`ಸಂಪಕರ್್ ಸೇ ಸಮರ್ಥನ್'-ಮಂಡಲ ಮಟ್ಟದ ಉದ್ಘಾಟನೆ
ಬದಿಯಡ್ಕ : ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸಕರ್ಾರ ನಾಲ್ಕು ವರ್ಷ ಪೂರ್ಣಗೊಳಿಸಿದ ಸಂದರ್ಭದಲ್ಲಿ `ಸಂಪಕರ್್ ಸೇ ಸಮರ್ಥನ್' ಕಾಸರಗೋಡು ಮಂಡಲ ವ್ಯಾಪ್ತಿಯ ಉದ್ಘಾಟನೆಯು ಸೋಮವಾರ ಕನ್ನಡ ಕವಿ, ನಾಡೋಜ ದಿ. ಕಯ್ಯಾರ ಕಿಂಞ್ಞಣ್ಣ ರೈಯವರ ಮನೆಯಲ್ಲಿ ನಡೆಯಿತು.
ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಅವರು ಕಿರುಹೊತ್ತಗೆಯನ್ನು ಕಯ್ಯಾರರ ಪುತ್ರ ಪ್ರದೀಪ್ ಕುಮಾರ್ ರೈಯವರಿಗೆ ನೀಡಿ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ಪ್ರತಿಯೊಂದು ಕ್ಷೇತ್ರದಲ್ಲಿಯೂ ರಾಷ್ಟ್ರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ. ಭ್ರಷ್ಟಾಚಾರ ಮುಕ್ತ ಸರಕಾರವಾಗಿದ್ದು, 3 ಕೋಟಿಗಳಷ್ಟು ಇದ್ದ ಬ್ಯಾಂಕ್ ಖಾತೆಯನ್ನು `ಜನ್ ಧನ್' ಮೂಲಕ 28 ಕೋಟಿಗೆ ಹೆಚ್ಚಿಸಲಾಗಿದ್ದು, ಪ್ರತಿಯೊಂದು ಮನೆಯಿಂದಲೂ ಬ್ಯಾಂಕ್ ಖಾತೆ ತೆರೆಸಲಾಗಿದೆ. ತನ್ಮೂಲಕ ಸರಕಾರದಿಂದ ಲಭಿಸುವ ಸಹಾಯಧನಗಳು ನೇರವಾಗಿ ಗ್ರಾಹಕನಿಗೇ ಲಭಿಸುವಂತಾಗಿದೆ. ಪ್ರಧಾನಮಂತ್ರಿ ಸುರಕ್ಷಾ ಭಿಮಾ ಯೋಜನೆ, ಅಟಲ್ ಪೆನ್ಶನ್ ಯೋಜನೆಯ ಫಲ ಜನತೆಗೆ ಲಭಿಸಿದೆ. `ಗ್ರಾಮೀಣ ಜ್ಯೋತಿ' ಯೋಜನೆಯಲ್ಲಿ 18,262 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಮೋದಿಯವರಿಂದಾಗಿ `ಯೋಗ'ಕ್ಕೆ ವಿಶ್ವದಲ್ಲಿ ಸಿಗುವ ಮನ್ನಣೆಯಿಂದ ಭಾರತ ಎತ್ತರಕ್ಕೇರಲ್ಪಟ್ಟಿದೆ. ಭಾರತವು ಆಥರ್ಿಕವಾಗಿ ಸದೃಢವಾಗುತ್ತಿದ್ದು ವಿಶ್ವದಲ್ಲೇ ಪ್ರಬಲ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕಯ್ಯಾರರ ಪುತ್ರ ಪ್ರದೀಪ್ ರೈ ಮಾತನಾಡಿ, ನೀರಿಂಗಿಸುವ ಬಗ್ಗೆ ಸರಕಾರಗಳು ಕಾಳಜಿ ವಹಿಸಬೇಕು, ಉಚಿತವಾಗಿ ಸಿಗುವಂತಹ ಸರಕಾರದ ಸವಲತ್ತುಗಳನ್ನು ದುರುಪಯೋಗ ಮಾಡಬಾರದು ಎಂದು ತಮ್ಮ ಅಭಿಪ್ರಾಯವನ್ನು ಮಂಡಿಸಿ, ಮೋದಿ ಸರಕಾರದ ನಡೆಯಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯ ಸಮಿತಿ ಸದಸ್ಯರುಗಳಾದ ರವೀಶತಂತ್ರಿ ಕುಂಟಾರು, ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಕಾಸರಗೋಡು ಮಂಡಲಾಧ್ಯಕ್ಷ ಸುಧಾಮ ಗೋಸಾಡ, ಮಂಡಲ ಪ್ರ.ಕಾರ್ಯದಶರ್ಿ ಸುಕುಮಾರ ಕುದ್ರೆಪ್ಪಾಡಿ, ಯುವಮೋಛರ್ಾ ಮಂಡಲಾಧ್ಯಕ್ಷ ಅವಿನಾಶ್ ರೈ, ಬದಿಯಡ್ಕ ಗ್ರಾಮಪಂಚಾಯತ್ ಸದಸ್ಯರುಗಳಾದ ವಿಶ್ವನಾಥ ಪ್ರಭು ಕರಿಂಬಿಲ, ಬಾಲಕೃಷ್ಣ ಶೆಟ್ಟಿ ಕಡಾರು, ಡಿ. ಶಂಕರ ಉಪಸ್ಥಿತರಿದ್ದರು.