HEALTH TIPS

No title

            ಸುದೆಂಬಳದ ಬಡ ಬ್ರಾಹ್ಮಣ  ಕುಟುಂಬಕ್ಕೆ ಬೇಕಿದೆ ಸೂಕ್ತ ಆವಾಸ
    ಉಪ್ಪಳ: ಆಥರ್ಿಕವಾಗಿ ಹಿಂದುಳಿದ ಜನಸಾಮಾನ್ಯರ ಅಭ್ಯುದಯಕ್ಕೆ ಸರಕಾರದ ಹತ್ತು ಹಲವು ಯೋಜನೆಗಳಿದ್ದರೂ ಅರ್ಹ ವ್ಯಕ್ತಿಗಳಿಗೆ ತಲುಪುತ್ತಿಲ್ಲ ಎಂಬುದು ಕೆಲವೊಮ್ಮೆ ನಿಜವಾಗುತ್ತದೆ. ಮಂಜೇಶ್ವರ ತಾಲೂಕಿನ ಹಳ್ಳಿ ಪ್ರದೇಶದಲ್ಲಿರುವ ಆಥರ್ಿಕವಾಗಿ ಹಿಂದುಳಿದ ಬ್ರಾಹ್ಮಣ ಕುಟುಂಬವೊಂದು ಹಲವು ವರ್ಷಗಳಿಂದ ಸೂಕ್ತ ಸೂರಿಲ್ಲದೆ ಬಳಲಿದೆ.  ಕಳೆದ ಮೂರು ದಶಕಗಳಿಂದ ಸಮೀಪದ ಹೊಟೆಲುಗಳಲ್ಲಿ ಮಾಣಿಯಾಗಿ, ಅಡುಗೆಭಟನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮನೆ ಯಜಮಾನ ಪ್ರಸ್ತುತ ಅನಾರೋಗ್ಯ ಪೀಡಿತನಾಗಿ ಮಲಗಿದ್ದಾನೆ. ಇಂದೋ ನಾಳೆಯೋ ಧರಾಶಾಯಿಯಾಗುವಂತಿರುವ ಮನೆಯಲ್ಲಿ ಪತ್ನಿ ಸಹಿತ ಇಬ್ಬರು ಮಕ್ಕಳ ವಾಸ. ಹಂಚಿನ ಮೇಲ್ಛಾವಣಿಯಾಗಿದ್ದರೂ  ಮಣ್ಣಿನಗೋಡೆಯಿಂದ ಕಟ್ಟಲ್ಪಟ್ಟ ಕನಿಯಾಲ ಸಮೀಪದ ಸುದೆಂಬಳ ಶ್ರೀನಿವಾಸ ಭಟ್ಟರ ಮನೆ ರೀಪು, ಪಕ್ಕಾಸುಗಳು ಶಿಥಿಲಗೊಂಡ ಪರಿಣಾಮ ಹೆಂಚುಗಳು ನೆಲಕ್ಕಚ್ಚಿವೆ. ಬಿರುಸಿನ ಮುಂಗಾರು ಸಮಯ ಗಾಳಿ ಮಳೆಗೆ 23 ವರ್ಷ ಹಳೆಯದಾದ ಮನೆ ಮಣ್ಣಿನಗೋಡೆ ನೀರು ಪಾಲಾಗುತ್ತಿದೆ. ಈ ಕುಟುಂಬಕ್ಕೆ ಹೇಳಿಕೊಳ್ಳುವುದಕ್ಕೆ 90 ಸೆಂಟ್ಸ್ ಸ್ಥಳವಿದ್ದರೂ, ಇಳಿಜಾರಿನ ಬೋಳುಗುಡ್ಡೆಯಾದ ಕಾರಣ ಬಡವನ ಬಂಧು ಎನ್ನಬಹುದಾದ ಗೇರು ಕೃಷಿಗೂ ಯೋಗ್ಯವಲ್ಲದಂತಾಗಿದೆ.
   ಕೇಂದ್ರ ಮತ್ತುರಾಜ್ಯ ಸರಕಾರಗಳು ಆಥರ್ಿಕವಾಗಿ ಹಿಂದುಳಿದ ಮಂದಿಯ ಅಭ್ಯುದಯಕ್ಕೆ ಹತ್ತು ಹಲವು ಯೋಜನೆಗಳನ್ನು ರೂಪಿಸುತ್ತವೆ. ಆದರೆ ಬಡತನರೇಖೆಗಿಂತ ಕೆಳಗಿರುವ ಭಟ್ಟರಿಗೆ ದಶಕದಿಂದ ಮನೆ ದುರಸ್ಥಿಗಾಗಲಿ, ಹೊಸ ಮನೆ ನಿಮರ್ಾಣಕ್ಕಾಗಲಿ ಯಾವುದೇ ಸವಲತ್ತು ಸ್ಥಳೀಯಾಡಳಿತಗಳಿಂದ ಲಭಿಸಿಲ್ಲ. ಹಲವು ಬಾರಿಅಜರ್ಿ ಸಲ್ಲಿಸಿದ್ದರೂ ಭಟ್ಟರಿಗೆ ಸೂಕ್ತ ಸ್ಪಂದನೆದೊರೆತಿಲ್ಲ.

    ಇತ್ತೀಚೆಗೆ ಬಿಪಿಎಲ್ ಕಾಡರ್್ ಅರ್ಹತೆ:
   ಹಲವು ವರ್ಷಗಳಿಂದ ಬಡತನದ ಬೇಗೆಯಲ್ಲಿರುವ ಶ್ರೀನಿವಾಸ ಭಟ್ಟರಕುಟುಂಬವನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಬಡತನರೇಖೆಗಿಂತ ಕೆಳ ಎಂದು ನಮೂದಿಸಲಾಗಿದೆ. ತಿಂಗಳ ಹಿಂದೆ ಹೊಸ ರೇಶನ್ಕಾಡರ್್ ಈ ಕುಟುಂಬಕ್ಕೆ ಲಭ್ಯವಾಗಿದ್ದುಇದೊಂದು ಬಾಳಿಗೆ ಆಶಾಕಿರಣವಾದಂತಾಗಿದೆಎನ್ನುತ್ತಾರೆ ಭಟ್ಟರ ಪತ್ನಿ ಪುಷ್ಪಾ.
ಈ ಹಿಂದೆ ಎಪಿಎಲ್ ಕಾಡರ್ು ತಮ್ಮದಾಗಿತ್ತು ಆದರೆ ಯಾವುದೇ ಅನುಕೂಲತೆಗಳು ಲಭಿಸುತ್ತಿರಲಿಲ್ಲ ಎನ್ನುತ್ತಾರೆ.
    ಪುತ್ರನ ಮಿತ್ರರಿಂದ ಆಸರೆ:
   ತನ್ನ ಸಣ್ಣದುಡಿಮೆಯಲ್ಲಿ ಕೂಡಿಟ್ಟ ಹಣ ಸಹಿತ ಮಿತ್ರರ ಸಹಕಾರದೊಂದಿಗೆ ಭಟ್ಟರ ಪುತ ್ರಗಣೇಶ ತನ್ನ ಮಿತ್ರರೊಡಗೂಡಿ ಮಳೆಗಾಲದ ಅಪಾಯವನ್ನು ತಪ್ಪಿಸಿದ್ದಾನೆ. ಶ್ರೀನಿವಾಸ ಭಟ್ಟರ ದುರವಸ್ಥೆ ಕಂಡ ಪುತ್ರನ ಮಿತ್ರರು ಮನೆಯ ಹೊರಾವರಣದಲ್ಲಿ ಕಬ್ಬಿಣದ ಪೈಪ್ ಅಳವಡಿಸಿ, ಸಿಮೆಂಟ್ ಶೀಟುಗಳ ಮೇಲ್ಛಾವಣಿ ನಿಮರ್ಿಸಿದ್ದಾರೆ. ಸಮೀಪದ ವಾಟೆತ್ತಿಲ ಮನೆಯ ಸಹೋದರರು ತಕ್ಕ ಮಟ್ಟಿನ ಆಥರ್ಿಕ ಸಹಾಯಹಸ್ತ ಚಾಚಿದ್ದು, ಮೇಲ್ಛಾವಣಿ ನಿಮರ್ಾಣದ ಕೆಲಸವನ್ನುಉಚಿತವಾಗಿ ಮಾಡಿಸಿಕೊಟ್ಟಿದ್ದಾರೆ.ಮಳೆಗಾಲದಲ್ಲಿ ಮನೆ ಸೋರುವಿಕೆ ಸಹಿತ ಭಯಾತಂಕವನ್ನು ತಾತ್ಕಾಲಿಕ ವ್ಯವಸ್ಥೆಯ ಮೂಲಕ ಪರಿಹರಿಸಲಾಗಿದೆ.
         ಏನಂತಾರೆ:
    ಲೈಫ್ ಯೋಜನೆಯಡಿ ಫಲಾನುಭವಿಗಳ ಎರಡು ಲಿಸ್ಟ್ಗಳು ಗ್ರಾ.ಪಂ ಮೂಲಕ ಸಿದ್ಧವಾಗಿವೆ. ಲೈಫ್ ಲಿಸ್ಟ್ನಲ್ಲಿ ಒಳಗೊಂಡಲ್ಲಿ ಇವರಿಗೆ ಹೊಸ ಮನೆ ನಿಮರ್ಾಣಕಾರ್ಯ ಚಟುವಟಿಕೆಗಳು ಕೂಡಲೇ ನಡೆಯಲಿದೆ. ಫಲಾನುಭವಿ ಪಟ್ಟಿಯಲ್ಲಿರದಿದ್ದಲ್ಲಿ ಜಿಲ್ಲಾಧಿಕಾರಿಗಳಲ್ಲಿ ವಿನಂತಿಸಿ, ವಸ್ತುಸ್ಥಿತಿಯ ಮನವರಿಕೆ ಮಾಡಿ ಲೈಫ್ ಯೋಜನೆಯೊಳಗೆ ಸೇರಿಸಿ ಮನೆ ನಿಮರ್ಾಣಕ್ಕೆ ಸಹಕರಿಸಲಾಗುವುದು.
         ಭಾರತಿ.ಜೆ. ಶೆಟ್ಟಿ
    ಸ್ಥಳೀಯ ಪೈವಳಿಕೆ ಗ್ರಾ.ಪಂ ಅಧ್ಯಕ್ಷರು.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries