HEALTH TIPS

No title

                 ಎಣ್ಮಕಜೆ ಹವ್ಯಕ ವಲಯ ಸಭೆ- ಗೌರವಾರ್ಪಣೆ
    ಪೆರ್ಲ:  ಮುಳ್ಳೇರಿಯ ಮಂಡಲಾಂತರ್ಗತ ಎಣ್ಮಕಜೆ ವಲಯದ ಜೂನ್ ತಿಂಗಳ ವಲಯ ಸಭೆ ಮುಳಿಯಾಲ ಘಟಕದ ಗುರಿಕ್ಕಾರ ಸೀತಾರಾಮ ಭಟ್ ರವರ  ಮನೆಯಲ್ಲಿ ಇತ್ತೀಚೆಗೆ ನಡೆಯಿತು. ಧ್ವಜಾರೋಹಣ-ಶಂಖನಾದ-ಗುರುವಂದನೆ-ಗೋವಂದನೆಯೊಂದಿಗೆ ಆರಂಭವಾದ ಸಭೆಯ ಅಧ್ಯಕ್ಷತೆ ವಲಯ ಅಧ್ಯಕ್ಷ ಶಿವ ಪ್ರಸಾದ ವಮರ್ುಡಿ ವಹಿಸಿದ್ದರು.
  ಗೋ-ಸ್ವರ್ಗ, ಶ್ರೀ ಚಂದ್ರಮೌಳೀಶ್ವರ ದೇವಾಲಯದ ಧೃಢಕಲಶ, ಮುಷ್ಟಿ ಭಿಕ್ಷೆ,ವೃತ್ತಿಪರ, ಜೀವಿಕಾ ವಿಭಾಗಗಳ ವಿವರಗಳೊಂದಿಗೆ ಸಭೆಯಲ್ಲಿ ಖಖಐಅ ಹಾಗೂ ಕಗಅ ಗಳ ಪರೀಕ್ಷೆಗಳಲ್ಲಿ ಉನ್ನತ ಅಂಕ ಗಳಿಸಿದ ವಲಯದ ವಿದ್ಯಾಥರ್ಿ-ವಿದ್ಯಾಥರ್ಿನಿಯರನ್ನು ಗುರುತಿಸುವ ಕಾರ್ಯಕ್ರಮ ನಡೆಯಿತು.
    ಮಂಡಲ ಅಧ್ಯಕ್ಷ ಪ್ರೋ|ಶ್ರೀಕೃಷ್ಣ ಭಟ್, ಮಂಡಲ ಕಾರ್ಯದಶರ್ಿ ಶ್ರೀ ಸರ್ಪಮಲೆ ಬಾಲಸುಬ್ರಹ್ಮಣ್ಯ, ಮಂಡಲ ಗುರಿಕ್ಕಾರ ಶ್ರೀ ಸತ್ಯನಾರಾಯಣ ಮೊಗ್ರ, ಮಂಡಲ ಮಾತೃ ಪ್ರಧಾನೆ ಶ್ರೀಮತಿ ಕುಸುಮ ಪೆಮರ್ುಖ ಹಾಗೂ ಮಂಡಲ ವೈದಿಕ ಪ್ರಧಾನ ಶ್ರೀ ಗಣೇಶ ಮಾಡಾವು ಉಪಸ್ಥಿತರಿದ್ದರು. ವಲಯದ ಕಾರ್ಯಗಳ ಬಗ್ಗೆ ಸಲಹೆ ಸೂಚನೆಗಳು ಹಾಗೂ ಮಾಹಿತಿ ನೀಡಲಾಯಿತು.
   ಸಭೆಯಲ್ಲಿ ವಿಶೇಷ ಕಾರ್ಯಕ್ರಮವಾಗಿ ಪ್ರಸ್ತುತ ಹದಿನಾಲ್ಕನೇ ಬಾರಿಗೆ ಶ್ರೀ ವಾಲ್ಮೀಕೀ ರಾಮಾಯಣ ಪಾರಾಯಣಗೈಯುತ್ತಿರುವ ಎಣ್ಮಕಜೆ ವಲಯ ಕೋಶಾಧಿಕಾರಿಗಳೂ, ಕಾಟುಕುಕ್ಕೆ ಘಟಕದ  ಗುರಿಕ್ಕಾರರೂ ಆಗಿರುವ ಬಿ.ವಿ.ನಾರಾಯಣ ಭಟ್ಟರನ್ನು ಅವರ ಶ್ರೀಮತಿ ಶೈಲಾ ಯನ್.ಭಟ್ಟರೊಡಗೂಡಿ ಗೌರವಿಸುವ ಕಾರ್ಯಕ್ರಮ ನಡೆಯಿತು. ವೇದ ಮಂತ್ರ ಸಹಿತ ಆಶೀರ್ವಚನದೊಂದಿಗೆ ವೇದಮೂತರ್ಿ  ಕೂಟೇಲು ತಿರುಮಲೇಶ್ವರ ಭಟ್ಟರು ಶಾಲು ಹೊದೆಸಿ ಗೌರವಿಸಿದರು. ಸ್ಮರಣಿಕೆ-ಫಲ ತಾಂಬೂಲ-ರಾಮಟಂಕೆ-ಗವ್ಯ ಉತ್ಪನ್ನ-ಅರಶಿನ ಕುಂಕುಮ-ಸೀರೆ ನೀಡಿ ಪ್ರೋ.ಶ್ರೀಕೃಷ್ಣ ಭಟ್, ಸತ್ಯನಾರಾಯಣ ಮೊಗ್ರ, ಬಾಲಸುಬ್ರಹ್ಮಣ್ಯ ಸರ್ಪಮಲೆ, ಗಣೇಶ ಮಾಡಾವು,ಶಿವಪ್ರಸಾದ ವಮರ್ುಡಿ, ಕುಸುಮ ಪೆಮರ್ುಖ ಇವರು ಗೌರವಿಸಿದರು.
  ಗೌರವಾರ್ಪಣೆಗೆ ಸ್ವೀಕರಿಸಿ ಮಾತನಾಡಿದ  ನಾರಾಯಣ ಭಟ್ಟರು ಪ್ರತಿಫಲಾಪೇಕ್ಷೆಯಿಲ್ಲದೆ ಸೇವೆ ಮಾಡಬೇಕು.ಮಾಡಿದ ಸೇವೆಗೆ ಶ್ರೀರಾಮನೇ ಪ್ರತಿಫಲ ನೀಡುತ್ತಾನೆ. ಎಲ್ಲರ ಶುಭಹಾರೈಕೆಗಳಿಂದ ಈ ಪಾರಾಯಣ ಮಾಡಲು ಸಾಧ್ಯವಾಯಿತು. ಗೌರವಿಸಿದ ಎಲ್ಲರಿಗೂ ನಾನು ಹಾಗೂ ನನ್ನ ಮನೆಯವರು ಕೃತಜ್ಞರಾಗಿದ್ದೇವೆ ಎಂದರು.
   ಶಂಕರ ಪ್ರಸಾದ್ ಕುಂಚಿಡ್ಕ ವರದಿ ಮಂಡನೆ ಮಾಡಿ ಕಾರ್ಯಕ್ರಮ ನಿರೂಪಣೆ ಮಾಡಿದರು.
ವಾಸುದೇವ ಸ್ಮರಣೆ-ರಾಮತಾರಕ ಮಂತ್ರ-ಶಾಂತಿ ಮಂತ್ರ-ಧ್ವಜಾವರೋಹಣ-ಶಂಖನಾದದೊಂದಿಗೆ ಸಭೆ ಮುಕ್ತಾಯವಾಯಿತು

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries