಡಕ್ಕೆ ಪಂಚಾಂಗವು ಮೂಲಾಧಾರವಾಗಿರುವಂತೆ ಮನುಷ್ಯನಿಗೆ ಎಳವೆಯಲ್ಲಿ ಸಿಗುವ ಶಿಸ್ತು ಹಾಗೂ ಸಂಸ್ಕಾರ ಅವನ ಬದುಕಿನ ಮೂಲ ತಳಹದಿ ಎಂದು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ ನುಡಿದರು.
ಕುಂಬ್ಡಾಜೆ ಗ್ರಾಮದ ಮವ್ವಾರು ಅಂಗನವಾಡಿಯಲ್ಲಿ ಇತ್ತೀಚೆಗೆ ನಡೆದ ಪುಟಾಣಿಗಳ ಬೀಳ್ಗೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಭಾಗವಹಿಸಿ ಮಾತನಾಡುತ್ತಿದ್ದರು.
ಅಂಗನವಾಡಿಯ ಅಧ್ಯಾಪಿಕೆಯ ತ್ಯಾಗ ಸಹನೆ ಮತ್ತು ಪರಿಶ್ರಮ ಶಾಲೆ ಅಥವಾ ಕಾಲೇಜು ಅಧ್ಯಾಪಕರ ಸೇವೆಗಿಂತಲೂ ಮಹತ್ವದ್ದು. ಪುಟಾಣಿಗಳನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳಲು ಅಧ್ಯಾಪಿಕೆ ತಾಯಿಯಾಗಬೇಕಾಗುತ್ತದೆ. ಸುಮಾರು ನಲ್ವತ್ತು ಪುಟಾಣಿಗಳನ್ನು ಉತ್ತಮ ರೀತಿಯಲ್ಲಿ ನಿಭಾಯಿಸುವ ಅಂಗನವಾಡಿ ಅಧ್ಯಾಪಿಕೆ ಯಶೋದ ಟೀಚರ್ ಅವರ ಪರಿಶ್ರಮ ಅಭಿನಂದನಾರ್ಹ. ಮವ್ವಾರು ಪರಿಸರದ ಹಾಗೂ ಆಸುಪಾಸಿನ ಬಹುತೇಕ ಹೆತ್ತವರು ತಮ್ಮ ಮಗುವಿಗೆ ಮವ್ವಾರು ಅಂಗನವಾಡಿಯೇ ಆಗಬೇಕೆಂಬ ಅಭಿಲಾಷೆಯಿಂದಿರುವುದು ಇಲ್ಲಿ ಅಮ್ಮನ ಲಾಲನೆ ಆರೈಕೆಯಿರುವುದರಿಂದ. ಸೀಮಿತ ಸೌಕರ್ಯವಿದ್ದರೂ ಅಧ್ಯಾಪಿಕೆ ಮಕ್ಕಳ ಆರೈಕೆಯಲ್ಲಿ ಮತ್ತು ಅವರಿಗೆ ಭಾಷೆ ಹಾಗು ಸಂಸ್ಕಾರಗಳನ್ನು ಉಣಬಡಿಸುವುದರಲ್ಲಿ ಇತರರಿಗೆ ಮಾದರಿಯಾಗಿದ್ದಾರೆ. ಇದು ನಾಡಿಗೆ ಹೆಮ್ಮೆ ಮತ್ತು ಅಭಿಮಾನ ಎಂದು ಅವರು ತಿಳಿಸಿದರು.
ಅಂಗನವಾಡಿ ಶಿಕ್ಷಣ ಕಳೆದು ಶಾಲೆ ಸೇರಲಿರುವ ಪ್ರಣಮ್ಯ, ಗಗನ್ ದೀಪ್, ಕೀತರ್ೇಶ್, ಫಾತಿಮಾ, ಮಹಮ್ಮದ್ ಅಫ್ರಾನ್, ಅಹಮ್ಮದ್ ರಿಜ, ಭುವನ್, ಪೃಥ್ವೀರಾಜ್, ಪ್ರಣೀತಾ, ಭೂಷಣ್, ಯಶಸ್ವಿ, ಕಾಶ್ವಿ, ಫಝರುಲ್ ರಹಮಾನ್, ಫಾತಿಮತ್ ಶಹದ, ದಿಲ್ಶ, ಆಕಾಂಕ್ಷ ಪುಟಾಣಿಗಳಿಗೆ ಈ ಸಂದರ್ಭದಲ್ಲಿ ಶಿಕ್ಷಣ ಪರಿಕರಗಳನ್ನು ನೀಡಿ ಬೀಳ್ಕೊಡಲಾಯಿತು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಕುಂಬ್ಡಾಜೆ ಪಂಚಾಯತಿನ ಸದಸ್ಯೆ ನಳಿನಿ ಕೃಷ್ಣನ್ ವಹಿಸಿದ್ದರು. ನಿವೃತ್ತ ಅಧ್ಯಾಪಿಕೆ ಪಾರ್ವತಿ ಟೀಚರ್, ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್ ಉದ್ಯೋಗಿ ರಾಜೇಂದ್ರ ಮಣಿಯಾಣಿ ಈ ಸಂದರ್ಭದಲ್ಲಿ ಮಾತನಾಡಿದರು.
ಪುಟಾಣಿಗಳ ಹೆತ್ತವರಾದ ಶ್ರೀವಿದ್ಯಾ, ಭಾರತಿ, ಅನುರಾಧಾ, ಚಂದ್ರಕಲಾ, ಪೌಸಿಯಾ, ತಾಹಿರಾ, ಮಿಸ್ರಿಯಾ, ಸೆಬಿತಾ, ಶ್ಯಾಮಲಾ, ಮಮತಾ, ರಾಗಿಣಿ, ಸುನಂದಾ, ಸೌಮ್ಯಲತಾ, ರಮೇಶ ಭಟ್, ಸುನೀತಾ, ಸೌಮ್ಯಾ, ಮೀನಾಕ್ಷಿ, ನಿಶಾ, ಹಾಗೂ ಅಂಗನವಾಡಿ ಸಹಾಯಕಿ ಪುಷ್ಪಲತಾ ಉಪಸ್ಥಿತರಿದ್ದರು. ಅಂಗನವಾಡಿ ಶಿಕ್ಷಕಿ ಯಶೋದ ಟೀಚರ್ ಸ್ವಾಗತಿಸಿ, ಆಶಾ ಕಾರ್ಯಕತರ್ೆ ಸುಲೋಚನಾ ವಂದಿಸಿದರು.